ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2026: ಜ. 9ರಿಂದ ನಾಲ್ಕನೇ ಆವೃತ್ತಿಯ ಡಬ್ಲ್ಯುಪಿಎಲ್‌ ಆರಂಭ

ನ್ಯೂಜಿಲ್ಯಾಂಡ್‌ನ ಆಲ್‌ರೌಂಡರ್‌ ಅಮೆಲಿಯಾ ಕೆರ್‌. 3 ಕೋಟಿ ರೂ.ಗೆ ಮತ್ತೆ ಮುಂಬೈ ಇಂಡಿಯನ್ಸ್‌ ತಂಡ ಸೇರಿದರು. ಈ ಹಿಂದಿನ ಮೂರು ಆವೃತ್ತಿಯಲ್ಲಿಯೂ ಅವರು ಮುಂಬೈ ಪರ ಆಡಿದ್ದರು. ಆರ್‌ಸಿಬಿಯ ಮಾಜಿ ವೇಗಿ ರೇಣುಕಾ ಸಿಂಗ್ 60 ಲಕ್ಷ ರೂ.ಗೆ ಗುಜರಾತ್‌ ತಂಡಕ್ಕೆ ಮಾರಾಟವಾದರು. ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ 1.10 ಕೋಟಿ ರೂ.ಗೆ ಡೆಲ್ಲಿ ತಂಡದ ಪಾಲಾದರು.

ಹರಾಜಿನಲ್ಲಿ ಭಾರೀ ಮೊತ್ತ ಪಡೆದ ದೀಪ್ತಿ ಶರ್ಮ

ಮಹಿಳಾ ಪ್ರೀಮಿಯರ್ ಲೀಗ್‌ ಟ್ರೋಫಿ -

Abhilash BC
Abhilash BC Nov 27, 2025 4:10 PM

ಮುಂಬಯಿ, ನ.27: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಮುಂದಿನ ಆವೃತ್ತಿಯ ದಿನಾಂಕ ಘೋಷಣೆಯಾಗಿದೆ. ಪಂದ್ಯಾವಳಿಯು ಜನವರಿ 9 ರಿಂದ ಫೆಬ್ರವರಿ 5 ರವರೆಗೆ ನವಿ ಮುಂಬೈ ಮತ್ತು ವಡೋದರಲ್ಲಿ ನಡೆಯಲಿದೆ. ಗುರುವಾರ ಮೆಗಾ ಹರಾಜು ಆರಂಭಕ್ಕೂ ಮುನ್ನ ಟೂರ್ನಿಯ ದಿನಾಂಕವನ್ನು ಪ್ರಕಟಿಸಲಾಯಿತು. ಫೈನಲ್‌ ಪಂದ್ಯ ವಡೋದರಲ್ಲಿ ನಡೆಯಲಿದೆ.

ಕಳೆದ ವರ್ಷ ಬೆಂಗಳೂರು, ಲಕ್ನೋ, ಮುಂಬೈ ಮತ್ತು ವಡೋದರಾದಲ್ಲಿ ಪಂದ್ಯಾವಳಿ ನಡೆದಿತ್ತು. ಮುಂಬೈನ ಬ್ರಬೋರ್ನ್ ಫೈನಲ್‌ ಪಂದ್ಯದ ಆತಿಥ್ಯ ವಹಿಸಿತ್ತು. ಈ ಬಾರಿ ಕೇವಲ 2 ತಾಣಗಳಲ್ಲಿ ಮಾತ್ರ ಟೂರ್ನಿ ನಡೆಯಲಿದೆ.

