Sunil Gavaskar: ಭಾರತ ವಿಶ್ವಕಪ್ ಗೆದ್ದರೆ ಜೆಮಿಮಾ ಜತೆ ಹಾಡೊಂದು ಹಾಡುವೆ ಎಂದ ಸುನಿಲ್ ಗವಾಸ್ಕರ್
ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ 338 ರನ್‌ಗಳಿಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿದ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 ರನ್‌ಗಳಿಸಿ ಜಯಿಸಿತು. ಮೂರನೇ ಬಾರಿ ಫೈನಲ್‌ಗೇರಿದ ಭಾರತ ಭಾನುವಾರ ದಕ್ಷಿಣ ಆಫ್ರಿಕಾ ಎದುರು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿದೆ.
 
                                ಸುನಿಲ್ ಗವಾಸ್ಕರ್ ಮತ್ತು ಜೆಮಿಮಾ ರಾಡ್ರಿಗಸ್ -
 Abhilash BC
                            
                                Oct 31, 2025 11:07 AM
                                
                                Abhilash BC
                            
                                Oct 31, 2025 11:07 AM
                            ನವಿ ಮುಂಬಯಿ: ನವಿ ಮುಂಬೈನಲ್ಲಿ ನವೆಂಬರ್ 2ರಂದು ನಡೆಯಲಿರುವ ಮಹಿಳಾ ವಿಶ್ವಕಪ್(ICC Womens World Cup 2025)ನ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಜೆಮಿಮಾ ರೋಡ್ರಿಗಸ್(Jemimah Rodrigues) ಅವರೊಂದಿಗೆ ಗಿಟಾರ್ ನುಡಿಸುತ್ತಾ ಒಂದು ಹಾಡನ್ನು ಹಾಡಲು ಇಷ್ಟಪಡುತ್ತೇನೆ ಎಂದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್(Sunil Gavaskar) ಹೇಳಿದ್ದಾರೆ. ಗುರುವಾರ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ವಿಡಿಯೊ ಮೂಲಕ ತಂಡಕ್ಕೆ ಅಭಿನಂದಿಸಿದ ಗವಾಸ್ಕರ್, ಫೈನಲ್‌ನಲ್ಲಿಯೂ ಭಾರತ ಗೆಲ್ಲಲಿ ಎಂದು ಹಾರೈಸಿದರು.
"ಭಾರತ ವಿಶ್ವಕಪ್ ಗೆದ್ದರೆ, ನಾನು ಮತ್ತು ಜೆಮಿಮಾ ಒಟ್ಟಿಗೆ ಹಾಡುತ್ತೇವೆ. ಅವಳು(ಜೆಮಿಮಾ) ಒಪ್ಪಿದರೆ. ಅವಳು ಗಿಟಾರ್ ತೆಗೆದುಕೊಳ್ಳುತ್ತಾಳೆ, ಮತ್ತು ನಾನು ಜೊತೆಯಲ್ಲಿ ಹಾಡುತ್ತೇನೆ" ಎಂದು ಗವಾಸ್ಕರ್ ಸ್ಪೋರ್ಟ್ಸ್ ಟುಡೇ ಕಾರ್ಯಕ್ರಮದಲ್ಲಿ ಹೇಳಿದರು.
"ನಾವು ಒಂದೆರಡು ವರ್ಷಗಳ ಹಿಂದೆ ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ಒಮ್ಮೆ ಜತೆಯಾಗಿ ಹಾಡಿದೇವೆ. ಅವಳು ಗಿಟಾರ್ ನುಡಿಸುತ್ತಿದ್ದಳು, ಮತ್ತು ನಾನು ಹಾಡೊಂದನ್ನು ಹಾಡಿದೆ. ಇದೀಗ ಭಾರತ ಗೆದ್ದರೆ, ಮತ್ತೊಮ್ಮೆ ನಾನು ಜೆಮಿಮಾ ಜತೆ ಹಾಡಲು ಇಷ್ಟಪಡುತ್ತೇನೆ" ಎಂದರು.
Gavaskar’s BIG promise if India wins the Women’s World Cup Final! #sunilgavaskar #jemimahrodrigues #INDvsAUS #WomensWorldCup #TeamIndia #Cricket #WomensCricket #SmritiMandhana #nikhilnaz #sportstoday pic.twitter.com/MI4eaw8NGq
— Sports Today (@SportsTodayofc) October 30, 2025
ಸೆಮಿಫೈನಲ್‌ನಲ್ಲಿ, 24 ವರ್ಷದ ಜೆಮಿಮಾ ತಮ್ಮ ವೃತ್ತಿಜೀವನದ ಸ್ಮರಣೀಯ ಇನ್ನಿಂಗ್ಸ್ ಆಡಿದರು. 134 ಎಸೆತಗಳಲ್ಲಿ ಅಜೇಯ 127 ರನ್ ಗಳಿಸಿ ದಾಖಲೆಯ ರನ್ ಚೇಸಿಂಗ್‌ಗೆ ನೆರವಾದರು. 339 ರನ್‌ಗಳನ್ನು ಬೆನ್ನಟ್ಟಿದ ಭಾರತ ಐದು ವಿಕೆಟ್‌ಗಳು ಮತ್ತು ಒಂಬತ್ತು ಎಸೆತಗಳು ಬಾಕಿ ಇರುವಾಗ ಗುರಿ ತಲುಪಿತು. ಇದು ಮಹಿಳಾ ಏಕದಿನ ಪಂದ್ಯಗಳ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸಿಂಗ್ ಆಗಿದೆ.
ಇದನ್ನೂ ಓದಿ Jemimah Rodrigues ವಿಶ್ವಕಪ್ ಸೆಮಿಯಲ್ಲಿ ಭಾರತ ಗೆಲುವಿಗೆ ಕಾರಣವಾದ ಜೆಮಿಮಾ ಮಂಗಳೂರು ಮೂಲದ ಹುಡುಗಿ!
ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ 49.5 ಓವರ್‌ಗಳಲ್ಲಿ 338 ರನ್‌ಗಳಿಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿದ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 ರನ್‌ಗಳಿಸಿ ಜಯಿಸಿತು. ಮೂರನೇ ಬಾರಿ ಫೈನಲ್‌ಗೇರಿದ ಭಾರತ ಭಾನುವಾರ ದಕ್ಷಿಣ ಆಫ್ರಿಕಾ ಎದುರು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿದೆ.
 
            