ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಓವಲ್‌ ಟೆಸ್ಟ್‌ನಿಂದ ಹೊರಬಿದ್ದ ಕ್ರಿಸ್‌ ವೋಕ್ಸ್‌

Chris Woakes: ಐದು ಟೆಸ್ಟ್‌ಗಳಲ್ಲಿ ಆಡಿರುವ ಕ್ರಿಸ್‌ ವೋಕ್ಸ್, ಇಂಗ್ಲೆಂಡ್ ಸರಣಿಯಾದ್ಯಂತ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಎರಡೂ ತಂಡಗಳಲ್ಲಿ ಅವರು 181 ಓವರ್‌ಗಳನ್ನು ಬೌಲಿಂಗ್ ಮಾಡಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೋಕ್ಸ್‌ 14 ಓವರ್‌ ಬೌಲಿಂಗ್‌ ನಡೆಸಿ ಒಂದು ವಿಕೆಟ್‌ ಕಿತ್ತಿದ್ದರು.

ಲಂಡನ್‌: ಭಾರತ ವಿರುದ್ಧದ ಐದನೇ ಟೆಸ್ಟ್(IND vs ENG 5th Test) ಪಂದ್ಯದ ಮೊದಲ ದಿನದಾಟದ ವೇಳೆ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಕ್ರಿಸ್ ವೋಕ್ಸ್, ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ(Woakes ruled out Oval Test) ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ವೋಕ್ಸ್‌ ಹೊರಬಿದ್ದ ಕಾರಣ ಇಂಗ್ಲೆಂಡ್‌ ಕೇವಲ 10 ಮಂದಿಯೊಂದಿಗೆ ಪಂದ್ಯ ಆಡಲಿದೆ. ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೋಕ್ಸ್‌ 14 ಓವರ್‌ ಬೌಲಿಂಗ್‌ ನಡೆಸಿ ಒಂದು ವಿಕೆಟ್‌ ಕಿತ್ತಿದ್ದರು.

ಭಾರತದ ಮೊದಲ ಇನ್ನಿಂಗ್ಸ್‌ನ 57 ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ವೋಕ್ಸ್ ಗಾಯಗೊಂಡಿದ್ದರು. ತಕ್ಷಣವೇ ಅವರು ನೋವಿನಿಂದ ಮೈದಾನ ತೊರೆದಿದ್ದರು. ಈ ಪಂದ್ಯದಲ್ಲಿ ಈಗಾಗಲೇ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಅವರ ಸೇವೆಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್, ಈಗ ಕೇವಲ ಮೂರು ಪೇಸ್ ಬೌಲಿಂಗ್ ಆಯ್ಕೆಗಳನ್ನು ಮಾತ್ರ ಹೊಂದಿದೆ. ಅವರೆಂದರೆ ಜೋಶ್ ಟಂಗ್, ಗಸ್ ಅಟ್ಕಿನ್ಸನ್ ಮತ್ತು ಜೇಮಿ ಓವರ್ಟನ್.

ಐದು ಟೆಸ್ಟ್‌ಗಳಲ್ಲಿ ಆಡಿರುವ ವೋಕ್ಸ್, ಇಂಗ್ಲೆಂಡ್ ಸರಣಿಯಾದ್ಯಂತ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಎರಡೂ ತಂಡಗಳಲ್ಲಿ ಅವರು 181 ಓವರ್‌ಗಳನ್ನು ಬೌಲಿಂಗ್ ಮಾಡಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ IND vs ENG 5th Test: ಇಂಗ್ಲೆಂಡ್‌ ಮಾರಕ ದಾಳಿಯಿಂದ 6 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಕರುಣ್‌ ನಾಯರ್‌ ಆಸರೆ!

ಮೊದಲ ದಿನದಾಟದಲ್ಲಿ ಪದೇಪದೆ ಮಳೆ ಅಡಚಣೆ ಉಂಡು ಮಾಡಿದ ಕಾರಣದಿಂದ. ಮೊದಲ ಅವಧಿಯಲ್ಲಿ 23 ಓವರ್‌ ಆಡಿಸಿದರೂ, 2ನೇ ಅವಧಿಯಲ್ಲಿ ಕೇವಲ 6 ಓವರ್ ಆಟ ನಡೆಯಿತು. 3ನೇ ಅವಧಿ ಕೂಡಾ ತಡವಾಗಿ ಆರಂಭಗೊಂಡಿತು. ಸದ್ಯ ಭಾರತ 6 ವಿಕೆಟ್‌ಗೆ 204 ರನ್‌ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಎರಡನೇ ದಿನವೂ ಮಳೆ ಭೀತಿ ಎದುರಾಗಿದೆ.