ನ್ಯೂಜಿಲ್ಯಾಂಡ್‌ನ ಆಟಗಾರ್ತಿ ಸೋಫಿ ಡಿವೈನ್ ಅವರು ಮೆಗಾ ಹರಾಜಿನ ಮಾರ್ಕ್ಯೂ ಆಟಗಾರ್ತಿಯರ ಪಟ್ಟಿಯಲ್ಲಿ ಮೊದಲ ಆಟಗಾರ್ತಿಯಾಗಿ ಹರಾಜಾದರು. ಅವರನ್ನು 2 ಕೋಟಿಗೆ ಗುಜರಾತ್‌ ಜೈಂಟ್ಸ್‌ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. 50 ಲಕ್ಷ ಮೂಲ ಬೆಲೆಯೊಂದಿಗೆ ಅವರು ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಆರ್‌ಸಿಬಿ ಅವರನ್ನು ಖರೀದಿಸಲು ಆಸಕ್ತಿ ತೋರಿದರೂ ಗುಜರಾತ್‌ 1 ಕೋಟಿ ಬಿಡ್ ಮಾಡಿದ ನಂತರ ರೇಸ್‌ನಿಂದ ಹಿಂದೆ ಸರಿಯಿತು. ಡೆಲ್ಲಿ ಕ್ಯಾಪಿಟಲ್ಸ್‌ 1.5 ಕೋಟಿ ತನಕ ಬಿಡ್‌ ಮಾಡಿ ಆ ನಂತರ ಹಿಂದೆ ಸರಿಯಿತು.



ದೀಪ್ತಿಗೆ ಜಾಕ್‌ಪಾಟ್

ಏಕದಿನ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ದೀಪ್ತಿ ಶರ್ಮ ಅವರನ್ನು 3.20 ಕೋಟಿಗೆ ಯುಪಿ ವಾರಿಯರ್ಸ್‌ ತಂಡ ಆರ್‌ಟಿಎಂ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ 1.10 ಕೋಟಿ ರೂ.ಗೆ ಡೆಲ್ಲಿ ತಂಡದ ಪಾಲಾದರು. ಅಚ್ಚರಿ ಎಂದರೆ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ ಅವರನ್ನು ಮೊದಲ ಸುತ್ತಿನ ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡಲಿಲ್ಲ.

ಇದನ್ನೂ ಓದಿ WPL 2025: ಹರ್ಮನ್‌ಪ್ರೀತ್ ಕೌರ್‌ಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ

ನ್ಯೂಜಿಲ್ಯಾಂಡ್‌ನ ಆಲ್‌ರೌಂಡರ್‌ ಅಮೆಲಿಯಾ ಕೆರ್‌. 3 ಕೋಟಿ ರೂ.ಗೆ ಮತ್ತೆ ಮುಂಬೈ ಇಂಡಿಯನ್ಸ್‌ ತಂಡ ಸೇರಿದರು. ಈ ಹಿಂದಿನ ಮೂರು ಆವೃತ್ತಿಯಲ್ಲಿಯೂ ಅವರು ಮುಂಬೈ ಪರ ಆಡಿದ್ದರು. ಆರ್‌ಸಿಬಿಯ ಮಾಜಿ ವೇಗಿ ರೇಣುಕಾ ಸಿಂಗ್ 60 ಲಕ್ಷ ರೂ.ಗೆ ಗುಜರಾತ್‌ ತಂಡಕ್ಕೆ ಮಾರಾಟವಾದರು. ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ 1.9 ಕೋಟಿಗೆ ಯುಪಿ ವಾರಿಯರ್ಸ್‌ ತಂಡ ಸೇರಿದರು.

ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್ ಜೆಸ್ ಜೊನಾಸ್ಸೆನ್ ಭುಜದ ಗಾಯದ ಕಾರಣದಿಂದಾಗಿ ಹರಾಜಿನಿಂದ ಹಿಂದೆ ಸರಿದರು. ಇದರಿಂದಾಗಿ ಆಯೋಜಕರು ಅಂತಿಮ ಹರಾಜು ಪಟ್ಟಿಯನ್ನು 276 ಆಟಗಾರರಿಗೆ ಸೀಮಿತಗೊಳಿಸಿದರು. ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಭಾಗವಾಗಿದ್ದರು. ಜೊನಾಸ್ಸೆನ್ 24 ಪಂದ್ಯಗಳಲ್ಲಿ, ಅವರು 138.50 ಸ್ಟ್ರೈಕ್ ರೇಟ್‌ನಲ್ಲಿ 295 ರನ್ ಗಳಿಸಿದ್ದಾರೆ ಮತ್ತು 7.74 ರ ಎಕಾನಮಿಯಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಐದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.