ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಾಂಖೇಡೆ ಕ್ರೀಡಾಂಗಣದ ಸ್ಟ್ಯಾಂಡ್‌ಗೆ ರೋಹಿತ್ ಹೆಸರು

ರೋಹಿತ್ ಅವರ ಹೆಸರನ್ನು ಕ್ರೀಡಾಂಗಣದ ದಿವೇಚಾ ಪೆವಿಲಿಯನ್ (ಲೆವೆಲ್ 3) ಸ್ಟ್ಯಾಂಡ್‌ಗೆ ನೀಡಲಾಗುವುದು. ಗ್ರ್ಯಾಂಡ್‌ ಸ್ಟ್ಯಾಂಡ್‌ಗೆ (ಲೆವೆಲ್ 3) ಪವಾರ್ ಹಾಗೂ ಗ್ರ್ಯಾಂಡ್‌ ಸ್ಟ್ಯಾಂಡ್‌ಗೆ (ಲೆವೆಲ್ 4) ವಾಡೇಕರ್ ಅವರ ಹೆಸರುಗಳನ್ನು ಇಡಲಾಗುವುದು. ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಾಂಖೇಡೆ ಕ್ರೀಡಾಂಗಣದ ಸ್ಟ್ಯಾಂಡ್‌ಗೆ ರೋಹಿತ್ ಹೆಸರು

Profile Abhilash BC Apr 16, 2025 8:03 AM

ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ(Rohit Sharma), ಮಾಜಿ ನಾಯಕ ಅಜಿತ್ ವಾಡೇಕರ್(Ajit Wadekar) ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್(Sharad Pawar) ಅವರ ಹೆಸರುಗಳನ್ನು ವಾಂಖೇಡೆ ಕ್ರೀಡಾಂಗಣದ ಸ್ಟ್ಯಾಂಡ್‌(Wankhede stands)ಗಳಿಗೆ ಇಡಲು ನಿರ್ಧರಿಸಲಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ವಿರಾಟ್‌ ಕೊಹ್ಲಿ ಹೆಸರು ಇದೆ. ಇದೀಗ ಮುಂಬೈಯಲ್ಲಿ ರೋಹಿತ್‌ ಹೆಸರು ಕೂಡ ಕಾಣಿಸಿಕೊಳ್ಳಲಿದೆ.

ರೋಹಿತ್ ಅವರ ಹೆಸರನ್ನು ಕ್ರೀಡಾಂಗಣದ ದಿವೇಚಾ ಪೆವಿಲಿಯನ್ (ಲೆವೆಲ್ 3) ಸ್ಟ್ಯಾಂಡ್‌ಗೆ ನೀಡಲಾಗುವುದು. ಗ್ರ್ಯಾಂಡ್‌ ಸ್ಟ್ಯಾಂಡ್‌ಗೆ (ಲೆವೆಲ್ 3) ಪವಾರ್ ಹಾಗೂ ಗ್ರ್ಯಾಂಡ್‌ ಸ್ಟ್ಯಾಂಡ್‌ಗೆ (ಲೆವೆಲ್ 4) ವಾಡೇಕರ್ ಅವರ ಹೆಸರುಗಳನ್ನು ಇಡಲಾಗುವುದು.

‘ಮುಂಬೈ ಕ್ರಿಕೆಟ್‌ಗೆ ಅಪಾರ ಕೊಡುಗೆ ಸಲ್ಲಿಸಿದ ಈ ಮಹನೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಭವಿಷ್ಯದ ಪೀಳಿಗೆಗೆ ಇವರು ಪ್ರೇರಣೆಯಾಗುತ್ತಾರೆ’ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯ್ಕ್‌ ಹೇಳಿದರು.

ಟೀಮ್​ ಇಂಡಿಯಾ ಬಾಂಗ್ಲಾ ಪ್ರವಾಸದ ವೇಳಾಪಟ್ಟಿ ಪ್ರಕಟ

ಭಾರತ ತಂಡ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ದ್ವಿಪಕ್ಷೀಯ ಟಿ20 ಸರಣಿಯೊಂದನ್ನು ಆಡಲಿದೆ. ಮುಂದಿನ ಆಗಸ್ಟ್​ನಲ್ಲಿ ನಡೆಯಲಿರುವ ಈ ವೈಟ್​ಬಾಲ್​ ಕ್ರಿಕೆಟ್​ ಸರಣಿಯ ವೇಳಾಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ (ಬಿಸಿಬಿ) ಮಂಗಳವಾರ ಪ್ರಕಟಿಸಿತ್ತು. ಮೀರ್ಪುರ ಮತ್ತು ಚಟ್ಟೋಗ್ರಾಮ್​ನಲ್ಲಿ ಭಾರತ ತಂಡ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಏಷ್ಯಾಕಪ್​ ಟಿ20 ಟೂರ್ನಿಯ ಸಿದ್ಧತೆಗೆ ಈ ಪ್ರವಾಸ ನೆರವಾಗಲಿದೆ.

ಇದನ್ನೂ ಓದಿ IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್‌ ಕಿಂಗ್ಸ್‌

ಆಗಸ್ಟ್​ 17, 20ರಂದು ಮೀರ್ಪುರದಲ್ಲಿ 2 ಏಕದಿನ ಪಂದ್ಯಗಳು ನಡೆದರೆ, ಕೊನೇ ಏಕದಿನ ಪಂದ್ಯ ಆಗಸ್ಟ್​ 23ರಂದು ಚಟ್ಟೋಗ್ರಾಮ್​ನಲ್ಲಿ ನಡೆಯಲಿದೆ. ಆಗಸ್ಟ್​ 26 ರಂದು ಮೊದಲ ಟಿ20 ಪಂದ್ಯವೂ ಚಟ್ಟೋಗ್ರಾಮ್​ನಲ್ಲಿ ನಡೆದರೆ, ಆಗಸ್ಟ್​ 29 ಮತ್ತು 31ರಂದು ಕೊನೇ 2 ಟಿ20 ಪಂದ್ಯಗಳು ಮೀರ್ಪುರದಲ್ಲಿ ನಡೆಯಲಿವೆ.