ಐಪಿಎಲ್‌ನಲ್ಲಿ 10 ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದ ಪಂಜಾಬ್ ಕಿಂಗ್ಸ್
Punjab Kings: ಟಿ20 ಕ್ರಿಕೆಟ್‌ನಲ್ಲಿ 200+ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ, ಪಂಜಾಬ್ ಕಿಂಗ್ಸ್ ನಂತರ ಆಸ್ಟ್ರೇಲಿ ನಂತರದ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವು 20 ಓವರ್‌ಗಳ ಸ್ವರೂಪದಲ್ಲಿ ಏಳು ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.
Punjab Kings -
ಮುಲ್ಲನಪುರ, ಎ.12: ಸನ್‌ರೈಸರ್ಸ್ ಹೈದರಾಬಾದ್(PBKS vs SRH) ವಿರುದ್ಧ ಬೃಹತ್ ಮೊತ್ತದ ಗುರಿ ಬೆನ್ನಟ್ಟಿ 6 ವಿಕೆಟ್ ಅಂತರದ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್(Punjab Kings) ತಂಡ ಐಪಿಎಲ್‌ನಲ್ಲಿ ನೂತನ ಮೈಲುಗಲ್ಲೊಂದನ್ನು ನಿರ್ಮಿಸಿದೆ. ಗರಿಷ್ಠ 10 ಬಾರಿ 200 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ನಡೆಸಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.
ಶನಿವಾರ ನಡೆದ ಐಪಿಎಲ್‌ನ ದಿನದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 220 ರನ್ ಗುರಿಯನ್ನು ಪಂಜಾಬ್ ತಂಡವು ಬೆನ್ನಟ್ಟಿ ಗೆಲುವು ಸಾಧಿಸಿತು. ನಾಯಕ ಶ್ರೇಯಸ್ ಅಯ್ಯರ್ 33 ಎಸೆತಗಳಲ್ಲಿ ಅಜೇಯ 69 ರನ್, ಆರಂಭಿಕ ಜೋಡಿ ಪ್ರಿಯಾಂಶ್ ಆರ್ಯ (57) ಮತ್ತು ಪ್ರಭಸಿಮ್ರನ್ ಸಿಂಗ್ (51) ಕೂಡ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಆಟದ ಬಲದಿಂದ ತಂಡವು 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿತು.
ಟಿ20 ಕ್ರಿಕೆಟ್‌ನಲ್ಲಿ 200+ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ, ಪಂಜಾಬ್ ಕಿಂಗ್ಸ್ ನಂತರ ಆಸ್ಟ್ರೇಲಿ ನಂತರದ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವು 20 ಓವರ್‌ಗಳ ಸ್ವರೂಪದಲ್ಲಿ ಏಳು ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.
ಐಪಿಎಲ್‌ನಲ್ಲಿ 200+ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಇದುವರೆಗೆ 6 ಬಾರಿ ಈ ಸಾಧನೆಗೈದಿದೆ. ಆ ಬಳಿಕ ರಾಜಸ್ಥಾನ್ ರಾಯಲಸ್(5) ಮತ್ತು ಸನ್‌ರೈಸರ್ಸ್ ಹೈದರಾಬಾದ್(4) ಕಾಣಿಸಿಕೊಂಡಿದೆ.
200ಕ್ಕೂ ಹೆಚ್ಚು ರನ್ ಗುರಿ ಬೆನ್ನಟ್ಟಿ ಗೆದ್ದ ತಂಡಗಳು (ಐಪಿಎಲ್)
ಪಂಜಾಬ್ ಕಿಂಗ್ಸ್ -10
ಮುಂಬೈ ಇಂಡಿಯನ್ಸ್-6
ರಾಜಸ್ಥಾನ ರಾಯಲ್ಸ್-5
ಸನ್‌ರೈಸರ್ಸ್ ಹೈದರಾಬಾದ್-4
ರಾಯಲ್ ಚಾಲೆಂಜರ್ಸ್ ಬೆಂಗಳೂರು-4
ಐಪಿಎಲ್‌ನಲ್ಲಿ ಪಂಜಾಬ್ ತಂಡ ಬೆನ್ನಟ್ಟಿದ ಅತ್ಯಧಿಕ ಗುರಿಗಳು
262 vs ಕೆಕೆಆರ್, ಕೋಲ್ಕತ್ತಾ (2024)
220 vs ಎಸ್‌ಆರ್‌ಹೆಚ್, ಮುಲ್ಲನ್‌ಪುರ (2026)
210 vs ಸಿಎಸ್‌ಕೆ, ಚೆನ್ನೈ (2026)
206 vs ಸಿಎಸ್‌ಕೆ, ಅಬುಧಾಬಿ (2014)
206 vs ಎಸ್‌ಆರ್‌ಹೆಚ್, ಹೈದರಾಬಾದ್ (2014)
206 vs ಆರ್‌ಸಿಬಿ, ನವಿ ಮುಂಬೈ (2022)
CSK vs DC: ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ
ಸಂಕ್ಷಿಪ್ತ ಸ್ಕೋರು
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 6ಕ್ಕೆ 219 (ಅಭಿಷೇಕ್ ಶರ್ಮಾ 74, ಟ್ರಾವಿಸ್ ಹೆಡ್ 38, ಇಶಾನ್ ಕಿಶನ್ 27, ಹೆನ್ರಿಚ್ ಕ್ಲಾಸೆನ್ 39; ಅರ್ಷದೀಪ್ ಸಿಂಗ್ 50ಕ್ಕೆ2, ಶಶಾಂಕ್ ಸಿಂಗ್ 20ಕ್ಕೆ2).
ಪಂಜಾಬ್ ಕಿಂಗ್ಸ್: 18.5 ಓವರ್‌ಗಳಲ್ಲಿ 4ಕ್ಕೆ 223 (ಪ್ರಿಯಾಂಶ್ ಆರ್ಯ 57, ಪ್ರಭಸಿಮ್ರನ್ ಸಿಂಗ್ 51, ಶ್ರೇಯಸ್ ಅಯ್ಯರ್ ಔಟಾಗದೇ 69; ಹರ್ಷ್ ದುಬೆ 38ಕ್ಕೆ1, ಶಿವಾಂಗ್ ಕುಮಾರ್ 33ಕ್ಕೆ3.