ನಿಧಾನಗತಿಯ ಓವರ್; ಭಾರತ ಮಹಿಳಾ ತಂಡಕ್ಕೆ ದಂಡ ವಿಧಿಸಿದ ಐಸಿಸಿ
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಸಮಯದೊಳಗೆ ತಂಡವು ಬೌಲಿಂಗ್ ನಡೆಸಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಪರಾಧಕ್ಕೆ ತಪ್ಪೊಪ್ಪಿಕೊಂಡರು ಮತ್ತು ಪ್ರಸ್ತಾವಿತ ಶಿಕ್ಷೆಯನ್ನು ಒಪ್ಪಿಕೊಂಡರು. ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

-

ದುಬೈ: ಕಳೆದ ಭಾನುವಾರ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್(women's Odi World Cup) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ(India women's cricket team), ಪಂದ್ಯದಲ್ಲಿ ನಿಗದಿಯ ಸಮಯದಲ್ಲಿ ಓವರ್‌ಗಳನ್ನು ಪೂರೈಸದ ಕಾರಣಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ದಂಡ ವಿಧಿಸಿದೆ. ಪಂದ್ಯ ಶುಲ್ಕದ ಐದು ಪ್ರತಿಶತ ದಂಡ ವಿಧಿಸಲಾಗಿದೆ. ಭಾರತವು ತನ್ನ ಗುರಿಗಿಂತ ಒಂದು ಓವರ್ ಕಡಿಮೆ ಇರುವುದು ಕಂಡುಬಂದಿದೆ. ಎಮಿರೇಟ್ಸ್ ಐಸಿಸಿ ಇಂಟರ್ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ಮೈಕೆಲ್ ಪೆರಿಯೆರಾ ಅವರು ಈ ಶಿಕ್ಷೆಯನ್ನು ವಿಧಿಸಿದರು.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಸಮಯದೊಳಗೆ ತಂಡವು ಬೌಲಿಂಗ್ ನಡೆಸಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಪರಾಧಕ್ಕೆ ತಪ್ಪೊಪ್ಪಿಕೊಂಡರು ಮತ್ತು ಪ್ರಸ್ತಾವಿತ ಶಿಕ್ಷೆಯನ್ನು ಒಪ್ಪಿಕೊಂಡರು. ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.
ಈ ಆರೋಪವನ್ನು ಆನ್-ಫೀಲ್ಡ್ ಅಂಪೈರ್‌ಗಳಾದ ಸ್ಯೂ ರೆಡ್‌ಫರ್ನ್ ಮತ್ತು ನಿಮಾಲಿ ಪೆರೆರಾ, ಮೂರನೇ ಅಂಪೈರ್ ಕಿಮ್ ಕಾಟನ್ ಮತ್ತು ನಾಲ್ಕನೇ ಅಂಪೈರ್ ಜಾಕ್ವಿನ್ ವಿಲಿಯಮ್ಸ್ ಹೊರಿಸಿದ್ದಾರೆ.
ಇದನ್ನೂ ಓದಿ INDW vs AUSW: ಸತತ 2ನೇ ಸೋಲು ಕಂಡ ಭಾರತ; ಆಸೀಸ್‌ಗೆ ಹ್ಯಾಟ್ರಿಕ್ ಜಯ
ಪಂದ್ಯದಲ್ಲಿ 331 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 3 ವಿಕೆಟ್ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಸದ್ಯ 4 ಪಂದ್ಯಗಳಿಂದ 7 ಅಂಕ ಗಳಿಸಿರುವ ಆಸೀಸ್, ಅಜೇಯವಾಗಿ ಉಳಿದಿದ್ದು ಸೆಮಿಫೈನಲ್‌ನತ್ತ ಮುನ್ನುಗ್ಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 48.5 ಓವರಲ್ಲಿ ಭಾರತ 330 ರನ್‌ಗೆ ಆಲೌಟ್ ಆಗಿತ್ತು. ಸತತ ಎರಡು ಸೋಲು ಕಂಡಿರುವ ಭಾರತಕ್ಕೆ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲುವ ಒತ್ತಡವಿದೆ.