ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಏ.6ರಿಂದ 10ರವರೆಗೆ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ಏ.6ರಿಂದ ