ಅಹಮದಾಬಾದ್: ಗುರುವಾರ ಆರಂಭಗೊಂಡ ಭಾರತ ವಿರುದ್ಧದ ಮೊದಲ ಟೆಸ್ಟ್(IND vs WI 1st Test) ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತದಲ್ಲಿ ವಿಂಡೀಸ್ ತಂಡ ಗೆಲುವು ಕಾಣದೆ 31 ವರ್ಷಗಳಾಗಿದೆ. ಕೊನೆಯ ಬಾರಿಗೆ ಗೆದ್ದದು 1994ರ ಮೊಹಾಲಿ ಟೆಸ್ಟ್‌ನಲ್ಲಿ. ಶಾಯ್ ಹೋಪ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್‌ನಲ್ಲಿ ಕಣಕಿಳಿಯುತ್ತಿದ್ದಾರೆ.
ಅಶ್ವಿನ್ ಗೈರಿನಲ್ಲಿ ಜಡೇಜಾ ಸ್ಪಿನ್ ವಿಭಾಗದ ಸಾರಥ್ಯ ವಹಿಸಲಿದ್ದು, ರಿಷಭ್ ಪಂತ್ ಗೈರಿನಲ್ಲಿ ಉಪನಾಯಕನ ಜವಾಬಾರಿಯನ್ನೂ ಹೊತ್ತಿದ್ದಾರೆ. ಧೃವ್ ಜುರೆಲ್ ಕೀಪಿಂಗ್ ಮಾಡಲಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬುಮ್ರಾ ವೇಗಿಗಳಾಗಿ ಕಾಣಿಸಿಕೊಂಡಿದ್ದಾರೆ . ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಗದ ಕುಲ್‌ದೀಪ್ ಯಾದವ್‌ಗೆ ಈ ಬಾರಿ ಅವಕಾಶ ನೀಡಲಾಗಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ದೇವದತ್ತ ಪಡಿಕ್ಕಲ್‌ಗೆ ಅವಕಾಶ ಸಿಕ್ಕಿಲ್ಲ. ಆರಂಭಿಕರಾಗಿ ರಾಹುಲ್ ಮತ್ತು ಜೈಸ್ವಾಲ್ ಮುಂದುವರಿದಿದ್ದಾರೆ.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ಧ್ರುವ ಜುರೆಲ್(ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಅಜೆನರಿನ್ ಚಂದ್ರಪಾಲ್, ಜಾನ್ ಕ್ಯಾಂಪ್‌ಬೆಲ್, ಅಲಿಕ್ ಅಥಾನಾಜೆ, ಬ್ರಾಂಡನ್ ಕಿಂಗ್, ಶಾಯ್ ಹೋಪ್ (ವಿ.ಕೀ.), ರೋಸ್ಟನ್ ಚೇಸ್ (ನಾಯಕ), ಜಸ್ಟಿನ್ ಗ್ರೀವ್ಸ್, ಜೋಮೆಲ್ ವಾರಿಕನ್, ಖಾರಿ ಪಿಯರೆ, ಜೋಹಾನ್ ಲೇನ್, ಜೇಡನ್ ಸೀಲ್ಸ್.