ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ-ಪಾಕಿಸ್ತಾನ ಮುಖಾಮುಖಿ

ದುಬೈನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಬಹುದು, ಪಂದ್ಯಾವಳಿಯ ಮೊದಲ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಚೇಸಿಂಗ್ ಆಯ್ಕೆ ಮಾಡಿಕೊಂಡ ತಂಡಗಳೇ ಗೆದ್ದವು. ಹೀಗಾಗಿ ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ದುಕೊಳ್ಳಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ ಬೇಗನೆ ಆರಂಭ ಪಡೆದು ಇನ್ನಿಂಗ್ಸ್ ಮುಂದುವರೆದಂತೆ ಮುಕ್ತವಾಗಿ ರನ್ ಗಳಿಸುವುದು ಕಷ್ಟವಾಗುತ್ತದೆ.

india women vs pakistan women

ದುಬೈ, ಸೆ.5: ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡ ಇಂದು ನಡೆಯುವ ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟಕ್ಕೆ ಸಜ್ಜಾಗಿವೆ. ಪಾಕ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಗೆದ್ದರೆ ಸೆಮಿಫೈನಲ್‌ ಪ್ರವೇಶಿಸಲಿದೆ. ಸೋತರೆ ಹಾಂಕಾಂಗ್‌ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಸೋತರೂ ಭಾರತಕ್ಕೆ ನಷ್ಟವಿಲ್ಲ. ಆದರೆ ಸೆಮಿಫೈನಲ್‌ ದೃಷ್ಟಿಯಲ್ಲಿ ಭಾರತ ಈ ಪಂದ್ಯದಲ್ಲಿ ತನ್ನ ಬ್ಯಾಟಿಂಗ್‌ ಪಡೆಯನ್ನು ಬಲಿಷ್ಠಗೊಳಿಸಬೇಕಿದೆ. ಸೃತಿ ಮಂಧಾನ ಮತ್ತು ಶಫಾಲಿ ವರ್ಮ ಬಿಟ್ಟರೆ ಯಾರು ನಿರೀಕ್ಷಿತ ಬ್ಯಾಟಿಂಗ್‌ ನಡೆಸುತ್ತಿಲ್ಲ.

ಉಭಯ ಆಟಗಾರ್ತಿಯರನ್ನೇ ಎಲ್ಲ ಪಂದ್ಯಗಳಲ್ಲಿ ನೆಚ್ಚಿಕೊಂಡು ಕುಳಿತರೆ ಆಗದು. ಹೀಗಾಗಿ ನಾಯಕಿ ಹರ್ಮನ್‌ಪ್ರೀತ್‌ ಕೌರ್, ಶಫಾಲಿ ವರ್ಮಾ, ರಿಚಾ ಘೋಷ್‌ ಪಾಕ್‌ ವಿರುದ್ಧ ಅಬ್ಬರಿಸಲೇಬೇಕಿದೆ. ಈ ಮೂಲಕ ಸೆಮಿಫೈನಲ್‌ ಪಂದ್ಯಕ್ಕೆ ತಂಡದ ಆತ್ಮ ವಿಶ್ವಾಸ ಹೆಚ್ಚಿಸಬೇಕಿದೆ.

ಪಿಚ್‌ ರಿಪೋರ್ಟ್‌

ದುಬೈನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಬಹುದು, ಪಂದ್ಯಾವಳಿಯ ಮೊದಲ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಚೇಸಿಂಗ್ ಆಯ್ಕೆ ಮಾಡಿಕೊಂಡ ತಂಡಗಳೇ ಗೆದ್ದವು. ಹೀಗಾಗಿ ಟಾಸ್‌ ಗೆದ್ದ ತಂಡ ಬೌಲಿಂಗ್‌ ಆಯ್ದುಕೊಳ್ಳಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ ಬೇಗನೆ ಆರಂಭ ಪಡೆದು ಇನ್ನಿಂಗ್ಸ್ ಮುಂದುವರೆದಂತೆ ಮುಕ್ತವಾಗಿ ರನ್ ಗಳಿಸುವುದು ಕಷ್ಟವಾಗುತ್ತದೆ. ಇಲ್ಲಿಯವರೆಗೆ 150 ರನ್‌ಗಳ ಗಡಿ ದಾಟಿದ ಏಕೈಕ ತಂಡ ಭಾರತ, ಆದರೆ ಸ್ಪಿನ್ ಸ್ಪಷ್ಟವಾಗಿ ಹೆಚ್ಚು ಪರಿಣಾಮಕಾರಿ ಅಸ್ತ್ರವಾಗಿದ್ದು, ವೇಗಿಗಳು 6.18 ಸರಾಸರಿಯಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ.

China Masters 2026: ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದ ಸಾತ್ವಿಕ್‌ಸಾಯಿರಾಜ್‌-ಚಿರಾಗ್‌ ಶೆಟ್ಟಿ!

ಸಂಭಾವ್ಯ ಆಡುವ ಬಳಗ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪ್ರತೀಕಾ ರಾವಲ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿ.ಕೀ.), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್, ಕ್ರಾಂತಿ ಗೌಡ್, ಎನ್ ಶ್ರೀ ಚರಣಿ, ನಂದನಿ ಶರ್ಮಾ.

ಪಾಕಿಸ್ತಾನ: ಮುನೀಬಾ ಅಲಿ (ವಿ.ಕೀ.), ಶಾವಾಲ್ ಜುಲ್ಫಿಕರ್, ಗುಲ್ ಫಿರೋಜಾ, ಆಯೇಶಾ ಜಾಫರ್, ಸದಾಫ್ ಶಮಾಸ್, ಫಾತಿಮಾ ಸನಾ (ನಾಯಕಿ), ಉಮ್-ಎ-ಹನಿ, ಎಮನ್ ಫಾತಿಮಾ, ತುಬಾ ಹಸನ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌.