IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್ ಕಿಂಗ್ಸ್
ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ (28ಕ್ಕೆ 4) ಹಾಗೂ ಎಡಗೈ ವೇಗಿ ಮಾರ್ಕೋ ಜಾನ್ಸೆನ್ (17ಕ್ಕೆ 3) ಬಿಗಿ ದಾಳಿಯ ಮೂಲಕ ಪಂಜಾಬ್‌ಗೆ ರೋಚಕ ಗೆಲುವು ತಂದುಕೊಟ್ಟರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಬಾರಿಸಿದ 4ನೇ ಕನಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 73, 88, ಹಾಗೂ 88 ರನ್‌ಗಳ ಕಡಿಮೆ ಮೊತ್ತ ದಾಖಲಿಸಿತ್ತು.


ಮುಲ್ಲನ್‌ಪುರ: ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ ಮಂಗಳವಾರದ ಕೆಕೆಆರ್ ಮತ್ತು ಪಂಜಾಬ್ ವಿರುದ್ಧದ ಸಣ್ಣ ಮೊತ್ತದ ಮೇಲಾಟದಲ್ಲಿ ಕೊನೆಗೂ ಪಂಜಾಬ್ 16 ರನ್ ಅಂತರದ ರೋಚಕ ಗೆಲುವು ಸಾಧಿಸಿ ಐಪಿಎಲ್ ಟೂರ್ನಿಯಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಐಪಿಎಲ್‌ನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಗೆದ್ದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ತಂಡದ ಹೆಸರಿನಲ್ಲಿತ್ತು. 2009 ರಲ್ಲಿ ಚೆನ್ನೈ ತಂಡ ಪಂಜಾಬ್ ವಿರುದ್ಧ 116 ರನ್ ರಕ್ಷಿಸಿಕೊಂಡು ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಅತ್ಯಧಿಕ ರನ್ ಚೇಸಿಂಗ್ ಮಾಡಿ ಗೆದ್ದ ದಾಖಲೆಯೂ ಪಂಜಾಬ್ ಹೆಸರಿನಲ್ಲಿದೆ.
ಎಂವೈಎಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ವೇಗಿ ಹರ್ಷಿತ್ ರಾಣಾ (25ಕ್ಕೆ 3) ಸಹಿತ ಕೆಕೆಆರ್ ಬೌಲರ್‌ಗಳ ಸಂಘಟಿತ ದಾಳಿಗೆ ತರಗೆಲೆಯಂತೆ ಉದುರಿ 15.3 ಓವರ್‌ಗಳಲ್ಲಿ 111 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ 3 ವಿಕೆಟ್‌ಗೆ 62 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಕೆಕೆಆರ್, ಚಾಹಲ್ ದಾಳಿಗೆ ದಿಢೀರ್ ಕುಸಿತ ಕಂಡು 15.1 ಓವರ್‌ಗಳಲ್ಲಿ 95 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು.
Runs were low. But belief? Sky high 🫡#PBKS script history with the boldest defence ever in #TATAIPL! 💪#PBKSvKKR | @PunjabKingsIPL pic.twitter.com/whS0oXuK23
— IndianPremierLeague (@IPL) April 15, 2025
ಸುಲಭ ಗುರಿ ಬೆನ್ನತ್ತಿದ ಕೆಕೆಆರ್ ಕೂಡ ಪಂಜಾಬ್‌ನಂತೆ ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ 7 ರನ್ ಆಗುವಾಗ ಆರಂಭಿಕರಾದ ಡಿಕಾಕ್ ಮತ್ತು ನರೈನ್ ಪೆವಿಲಿಯನ್ ಸೇರಿದ್ದರು. ಮೂರನೇ ವಿಕೆಟ್‌ಗೆ ಆಡಲಿಳಿದ ಅಂಗ್ಕ್ರಿಶ್ ರಘುವಂಶಿ ಉತ್ತಮ ಬ್ಯಾಟಿಂಗ್ ಮಾಡಿ 37 ರನ್, ನಾಯಕ ರಹಾನೆ 17 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಉಭಯ ಆಟಗಾರರ ವಿಕೆಟ್ ಪತದ ಬಳಿಕ ನಾಟಕೀಯ ಕುಸಿತ ತಂಡ ಕೆಕೆಆರ್ ಸೋಲಿಗೆ ತುತ್ತಾಯಿತು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ (28ಕ್ಕೆ 4) ಹಾಗೂ ಎಡಗೈ ವೇಗಿ ಮಾರ್ಕೋ ಜಾನ್ಸೆನ್ (17ಕ್ಕೆ 3) ಬಿಗಿ ದಾಳಿಯ ಮೂಲಕ ಪಂಜಾಬ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಇದನ್ನೂ ಓದಿ IPL 2025 Points Table: ರೋಚಕ ಗೆಲುವಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದ ಪಂಜಾಬ್ ಕಿಂಗ್ಸ್
ಕೆಕೆಆರ್ ಪರ ಸುನೀಲ್ ನರೈನ್ ಕೇವಲ 14 ರನ್ ನೀಡಿ ಎರಡು ವಿಕೆಟ್ ಪಡೆದರು. ಉಳಿದಂತೆ ಹರ್ಷಿತ್ ರಾಣಾ ಮೂರು ವಿಕೆಟ್, ವರುಣ್ ಎರಡು, ವೈಭವ್ ಮತ್ತು ಅರ್ನಿಚ್ ನೋರ್ಜೆ ತಲಾ ಒಂದು ವಿಕೆಟ್ ಪಡೆದರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಬಾರಿಸಿದ 4ನೇ ಕನಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 73, 88, ಹಾಗೂ 88 ರನ್‌ಗಳ ಕಡಿಮೆ ಮೊತ್ತ ದಾಖಲಿಸಿತ್ತು.