ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಲ್‌ಪಿಜಿ ಬಿಕ್ಕಟ್ಟು; ಐಪಿಎಲ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

LPG crisis: ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ವೇಳೆ ಆ ನಗರಗಳಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಈಗ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಐಪಿಎಲ್‌ ಆಡಳಿತ ಮಂಡಳಿ ಘೋಷಿಸಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

LPG crisis

ನವದೆಹಲಿ, ಮಾ.14: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ದೇಶವ್ಯಾಪಿ ಉದ್ಭವಿಸಿರುವ ವಾಣಿಜ್ಯ ಸಿಲಿಂಡರ್‌(LPG crisis) ಪೂರೈಕೆಯಲ್ಲಿನ ವ್ಯತ್ಯಯ ಮತ್ತಷ್ಟು ತೀವ್ರಗೊಂಡಿದೆ. ಸಿಲಿಂಡರ್‌ ಪೂರೈಕೆ ಕೊರತೆ ಪರಿಣಾಮ ದೇಶಾದ್ಯಂತ ಹೋಟೆಲ್‌, ಕ್ಯಾಂಟೀನ್‌, ಪಿಜಿ, ಕಲ್ಯಾಣ ಮಂಟಪಗಳಿಗೆ ಭಾರೀ ಹೊಡೆತ ಬಿದ್ದಿದೆ. ದೇಶವ್ಯಾಪಿ ಶೇ.20-30ರಷ್ಟು ಹೋಟೆಲ್‌ಗಳು ಬಂದ್‌ ಆಗಿದೆ. ವಾಣಿಜ್ಯ ಬಳಕೆ ಅನಿಲ್‌ ಸಿಲಿಂಡರ್‌ ಅಭಾವ ಸದ್ಯಕ್ಕೆ ಐಪಿಎಲ್‌(IPL 2026) ಟೂರ್ನಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಸದ್ಯಕ್ಕೆ ಎಲ್ಲವೂ ಸರಿಯಾಗಿದೆ. ನಾವು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತೇವೆ. ನಾವು ಪರಿಸ್ಥಿತಿಯನ್ನು ಮೊದಲೇ ತಡೆಯಲು ಸಾಧ್ಯವಿಲ್ಲ. ನಾವು ಕಾದು ನೋಡಬೇಕು. ನಾವು ಮಾತನಾಡಿದ ಪ್ರತಿಯೊಬ್ಬರೂ ವಿಷಯಗಳು ನಿಯಂತ್ರಣದಲ್ಲಿವೆ ಎಂದು ಹೇಳುತ್ತಾರೆ. ಹೋಟೆಲ್‌ಗಳು ಸಹ ಅದನ್ನೇ ಹೇಳುತ್ತಿವೆ, ಆದ್ದರಿಂದ ನಾವು ಇದೀಗ ಅದನ್ನು ಪಾಲಿಸಬೇಕು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

"ನಾವು ಖಂಡಿತವಾಗಿಯೂ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ. ಪರಿಸ್ಥಿತಿಗೆ ನಾವು ಏನಾದರೂ ಮಾಡಬೇಕೆಂದು ಒತ್ತಾಯಿಸಿದರೆ, ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಅಧಿಕಾರಿ ಹೇಳಿದರು.

ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ವೇಳೆ ಆ ನಗರಗಳಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಈಗ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಐಪಿಎಲ್‌ ಆಡಳಿತ ಮಂಡಳಿ ಘೋಷಿಸಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಐಪಿಎಲ್‌ನ ಮೊದಲ ಅಭ್ಯಾಸ ಅವಧಿಯಲ್ಲೇ ಸಿಕ್ಸರ್‌ಗಳ ಸುರಿಮಳೆಗೈದ ಜಡೇಜಾ; ವಿಡಿಯೊ ವೈರಲ್‌

ಮೊದಲ ಹಂತದಲ್ಲಿ ಒಟ್ಟು 16 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಈ ಪೈಕಿ 4 ಡಬಲ್‌ ಹೆಡರ್‌(ದಿನಕ್ಕೆ 2 ಪಂದ್ಯ) ಇರಲಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ 2 ಪಂದ್ಯಗಳನ್ನಾಡಲಿದೆ. ಉದ್ಘಾಟನಾ ಪಂದ್ಯ ಹೊರತಾಗಿ ತನ್ನ ತವರಿನ 2ನೇ ಪಂದ್ಯದಲ್ಲಿ ಏ.5ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ.