ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಭಕ್ತರಿಂದ ಪ್ರತಿಭಟನೆ
Dharmasthala: ಶ್ರೀಕ್ಷೇತ್ರದ ಅಭಿಮಾನಿಗಳು ರಾಜ್ಯಾದ್ಯಂತ ಸಿಡಿದೆದ್ದಿದ್ದಾರೆ. ಈ ಅಪಪ್ರಚಾರ ಮಾಡುತ್ತಿರುವವರು, ಅವರಿಗೆ ಎಲ್ಲಿಂದ ಫಂಡಿಂಗ್ ಆಗುತ್ತಿದೆ, ದೇಶದ್ರೋಹಿಗಳ ಹಾಗೂ ಧರ್ಮದ್ರೋಹಿಗಳ ಕೈವಾಡ ಇದರ ಹಿಂದೆ ಇದೆಯೇ ಎಂಬ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ.