Young Kohli Fan: ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಪುಟ್ಟ ಅಭಿಮಾನಿ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಕೊಹ್ಲಿ ಗುರುವಾರ ಮಾಡಿದ್ದ ಟ್ವೀಟ್ ಒಂದು ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು. ನೀವು ನಿಜವಾಗಲೂ ಸೋಲುವುದು, ಪ್ರಯತ್ನಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು. 2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ ಆಯ್ಕೆಯಾಗ್ತಾರಾ?, ಐಪಿಎಲ್‌ಗೆ ನಿವೃತ್ತಿ ಘೋಷಿಸುತ್ತಾರಾ? ಹೀಗೆ ಹಲವು ವಿಚಾರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

-

ಪರ್ತ್: ವಿರಾಟ್ ಕೊಹ್ಲಿ(Virat Kohli)ಯನ್ನು ಭೇಟಿಯಾಗುವ ಕನಸು ಲಕ್ಷಾಂತರ ಅಭಿಮಾನಿಗಳಿಗಿರುತ್ತದೆ. ಆದರೆ ಈ ಸಂದರ್ಭ ಎಲ್ಲರಿಗೂ ಸಿಗುವುದಿಲ್ಲ. ಮೂರು ಪಂದ್ಯಗಳ ಸರಣಿಯನ್ನಾಡಲು ಆಸ್ಟ್ರೇಲಿಯಾದಲ್ಲಿರುವ(Australia ODI Series,) ಕೊಹ್ಲಿ ಅಭ್ಯಾಸದ ವೇಳೆ ಪುಟ್ಟ ಅಭಿಮಾನಿಗೆ ಆಟೋಗ್ರಾಫ್(Young Kohli Fan) ನೀಡಿದ್ದಾರೆ. ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಈ ಪುಟ್ಟ ಅಭಿಮಾನಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲೇ ಕುಣಿದು ಕುಪ್ಪಳಿಸುತ್ತಾ ಓಡುತ್ತಾ ಇರುವ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಭಾನುವಾರ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ತಂಡದ ಮೊದಲ ಅಭ್ಯಾಸ ಅವಧಿಯಲ್ಲಿ ಹಿರಿಯ ತಾರೆಯರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪರ್ತ್‌ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದರು. ಅಭ್ಯಾಸದ ಬಳಿಕ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು. ಈ ವೇಳೆ ಪುಟ್ಟ ಅಭಿಮಾನಿಯೂ ಆಟೋಗ್ರಾಫ್ ಪಡೆಯುವ ಯಶಸ್ವಿಯಾದರು.
ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
The happiness of a Kid after getting Virat Kohli's autograph 🥹❤️pic.twitter.com/e5dhcAPVw8
— Suprvirat (@Mostlykohli) October 16, 2025
ರೋಹಿತ್ ಮತ್ತು ಕೊಹ್ಲಿ ನೆಟ್ಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ತರಬೇತಿ ಪಡೆದರು. ನಂತರ ಕೋಚ್ ಗಂಭೀರ್ ಕೋಚ್ ಅವರೊಂದಿಗೆ ಕೆಲ ಕಾಲ ಚರ್ಚೆಗಳನ್ನು ನಡೆಸಿದರು.
ಇದನ್ನೂ ಓದಿ IND vs AUS: ಆಸೀಸ್‌ಗೆ ಮತ್ತೊಂದು ಗಾಯದ ಆಘಾತ; ಸರಣಿಯಿಂದ ಹೊರಬಿದ್ದ ಗ್ರೀನ್
ಕೊಹ್ಲಿ ಗುರುವಾರ ಮಾಡಿದ್ದ ಟ್ವೀಟ್ ಒಂದು ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು. ನೀವು ನಿಜವಾಗಲೂ ಸೋಲುವುದು, ಪ್ರಯತ್ನಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು. 2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ ಆಯ್ಕೆಯಾಗ್ತಾರಾ?, ಐಪಿಎಲ್‌ಗೆ ನಿವೃತ್ತಿ ಘೋಷಿಸುತ್ತಾರಾ? ಹೀಗೆ ಹಲವು ವಿಚಾರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಮಯದಲ್ಲೇ ಕೊಹ್ಲಿಯಿಂದ ಇಂತದ್ದೊಂದು ಟ್ವೀಟ್ ಹೊರಬಿದ್ದಿದ್ದು ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿತ್ತು.