ಬೆಂಗಳೂರು, ಎ.7: ಆದಿತ್ಯ ಧರ್ ನಿರ್ದೇಶನದ, ನಟ ರಣವೀರ್ ಸಿಂಗ್ ನಟನೆಯ ’ಧುರಂಧರ್-2 ʼ(Dhurandhar 2) ಚಿತ್ರ ಭರ್ಜರಿ ಯಶಸ್ಸು ಗಳಿಸುತ್ತಿದೆ. ಮಾತ್ರವಲ್ಲ, ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಸದ್ದು ಮಾಡಿದೆ. ಸದ್ಯ ಗಳಿಕೆಯಲ್ಲಿ ಭಾರತದ ಮಾರುಕಟ್ಟೆಯೊಂದರಲ್ಲೇ ಬರೋಬ್ಬರಿ ₹ 985 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಚಿತ್ರ, ಸಾವಿರ ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಈ ಸಿನೆಮಾದ ವಿಮರ್ಶೆ ಮಾಡಿದ್ದು, ನಟ ರಣವೀರ್ ಸಿಂಗ್‌ಗೆ(Ranveer Singh) ಮಹತ್ವದ ಸಂದೇಶ ನೀಡಿದ್ದಾರೆ.
"ಸಿನೆಮಾವನ್ನು ನೋಡಿದೆ ಮತ್ತು ಭಾರತದಲ್ಲಿ ತಯಾರಿಸಿದ ಇಂತಹ ಸಿನಿಮೀಯ ಅನುಭವವನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಲು ಧೈರ್ಯ ಮಾಡುತ್ತೇನೆ. ಇದು ಎಲ್ಲಾ ರೀತಿಯ ಭಾವನೆಗಳನ್ನು ಮೇಲ್ಮೈಗೆ ತಂದಿತು ಮತ್ತು ಸುಮಾರು 4 ಗಂಟೆಗಳ ಕಾಲ ನಾನು ಒಮ್ಮೆಯೂ ಹಿಂಜರಿಯಲಿಲ್ಲ. ಆದಿತ್ಯ ಧರ್ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯವು ನೀವು ರಚಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ನೀವು ಒಬ್ಬ ಪ್ರತಿಭೆ. ಮತ್ತು ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿದ್ದರೂ ರಣವೀರ್ ಸಿಂಗ್ ಈ ಚಿತ್ರದ ನಂತರ ನೀವು ವಿಭಿನ್ನ ಮಟ್ಟವನ್ನು ತಲುಪಿದ್ದೀರಿ ಮತ್ತು ನಿಮ್ಮ ಅಭಿನಯ ಅದ್ಭುತವಾಗಿದೆ. ಖಂಡಿತ ವಾವ್," ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೆಚ್ಚುಗೆಯ ಪೋಸ್ಟ್ ಮಾಡಿದ್ದಾರೆ.
ಧುರಂಧರ್–2 ಸಿನಿಮಾವು ಮೊದಲ ದಿನ ಭಾರತದಲ್ಲಿ ₹102 ಕೋಟಿ ಗಳಿಸಿತ್ತು. ಎರಡನೇ ದಿನ ₹80.72 ಕೋಟಿ ಗಳಿಸಿತ್ತು. ಮಾರ್ಚ್ 18 ರಂದು ಧುರಂಧರ್–2 ಸಿನಿಮಾವು ಬಿಡುಗಡೆ ಪೂರ್ವ ವೀಕ್ಷಣೆ ಆರಂಭಿಸಿತ್ತು. ಸಕ್ನಿಲ್ಕ್ ವೆಬ್‌ಸೈಟ್ ಪ್ರಕಾರ, ತಾಂತ್ರಿಕ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನದ ಕಾಣಲಿಲ್ಲ. ಅದರ ಹೊರತಾಗಿಯೂ ₹43 ಕೋಟಿ ಗಳಿಕೆ ಕಂಡಿತ್ತು.
ಅಡ್ವಾನ್ಸ್ ಬುಕಿಂಗ್‌ನಲ್ಲೇ 15 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದವು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹಾಗೂ ಸಿನಿಮಾ ರಂಗದ ಪ್ರಮುಖರು ಧುರಂಧರ್–2ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲು ಬಲವಾದ ಕಾರಣ ಇಲ್ಲಿದೆ!
ಈ ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.