ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake World Cup Trophy: ಐತಿಹಾಸಿಕ ವಿಶ್ವಕಪ್‌ ಗೆದ್ದರೂ ಭಾರತ ಮಹಿಳಾ ತಂಡಕ್ಕೆ ಸಿಗುವುದು ನಕಲಿ ಟ್ರೋಫಿ!

ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿರಲಿದೆ. ಫೋಟೋಶೂಟ್​ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಯಲ್ಲಿ ಇಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್​ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ಹಿಂದಿರುಗುತ್ತಾರೆ.

ನವಿ ಮುಂಬೈ: ಹಲವು ವರ್ಷಗಳ ಕಾಯುವಿಕೆ, ಪರಿಶ್ರಮದೊಂದಿಗೆ ಭಾರತ ಮಹಿಳಾ ತಂಡ(women's) ಚೊಚ್ಚಲ ಐಸಿಸಿ ವಿಶ್ವಕಪ್‌(women's world cup) ಗೆದ್ದು ಸಂಭ್ರಮಿಸಿದೆ. ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ ಗೆಲುವು ಒಲಿಸಿಕೊಂಡು ಐತಿಹಾಸಿಕ ಸಾಧನೆ ಮರೆಯಿತು. ತಂಡದ ಆಟಗಾರ್ತಿಯರು ಟ್ರೋಫಿ ಎತ್ತಿ ಖುಷಿಯಲ್ಲಿ ಮಿಂದೆದ್ದರು. ಆದರೆ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಪಡೆ ಬಳಿಯಿರುವುದು ಮೂಲ ಟ್ರೋಫಿ ಅಲ್ಲ ಡುಪ್ಲಿಕೇಟ್ ಟ್ರೋಫಿ(Fake World Cup Trophy) ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್ ಕೂಡ​ ಇದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ. ಮತ್ತು ವಿಜೇತ ತಂಡವು ಅದನ್ನು ಮನೆಗೆ ಕೊಂಡೊಯ್ಯುತ್ತದೆ.

ನಿಜವಾದ ಟ್ರೋಫಿ ಎಲ್ಲಿದೆ?

ಹಾಗಾದರೆ, ಅಸಲಿ ಟ್ರೋಫಿ ಎಲ್ಲಿದೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುವುದು ಸಹಜ. ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿರಲಿದೆ. ಫೋಟೋಶೂಟ್​ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಯಲ್ಲಿ ಇಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್​ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ವಿಜಯಯಾತ್ರೆ ನಡೆಸುತ್ತಾರೆ.



ಇದನ್ನೂ ಓದಿ Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ಡಿ.ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಶಫಾಲಿ ವರ್ಮಾ (87) ಮತ್ತು ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 298 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ಗಳಿಸಿ ಸೋಲೊಪ್ಪಿಕೊಂಡಿತು.