ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಜಯ್ ಹಜಾರೆ; ಕೊಹ್ಲಿ ಅರ್ಧಶತಕ, ರೋಹಿತ್‌ ಶರ್ಮ 'ಗೋಲ್ಡನ್ ಡಕ್'

Vijay Hazare Trophy: ‘ಎ’ ಗುಂಪಿನಲ್ಲಿರುವ ಕರ್ನಾಟಕ, ತನ್ನ 2ನೇ ಪಂದ್ಯದಲ್ಲಿ ಕೇರಳ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತು. ಕೆ.ಎಲ್‌ ರಾಹುಲ್‌ ಈ ಪಂದ್ಯದಿಂದಲೂ ಹೊರಗುಳಿದರು. ಕೇರಳ ಪರ ಸಂಜು ಸ್ಯಾಮ್ಸನ್‌ ಕೂಡ ಕಣಕ್ಕಿಳಿಯಲಿಲ್ಲ.

Virat Kohli

ಬೆಂಗಳೂರು, ಡಿ.26: ವಿಜಯ್‌ ಹಜಾರೆ ಟ್ರೋಫಿ(Vijay Hazare Trophy)ಯ ತನ್ನ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ(Virat Kohli) ಅರ್ಧಶತಕ ಬಾರಿಸಿದರೆ, ರೋಹಿತ್‌ ಶರ್ಮ(Rohit Sharma) ಗೋಲ್ಡಕ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಶುಕ್ರವಾರ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ 1 ರಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 77 ರನ್ ಗಳಿಸಿದರು. ಕಳೆದ ಆಂಧ್ರ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದರು.

ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಆಡಲಿಳಿದ ರೋಹಿತ್‌ ಮೊದಲ ಎಸೆತದಲ್ಲೇ ಕ್ಯಾಚ್‌ ನೀಡಿ ಗೋಲ್ಡನ್‌ ಡಕ್‌ ಆಗಿ ಪೆವಿಲಿಯನ್‌ ಸೇರಿದರು. ದೇವೇಂದ್ರ ಸಿಂಗ್ ಬೋರಾ ಈ ವಿಕೆಟ್‌ ಕಿತ್ತರು. ಕಳೆದ ಸಿಕ್ಕಿಂ ಎದುರಿನ ಪಂದ್ಯದಲ್ಲಿ ರೋಹಿತ್‌ 155 ರನ್‌ ಬಾರಿಸಿ ಮಿಂಚಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಶೂನ್ಯಕ್ಕೆ ಔಟಾಗುವ ಮೂಲಕ ನಿರೀಕ್ಷೆ ಹುಸಿಯಾಯಿತು.

ಇದನ್ನೂ ಓದಿ ಎರಡನೇ ಪಂದ್ಯಕ್ಕೆ ವೈಭವ್‌ ಸೂರ್ಯವಂಶಿ ಅಲಭ್ಯ! ಇದಕ್ಕೆ ಕಾರಣವೇನು?

‘ಎ’ ಗುಂಪಿನಲ್ಲಿರುವ ಕರ್ನಾಟಕ, ತನ್ನ 2ನೇ ಪಂದ್ಯದಲ್ಲಿ ಕೇರಳ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತು. ಕೆ.ಎಲ್‌ ರಾಹುಲ್‌ ಈ ಪಂದ್ಯದಿಂದಲೂ ಹೊರಗುಳಿದರು. ಕೇರಳ ಪರ ಸಂಜು ಸ್ಯಾಮ್ಸನ್‌ ಕೂಡ ಕಣಕ್ಕಿಳಿಯಲಿಲ್ಲ. ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಜಾರ್ಖಂಡ್‌ ವಿರುದ್ಧ 413 ರನ್‌ಗಳ ದಾಖಲೆ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದೀಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಬಿಸಿಸಿಐ ಕನಿಷ್ಠ 2 ಪಂದ್ಯವನ್ನಾಡಬೇಕು ಎಂದು ರಾಷ್ಟ್ರೀಯ ತಂಡದ ಎಲ್ಲ ಆಟಗಾರರಿಗೆ ಸೂಚನೆ ನೀಡಿದೆ. ರೋಹಿತ್‌ ಹಾಗೂ ಕೊಹ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡುತ್ತಾರಾ? ಅಥವಾ ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಭಾಗಿಯಾಗುತ್ತಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ಸೂರ್ಯವಂಶಿ ಗೈರು

ಬುಧವಾರ ನಡೆದಿದ್ದ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ ಶತಕ ಬಾರಿಸಿದ್ದ ಬಿಹಾರ ತಂಡದ 14 ವರ್ಷದ ವೈಭವ್‌ ಸೂರ್ಯವಂಶಿ ಅವರು ಇಂದಿನ ಮಣಿಪುರ ವಿರುದ್ದದ ಪಂದ್ಯಕ್ಕೆ ಅಲಭ್ಯರಾದರು. ಸೂರ್ಯವಂಶಿ ಅವರನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳನ್ನು ಶುಕ್ರವಾರ (ಡಿಸೆಂಬರ್ 26) ಸನ್ಮಾನಿಸಲಾಗುವುದು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು, ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಾ ಮಕ್ಕಳನ್ನು ಸನ್ಮಾನಿಸಲಿದ್ದಾರೆ. ನಂತರ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. 14 ವರ್ಷದ ಸ್ಟಾರ್ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಲು ಬುಧವಾರ ಸಂಜೆಯೇ ದೆಹಲಿಗೆ ತೆರಳಿದ್ದರು.