China Masters 2026: ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ!
China Masters 2026: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರಸ್ತುತ ಸಾಗುತ್ತಿರುವ 2026ರ ಚೀನಾ ಮಾಸ್ಟರ್ಸ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇದೇ ವೇಳೆ ಭಾರತದ ಅನುಭವಿ ಶಟ್ಲರ್ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಚೀನಾ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್‌ಗೇರಿದ ಚಿರಾಗ್-ಸಾತ್ವಿಕ್. -
ಶೆನ್ಜೆನ್ (ಚೀನಾ): ಭಾರತದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy-Chirag Shetty) ಜೋಡಿ ಪ್ರಸ್ತುತ ನಡೆಯುತ್ತಿರುವ 2026ರ ಚೀನಾ ಮಾಸ್ಟರ್ಸ್ ಸೂಪರ್-750 (China Masters 2026) ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದೆ. ಡೆನ್ಮಾರ್ಕ್‌ನ ಕಿಮ್ ಅಸ್ಟ್ರಪ್ ಮತ್ತು ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ವಿರುದ್ಧ ನಡೆದ ಮೂರು ಗೇಮ್‌ಗಳ ಕಠಿಣ ಹೋರಾಟದ ಪಂದ್ಯದಲ್ಲಿ ಭಾರತದ ಜೋಡಿ ಗೆಲುವು ಸಾಧಿಸಿದೆ. ನಾಲ್ಕನೇ ಶ್ರೇಯಾಂಕದ ಭಾರತೀಯ ಜೋಡಿ 70 ನಿಮಿಷಗಳ ಹೋರಾಟದಲ್ಲಿ 21-13, 16-21, 21-18 ಅಂತರದಲ್ಲಿ ಜಯ ಸಾಧಿಸಿತು.
ಸಾತ್ವಿಕ್ ಮತ್ತು ಚಿರಾಗ್ ಆಕ್ರಮಣಕಾರಿ ಆಟದೊಂದಿಗೆ ಪಂದ್ಯ ಆರಂಭಿಸಿ 5-1ರ ಮುನ್ನಡೆ ಸಾಧಿಸಿದರು. ಸತತವಾಗಿ ಗೆಲುವು ಪಡೆಯುವ ಮೂಲಕ ರ‍್ಯಾಲಿಗಳ ಮೇಲೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಂಡರು. ಭಾರತೀಯ ಜೋಡಿ ಇದೇ ಆಕ್ರಮಣಕಾರಿ ಲಯವನ್ನು ಮುಂದುವರಿಸಿ ಏಳು ಅಂಕಗಳ ಮುನ್ನಡೆ ಪಡೆದುಕೊಂಡಿತು. ಸ್ಕೋರ್ 16-9ಕ್ಕೆ ತಲುಪಿದ ಬಳಿಕ ಮೊದಲ ಗೇಮ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಡೆನ್ಮಾರ್ಕ್ ಜೋಡಿ ವೇಗ ಹೆಚ್ಚಿಸಿಕೊಂಡು ಉತ್ತಮ ಪ್ರತಿರೋಧ ತೋರಿತು. ಭಾರತೀಯ ಆಟಗಾರರು ಬಾರಿಸಿದ ಪ್ರತಿಯೊಂದು ಶಾಟ್‌ಗೂ ಸಮರ್ಥವಾಗಿ ಉತ್ತರ ನೀಡಿದರು.
