ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಂಬಲ್ಡನ್‌ ಮಹಿಳಾ ಡಬಲ್ಸ್ ಪ್ರಶಸ್ತಿ​ ಗೆದ್ದ ಕ್ರಿಸ್ಟಿನಾ-ಗುವೋ

Wimbledon 2026: ಪುರುಷರ ಡಬಲ್ಸ್​ ವಿಭಾಗದ ಫೈನಲ್‌ ಪಂದ್ಯದಲ್ಲಿ ಬ್ರಿಟನ್​ನ ಹೆನ್ರಿ ಪ್ಯಾಟನ್​ ಮತ್ತು ಫಿನ್ಲೆಂಡ್​ನ ಹ್ಯಾರಿ ಹೆಲಿಯೋವಾರಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಎಲ್​ ಸಾಲ್ವಡಾರ್​ನ ಮಾರ್ಸೆಲೊ ಅರೆವಾಲೋ ಮತ್ತು ಕ್ರೊಯೇಷಿಯಾದ ಮೇಟ್​ ಪಾವಿಕ್​ ಜೋಡಿಯನ್ನು 7-6, 7-6 ನೇರಸೆಟ್​ಗಳಿಂದ ಮಣಿಸಿದರು.

ವಿಂಬಲ್ಡನ್‌ ಮಹಿಳಾ ಡಬಲ್ಸ್​ ಪ್ರಶಸ್ತಿ ಗೆದ್ದ ಕ್ರಿಸ್ಟಿನಾ-ಗುವೋ

Hanyu and Mladenovic -

Abhilash BC
Abhilash BC Jul 12, 2026 11:26 PM

ಲಂಡನ್‌, ಜು.12: ಎರಡನೇ ಶ್ರೇಯಾಂಕದ ಗೇಬ್ರಿಯೆಲಾ ಡಬ್ರೋವ್ಸ್ಕಿ ಮತ್ತು ಲೂಯಿಸಾ ಸ್ಟೆಫಾನಿ ಅವರನ್ನು 6-3, 7-5 ಸೆಟ್‌ಗಳಿಂದ ಸೋಲಿಸುವ ಮೂಲಕ ಚೀನಾದ ಗುವೊ ಹನ್ಯು ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಕ್ 2026 ರ ವಿಂಬಲ್ಡನ್ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ಇದು ಇವರಿಬ್ಬರು ಜತೆಯಾಗಿ ಜಯಿಸಿದ ಮೊದಲ ಗ್ರಾಂಡ್​ ಸ್ಲಾಂ ಪ್ರಶಸ್ತಿ.

10ನೇ ಶ್ರೇಯಾಂಕಿತ ಕ್ರಿಸ್ಟಿನಾ-ಗುವೋ ಜೋಡಿ ಪಂದ್ಯದ ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಸಾಧಿಸಿತು. ಒಂದು ಗಂಟೆ, 32 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡಿತು. ಮಹಿಳಾ ಡಬಲ್ಸ್​ ವಿಭಾಗದಲ್ಲಿ 6 ಗ್ರಾಂಡ್​ ಸ್ಲಾಂ ಪ್ರಶಸ್ತಿ ಜಯಿಸಿದ್ದ 33 ವರ್ಷದ ಕ್ರಿಸ್ಟಿನಾಗೆ ಇದು ವಿಂಬಲ್ಡನ್​ನಲ್ಲಿ ಮೊದಲ ಕಿರೀಟವಾಗಿದೆ. ಇದು ಗುವೊ ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ.

ಪುರುಷರ ಡಬಲ್ಸ್​ ವಿಭಾಗದ ಫೈನಲ್‌ ಪಂದ್ಯದಲ್ಲಿ ಬ್ರಿಟನ್​ನ ಹೆನ್ರಿ ಪ್ಯಾಟನ್​ ಮತ್ತು ಫಿನ್ಲೆಂಡ್​ನ ಹ್ಯಾರಿ ಹೆಲಿಯೋವಾರಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಎಲ್​ ಸಾಲ್ವಡಾರ್​ನ ಮಾರ್ಸೆಲೊ ಅರೆವಾಲೋ ಮತ್ತು ಕ್ರೊಯೇಷಿಯಾದ ಮೇಟ್​ ಪಾವಿಕ್​ ಜೋಡಿಯನ್ನು 7-6, 7-6 ನೇರಸೆಟ್​ಗಳಿಂದ ಮಣಿಸಿದರು.



ಹೆನ್ರಿ ಹ್ಯಾಟನ್​ ವಿಂಬಲ್ಡನ್​ನಲ್ಲಿ ಎರಡು ಬಾರಿ ಡಬಲ್ಸ್​ ಪ್ರಶಸ್ತಿ ಗೆದ್ದುಕೊಂಡ ಮೊದಲ ಬ್ರಿಟನ್​ ಆಟಗಾರ ಎನಿಸಿದರು. ಪ್ಯಾಟನ್​-ಹ್ಯಾರಿ ಜೋಡಿ ಈ ಮುನ್ನ 2024ರಲ್ಲೂ ವಿಂಬಲ್ಡನ್​ ಡಬಲ್ಸ್​ ಪ್ರಶಸ್ತಿ ಒಲಿಸಿಕೊಂಡಿತ್ತು. ಈ ಹಿಂದೆ ಬ್ರಿಟನ್​ನ ನಾಲ್ವರು ಆಟಗಾರರು ಪುರುಷರ ಡಬಲ್ಸ್​ ಪ್ರಶಸ್ತಿ ಗೆದ್ದುಕೊಂಡಿದ್ದರು. ಆದರೆ ಅವರಲ್ಲಿ ಯಾರು ಎರಡು ಬಾರಿ ಈ ಸಾಧನೆ ಮಾಡಿರಲಿಲ್ಲ.

ಟೀಮ್‌ ಇಂಡಿಯಾ ಕೋಚಿಂಗ್‌ ತೊರೆಯಲು ಮುಂದಾದ ಡೋಸ್ಚೇಟ್, ಮಾರ್ಕೆಲ್‌

ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದಿದ್ದ ಮಹಿಳಾ ಸಿಂಗಲ್ಸ್‌ ಫೈನಲ್ಸ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಆಟಗಾರ್ತಿ ಲಿಂಡಾ 6–2, 5–7, 6–3ರಿಂದ ಮೂರು ಸೆಟ್‌ಗಳ ಹೋರಾಟದಲ್ಲಿ ಸ್ವದೇಶದ ಅನುಭವಿ ಆಟಗಾರ್ತಿ ಕರೋಲಿನಾ ಮುಕೋವಾ ಅವರನ್ನು ಮಣಿಸಿ ಮಹಿಳಾ ಸಿಂಗಲ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

21 ವರ್ಷದ ಲಿಂಡಾ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದರು. ಅಲ್ಲದೆ, ಈ ಟೂರ್ನಿಗೆ ಮೊದಲು ಯಾವುದೇ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನೂ ದಾಟಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ವಿಂಬಲ್ಡನ್‌ ಕಿರೀಟ ಗೆದ್ದ ಜೆಕ್‌ ರಿಪಬ್ಲಿಕ್‌ನ ಮೂರನೇ ಆಟಗಾರ್ತಿ ಎಂಬ ಹಿರಿಮೆಗೆ ಲಿಂಡಾ ಅವರು ಪಾತ್ರರಾದರು. ಅನುಭವಿ 29 ವರ್ಷ ವಯಸ್ಸಿನ ಕರೋಲಿನಾ ಅವರು 2023ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲೂ ಮುಗ್ಗರಿಸಿದ್ದರು.