ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan: ಇಂಡೋ-ಪಾಕ್‌ ಮಹಿಳಾ ವಿಶ್ವಕಪ್‌ ಪಂದ್ಯಕ್ಕೆ ಕ್ಷಣಗಣನೆ

ICC Womens World Cup 2025: ಭಾರತ-ಪಾಕ್‌ ಮಹಿಳಾ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 24ರಲ್ಲಿ ಗೆದ್ದಿದೆ. ಏಕದಿನದಲ್ಲಿ ಭಾರತ ಎಲ್ಲಾ 11 ಪಂದ್ಯಗಳಲ್ಲಿ ಗೆದ್ದಿದ್ದು, ಶೇ.100 ಗೆಲುವಿನ ದಾಖಲೆ ಹೊಂದಿದೆ.

ಮಹಿಳಾ ವಿಶ್ವಕಪ್‌; ಮಳೆ ಭೀತಿ ಮಧ್ಯೆ ಇಂದು ಇಂಡೋ-ಪಾಕ್‌ ಕಾದಾಟ

-

Abhilash BC Abhilash BC Oct 5, 2025 12:27 PM

ಕೊಲಂಬೊ: ಇಂದು ನಡೆಯುವ ಮಹಿಳಾ ವಿಶ್ವಕಪ್‌ನ(ICC Womens World Cup 2025) ಲೀಗ್‌ ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(India-Pakistan) ತಂಡಗಳು ಮುಖಾಮುಖಿಯಾಗಲಿವೆ. ಹರ್ಮನ್‌ಪ್ರೀತ್‌ ಕೌರ್‌ ಪಡೆ ಸತತ 2ನೇ ಜಯದ ನಿರೀಕ್ಷೆಯಲ್ಲಿದೆ.

ಇತ್ತೀಚೆಗೆ ಪುರುಷರ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಾಕ್‌ ಆಟಗಾರರ ಕೈಕುಲುಕದೆ, ಪಹಲ್ಗಾಂ ಉಗ್ರ ದಾಳಿಗೆ ತಮ್ಮದೇ ರೀತಿಯಲ್ಲಿ ಪ್ರತಿರೋಧ ತೋರಿದ್ದರು. ಇದು ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಬಿಸಿಸಿಐ ತಂಡಕ್ಕೆ ಈ ಬಗ್ಗೆ ಸೂಚನೆ ಕೂಡ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IND vs WI: ಮೊದಲನೇ ಟೆಸ್ಟ್‌ ಗೆದ್ದರೂ ಒಂದು ವಿಚಾರದ ಬಗ್ಗೆ ಶುಭಮನ್ ಗಿಲ್ ಬೇಸರ!

ಪಾಕ್‌ನ ಆಗಾರ್ತಿಯರು ಕೂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತದ ವಿಮಾನಗಳನ್ನು ಹೊಡೆದುರಿಸಿದ್ದೇವೆ ಎನ್ನುವ ಸನ್ನೆಗಳ ಮೂಲಕ ಉದ್ಧಟತನ ಮೆರೆದಿದ್ದರು. ಹೀಗಾಗಿ ಈ ಪಂದ್ಯ ಹೈವೋಲ್ಟೇಜ್‌ನಿಂ ಕೂಡಿದೆ.

ಭಾರತ-ಪಾಕ್‌ ಮಹಿಳಾ ತಂಡಗಳು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 24ರಲ್ಲಿ ಗೆದ್ದಿದೆ. ಏಕದಿನದಲ್ಲಿ ಭಾರತ ಎಲ್ಲಾ 11 ಪಂದ್ಯಗಳಲ್ಲಿ ಗೆದ್ದಿದ್ದು, ಶೇ.100 ಗೆಲುವಿನ ದಾಖಲೆ ಹೊಂದಿದೆ.

ಪಂದ್ಯ: ಮಧ್ಯಾಹ್ನ 3 ಗಂಟೆಗೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.