Champions Trophy: ರೋಹಿತ್ ಪಡೆ ಭಾರತಕ್ಕೆ ತಂದಿದ್ದು ಅಸಲಿಯಲ್ಲ ನಕಲಿ ಟ್ರೋಫಿ!
Champions Trophy: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ. ಮತ್ತು ವಿಜೇತ ತಂಡವು ಅದನ್ನು ಮನೆಗೆ ಕೊಂಡೊಯ್ಯುತ್ತದೆ.


ಮುಂಬಯಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಗೆದ್ದ ಟೀಮ್ ಇಂಡಿಯಾ(Team India) ಆಟಗಾರರು ಈಗಾಗಲೇ ತವರಿಗೆ ಆಗಮಿಸಿದ್ದಾರೆ. ತಂಡದ ಪ್ರಮುಖ ಸದಸ್ಯರಾದ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮೆಗಾ ಟೂರ್ನಮೆಂಟ್‌ನಲ್ಲಿ ಪ್ರತಿ ಪಂದ್ಯವನ್ನೂ ಗೆದ್ದ ಟೀಮ್ ಇಂಡಿಯಾ, ಅಂತಿಮ ಹೋರಾಟದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಕಪ್ ಅನ್ನು ಹೆಮ್ಮೆಯಿಂದ ಸ್ವೀಕರಿಸಿದೆ. ಆದರೆ ರೋಹಿತ್ ಪಡೆ ಬಳಿಯಿರುವುದು ಮೂಲ ಟ್ರೋಫಿ ಅಲ್ಲ ಡುಪ್ಲಿಕೇಟ್ ಟ್ರೋಫಿ ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್ ಕೂಡ ಇದೆ.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ. ಮತ್ತು ವಿಜೇತ ತಂಡವು ಅದನ್ನು ಮನೆಗೆ ಕೊಂಡೊಯ್ಯುತ್ತದೆ.
That win grin 😁🏆
— BCCI (@BCCI) March 11, 2025
#TeamIndia | #INDvNZ | #ChampionsTrophy | #Final pic.twitter.com/xcpmVoaNez
ನಿಜವಾದ ಟ್ರೋಫಿ ಎಲ್ಲಿದೆ?
ಹಾಗಾದರೆ, ಅಸಲಿ ಟ್ರೋಫಿ ಎಲ್ಲಿದೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುವುದು ಸಹಜ. ಅಲಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿರಲಿದೆ. ಫೋಟೋಶೂಟ್ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಯಲ್ಲಿ ಇಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ಮನೆಗೆ ಹಿಂದಿರುಗುತ್ತಾರೆ.
ಇದನ್ನೂ ಓದಿ IND vs NZ Final: ಚಾಂಪಿಯನ್ ಟ್ರೋಫಿ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ, ಸಿದ್ದರಾಮಯ್ಯ
ಮಾರ್ಚ್ 9, ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್‌ಗಳ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮ(76) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು.