ನವಿ ಮುಂಬೈ: ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಮಹಿಳಾ ವಿಶ್ವಕಪ್ ಸೆಮಿಫೈನಲ್(Women’s World Cup semi-final)ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿತು. ತಂಡದ ಈ ಸಾಧನೆಗೆ ಭಾರತ ಪುರುಷರ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ಕೋಚ್ ಗೌತಮ್ ಗಂಭಿರ್ ಸೇರಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಚೊಚ್ಚಲ ವಿಶ್ವಕಪ್ ಗೆಲುವಿಗೆ ಹಾರೈಸಿದ್ದಾರೆ.
"ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ವಿರುದ್ಧ ನಮ್ಮ ತಂಡಕ್ಕೆ ಸಿಕ್ಕ ಗೆಲುವು ಅದೆಷ್ಟು ಅದ್ಭುತ!. ಆಟಗಾರ್ತಿಯರ ಅದ್ಭುತ ಚೇಸಿಂಗ್ ಮತ್ತು ದೊಡ್ಡ ಪಂದ್ಯದಲ್ಲಿ ಜೆಮಿಮಾ ಅವರ ಅಸಾಧಾರಣ ಪ್ರದರ್ಶನ. ನಿಜವಾದ ಸ್ಥಿತಿಸ್ಥಾಪಕತ್ವ, ನಂಬಿಕೆ ಮತ್ತು ಉತ್ಸಾಹದ ಪ್ರದರ್ಶನ. ಟೀಮ್ ಇಂಡಿಯಾ, ಚೆನ್ನಾಗಿ ಆಡಿದೆ" ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
"ಅದ್ಭುತ! ಜೆಮಿ ರೋಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಜತೆಯಾಟ. ಮಹಿಳಾ ತಂಡಕ್ಕೆ ಅಭಿನಂದನೆಗಳು. ಚೆಂಡಿನೊಂದಿಗೆ ಆಟವನ್ನು ಜೀವಂತವಾಗಿರಿಸಿಕೊಂಡಿದ್ದೀರಿ" ಎಂದು ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಚೊಚ್ಚಲ ಟ್ರೋಫಿ ಮೆಲೆ ಕಣ್ಣಿಟ್ಟ ಭಾರತ
ನವೆಂಬರ್ 2 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಸೋಲಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಆತಿಥೇಯರನ್ನು ಸೋಲಿಸುವುದು ಅದು ಅಷ್ಟು ಸುಲಭವಲ್ಲ.
ಇದನ್ನೂ ಓದಿ Sunil Gavaskar: ಭಾರತ ವಿಶ್ವಕಪ್ ಗೆದ್ದರೆ ಜೆಮಿಮಾ ಜತೆ ಹಾಡೊಂದು ಹಾಡುವೆ ಎಂದ ಸುನಿಲ್ ಗವಾಸ್ಕರ್
ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ನವಿ ಮುಂಬೈನಲ್ಲಿ ನಡೆಯುವ ಫೈನಲ್ ಪಂದ್ಯ ರೋಮಾಂಚಕ ಪಂದ್ಯವಾಗುವುದರಿಂದ ಅವರಿಗೂ ಪ್ರೇರಣೆಯ ಕೊರತೆ ಇರುವುದಿಲ್ಲ. ಪಂದ್ಯದಲ್ಲಿ ಟಾಸ್ ಮತ್ತೊಮ್ಮೆ ಪ್ರಮುಖ ಅಂಶವಾಗಬಹುದು.