ಚೀನಾ ಮಾಸ್ಟರ್ಸ್: ಕ್ವಾರ್ಟರ್‌ನಲ್ಲಿ ಸೋತ ಶ್ರೀಕಾಂತ್
ಮೂರನೇ ಗೇಮ್ ಅತ್ಯಂತ ರೋಚಕವಾಗಿದ್ದು, ಎರಡೂ ಜೋಡಿಗಳು ಪರಸ್ಪರ ಸಮಬಲದ ಹೋರಾಟ ನಡೆಸಿತು. ಆ ಮೂಲಕ 17-17ರಲ್ಲಿ ಪಂದ್ಯ ಸಂಪೂರ್ಣ ಸಮಬಲ ಸಾಧಿಸಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅದ್ಭುತ ಸಂಯಮ ಪ್ರದರ್ಶಿಸಿದರು. ಸತತ ಮೂರು ಮಹತ್ವದ ಅಂಕಗಳನ್ನು ಗೆದ್ದ ಭಾರತೀಯ ಜೋಡಿ 20-17ರ ಮುನ್ನಡೆ ಸಾಧಿಸಿತು. ಬಳಿಕ ಒಂದು ಅಂಕ ಕಳೆದುಕೊಂಡರೂ ಧೈರ್ಯ ಕಳೆದುಕೊಳ್ಳದ ಸಾತ್ವಿಕ್–ಚಿರಾಗ್ ಪಂದ್ಯವನ್ನು ತಮ್ಮದಾಗಿಸಿಕೊಂಡು ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಶ್ರೀಕಾಂತ್ ಔಟ್
ವಿಶ್ವದ ಮಾಜಿ ಅಗ್ರ ಶ್ರೇಯಾಂಕದ ಆಟಗಾರ ಕಿಡಂಬಿ ಶ್ರೀಕಾಂತ್ ಅವರ ಚೀನಾ ಮಾಸ್ಟರ್ಸ್ ಅಭಿಯಾನ ಕ್ವಾರ್ಟರ್‌ಫೈನಲ್‌ನಲ್ಲೇ ಅಂತ್ಯಗೊಂಡಿದೆ. ಹಾಂಕಾಂಗ್‌ನ ಲೀ ಚಿಯುಕ್ ಯಿಯು ವಿರುದ್ಧ ನೇರ ಗೇಮ್‌ಗಳಲ್ಲಿ ಸೋತ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದರು. 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 25ನೇ ಶ್ರೇಯಾಂಕದ ಲೀ ಚಿಯುಕ್ ಯಿಯು, 33 ವರ್ಷದ ಭಾರತೀಯ ಆಟಗಾರನನ್ನು 21-16, 21-16 ಅಂತರದಿಂದ ಮಣಿಸಿದರು.
ಏಷ್ಯನ್ ಗೇಮ್ಸ್; ನೀರಜ್ ಚೋಪ್ರಾ ಬದಲು ಯಶ್ವೀರ್ ಆಯ್ಕೆ
ಈ ವರ್ಷದ ಆರಂಭದಲ್ಲಿ ಯುಎಸ್ ಓಪನ್ ಸೂಪರ್ 300ರ ಟೂರ್ನಿಯಲ್ಲಿ ರನ್ನರ್‌ಅಪ್ ಆಗುವ ಮೂಲಕ ಶ್ರೀಕಾಂತ್ ತಮ್ಮ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದರು. ಹಿಂದಿನ ಸುತ್ತಿನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿ, ವಿಶ್ವದ 9ನೇ ಶ್ರೇಯಾಂಕದ ಕೆನಡಾದ ವಿಕ್ಟರ್ ಲೈ ಅವರನ್ನು 21-18, 21-19 ಅಂತರದಿಂದ ಸೋಲಿಸಿದ್ದರು.
ಆದರೆ ಲೀ ಚಿಯುಕ್ ಯಿಯು ವಿರುದ್ಧದ ಪಂದ್ಯದಲ್ಲಿ ಶ್ರೀಕಾಂತ್‌ಗೆ ಮರಳಿ ಲಯ ಕಂಡುಕೊಳ್ಳಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ವಿಶೇಷವಾಗಿ ಮೊದಲ ಗೇಮ್‌ನ ಮಧ್ಯಭಾಗದಲ್ಲಿ ತಮ್ಮ ಮುನ್ನಡೆ ಮತ್ತು ಲಯ ಕಳೆದುಕೊಂಡ ಬಳಿಕ ಅವರು ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದೀಗ ಸೆಮಿಫೈನಲ್‌ನಲ್ಲಿ ಲೀ ಚಿಯುಕ್ ಯಿಯು ಅವರು ಫ್ರಾನ್ಸ್‌ನ ಎರಡನೇ ಶ್ರೇಯಾಂಕದ ಕ್ರಿಸ್ಟೋ ಪೊಪೊವ್ ಅವರನ್ನು ಎದುರಿಸಲಿದ್ದಾರೆ.