ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2026: ಜ. 7 ರಿಂದ ಫೆ. 3 ರವರೆಗೆ ಮುಂಬೈ, ಬರೋಡಾದಲ್ಲಿ ಡಬ್ಲ್ಯುಪಿಎಲ್‌ ಸಾಧ್ಯತೆ

ಕಳೆದ ವರ್ಷ ಟೂರ್ನಿಯನ್ನು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ದ್ವಿತೀಯ ವಾರದಲ್ಲಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿ ಭಾರತಲ್ಲಿ ನಡೆಯಲಿದೆ. ಹೀಗಾಗಿ ಜನವರಿಯಲ್ಲೇ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭಿಸಲು ನಿರ್ಧರಿಸಲಾಗಿದೆ.

ಮುಂಬಯಿ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL 2026) ಕ್ರಿಕೆಟ್‌ ಪಂದ್ಯಾವಳಿ ಜನವರಿ 7 ರಿಂದ ಫೆಬ್ರವರಿ 3 ರವರೆಗೆ ಮುಂಬೈ ಮತ್ತು ಬರೋಡಾದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಟಗಾರ್ತಿಯ ಹರಾಜು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ. ಉದ್ಘಾಟನ ಪಂದ್ಯ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ಬಿಸಿಸಿಐ ಇನ್ನೂ ಫ್ರಾಂಚೈಸಿ ಮಾಲೀಕರಿಗೆ ಔಪಚಾರಿಕವಾಗಿ ಮಾಹಿತಿ ನೀಡಿಲ್ಲ, ಆದರೆ ಸ್ಥಳಗಳ ಕುರಿತು ಅನೌಪಚಾರಿಕ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ನವೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿರುವ WPL ಹರಾಜಿನ ಸಂದರ್ಭದಲ್ಲಿ ಐದು ತಂಡಗಳಿಗೆ ಸ್ಥಳಗಳ ಕುರಿತು ಅಧಿಕೃತವಾಗಿ ತಿಳಿಸುವ ನಿರೀಕ್ಷೆಯಿದೆ. ಮುಂಬೈ ಮತ್ತು ಬರೋಡಾ ಜತೆ ಬೆಂಗಳೂರು ಹಾಗೂ ಲಕ್ನೋ ಕೂಡ ಟೂರ್ನಿ ಆಯೋಜಿಸಲು ಪೈಪೋಟಿಯಲ್ಲಿದ್ದವು.

ಕಳೆದ ವರ್ಷ ಟೂರ್ನಿಯನ್ನು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ದ್ವಿತೀಯ ವಾರದಲ್ಲಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿ ಭಾರತಲ್ಲಿ ನಡೆಯಲಿದೆ. ಹೀಗಾಗಿ ಜನವರಿಯಲ್ಲೇ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ IPL 2026: ಐಪಿಎಲ್‌ ಮಿನಿ ಹರಾಜಿನಲ್ಲಿ ಆಂಡ್ರೆ ರಸೆಲ್‌ ಮೇಲೆ ಕಣ್ಣಿರುವ 3 ತಂಡಗಳು!

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ತನ್ನ ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಕಾರಣ, WPL ಬೆಳೆಯುವ ವರ್ಷ ಇದಾಗಿರಬಹುದು. ಲೀಗ್‌ಗೆ ಹಿಂತಿರುಗಿ ನೋಡುವುದಾದರೆ, ಎಲ್ಲಾ ಫ್ರಾಂಚೈಸಿಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಘೋಷಿಸಲಾಗಿದೆ. ಯುಪಿ ವಾರಿಯರ್ಸ್ ತಂಡವು ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಉಳಿಸಿಕೊಳ್ಳದಿದ್ದದು ಅತ್ಯಂತ ದೊಡ್ಡ ಅಚ್ಚರಿ ಮೂಡಿಸಿತ್ತು. ಕಳೆದ ವರ್ಷ, ಮುಂಬೈ ಇಂಡಿಯನ್ಸ್ ತಂಡವು ಹರ್ಮನ್‌ಪ್ರೀತ್‌ ಕೌರ್ ನೇತೃತ್ವದಲ್ಲಿ ಎರಡನೇ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಯುಪಿ ವಾರಿಯರ್ಸ್‌ ತಂಡದ ಬಳಿ ಅತ್ಯಧಿಕ ಹಣ ಉಳಿತಾಯವಿದೆ. ಫ್ರಾಂಚೈಸಿ ಬಳಿ 14.5 ಕೋಟಿ ಮೊತ್ತವಿದೆ. ಆ ಬಳಿಕ ಗುಜರಾತ್‌ ಜೈಂಟ್ಸ್‌ ಬಳಿ 9 ಕೋಟಿ, ಆರ್‌ಸಿಬಿ ಬಳಿ 6 ಕೋಟಿ ಮೊತ್ತವಿದೆ. 5 ಆಟಗಾರ್ತಿಯನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ಬಳಿ ಅತಿ ಕಡಿಮೆ ಮೊತ್ತ ಉಳಿದಿದೆ. ಅಲ್ಲದೆ ಈ ತಂಡಕ್ಕೆ ರೈಟ್ ಟು ಮ್ಯಾಚ್ (RTM) ಆಯ್ಕೆ ಲಭ್ಯವಿರುದಿಲ್ಲ.

ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿ

ಮುಂಬೈ ಇಂಡಿಯನ್ಸ್: ನಾಟ್-ಸ್ಕಿವರ್ ಬ್ರಂಟ್ (3.5 ಕೋಟಿ), ಹರ್ಮನ್‌ಪ್ರೀತ್ ಕೌರ್ (2.5 ಕೋಟಿ), ಹೇಲಿ ಮ್ಯಾಥ್ಯೂಸ್ (1.75 ಕೋಟಿ), ಅಮನ್‌ಜೋತ್ ಕೌರ್ (1 ಕೋಟಿ), ಜಿ ಕಮಲಿನಿ (50 ಲಕ್ಷ).

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (3.5 ಕೋಟಿ), ರಿಚಾ ಘೋಷ್ (2.75 ಕೋಟಿ), ಎಲ್ಲಿಸ್ ಪೆರ್ರಿ (2 ಕೋಟಿ), ಶ್ರೇಯಾಂಕ ಪಾಟೀಲ್ (60 ಲಕ್ಷ).

ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ (3.5 ಕೋಟಿ), ಬೆತ್ ಮೂನಿ (2.5 ಕೋಟಿ).

ಯುಪಿ ವಾರಿಯರ್ಜ್: ಶ್ವೇತಾ ಸೆಹ್ರಾವತ್ (50 ಲಕ್ಷ).

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ (2.2 ಕೋಟಿ), ಶಫಾಲಿ ವರ್ಮಾ (2.2 ಕೋಟಿ), ಅನ್ನಾಬೆಲ್ ಸದರ್ಲ್ಯಾಂಡ್ (2.2 ಕೋಟಿ), ಮರಿಜಾನ್ನೆ ಕಪ್ (2.2 ಕೋಟಿ), ನಿಕಿ ಪ್ರಸಾದ್ (50 ಲಕ್ಷ).