ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MI vs RCB: ವಿರಾಟ್-ರೋಹಿತ್‌ ಆಟ ನೋಡಲು ಅಭಿಮಾನಿಗಳ ಕಾತರ

IPL 2026: ತಂಡಗಳ ಬಲಾಬಲ ನೋಡುವಾಗ ಈವರೆಗೆ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 19 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದರೆ, 15 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆರ್‌ಸಿಬಿ ಕಳೆದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ.

Rohit Sharma and Virat Kohli

ಮುಂಬಯಿ, ಎ.12: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(MI vs RCB) ತಂಡಗಳು ಇಂದು(ಭಾನುವಾರ) ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೋಲುಗಳನ್ನು ಮೆಟ್ಟಿ ನಿಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿ ನಿಂತಿವೆ. ಆರ್‌ಸಿಬಿ ಕಳೆದ ಪಂದ್ಯದಲ್ಲಿ ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಸೋತರೆ, ಮುಂಬೈ ತಂಡವು 13 ವರ್ಷಗಳಲ್ಲಿ ಮೊದಲ ಬಾರಿಗೆ ಋತುವಿನ ಮೊದಲ ಪಂದ್ಯವನ್ನು ಗೆದ್ದ ನಂತರ ಆಡಿದ ಎರಡು ಪಂದ್ಯಗಳಲ್ಲಿ ಭಾರೀ ಸೋಲುಗಳನ್ನು ಅನುಭವಿಸಿತು.

ಈ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ, ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಎದುರು ಬದುರು ನೋಡುವ ಅವಕಾಶವೂ ಸಿಗಲಿದೆ. ಮಾತ್ರವಲ್ಲದೆ ಈ ಟೂರ್ನಿಯಲ್ಲಿ ವಿರಾಟ್–ರೋಹಿತ್ ಇಬ್ಬರೂ ಅಮೋಘ ಲಯದಲ್ಲಿದ್ದಾರೆ. ಆದ್ದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿ ಗರಿಗೆದರಿದೆ.

ಐಪಿಎಲ್‌ನಲ್ಲಿ 10 ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದ ಪಂಜಾಬ್ ಕಿಂಗ್ಸ್

ಆರ್‌ಸಿಬಿ ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಆಘಾತ ಅನುಭವಿಸಿತು. ಅತ್ತ ಮುಂಬೈ‌ ಇಂಡಿಯನ್ಸ್ ತವರಿನ ಮೊದಲ ಪಂದ್ಯ ಗೆದ್ದ ಬಳಿಕ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ಮತ್ತೆ ಮುಂಬೈ ತನ್ನ ತವರಿಗೆ ಮರಳಿದೆ. ಅದರಿಂದಾಗಿ ಹಾರ್ದಿಕ್ ಬಳಗದ ಆತ್ಮವಿಶ್ವಾಸವೂ ಮರುಕಳಿಸಿದೆ. ಜಸ್‌ಪ್ರೀತ್ ಬೂಮ್ರಾ ಅವರು ಟೂರ್ನಿಯಲ್ಲಿ ವಿಕೆಟ್ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ವಿರಾಟ್, ಸಾಲ್ಟ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಇರುವ ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆಯು ಮುಂಬೈನ ಬೌಲಿಂಗ್‌ ಸವಾಲು ಎದುರಿಸಬೇಕಿದೆ.

ತಂಡಗಳ ಬಲಾಬಲ ನೋಡುವಾಗ ಈವರೆಗೆ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 19 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದರೆ, 15 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆರ್‌ಸಿಬಿ ಕಳೆದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ.

ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ವೇಳೆ 28°C ನಿಂದ 33°C ತಾಪಮಾನ ಇರಲಿದೆ. ಎರಡನೇ ಇನ್ನಿಂಗ್ಸ್‌ನ 12ನೇ ಓವರ್‌ ಬಳಿಕ ಹೆಚ್ಚಿನ ಇಬ್ಬನಿ ಬೀಳುವ ನಿರೀಕ್ಷೆಯಿದೆ. ಮಳೆ ಸಾಧ್ಯತೆ ಶೇ.5 ಕ್ಕಿಂತಲೂ ಕಡಿಮೆ ಇದೆ.

ಸಂಭಾವ್ಯ ತಂಡಗಳು

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೋಶ್ ಹ್ಯಾಜಲ್‌ವುಡ್‌.

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ (ವಿ.ಕೀ.), ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಎ. ಎಮ್ ಗಜನ್ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಪಂದ್ಯದ ವಿವರ

ಸಮಯ: ಸಂಜೆ 07: 30ಕ್ಕೆ

ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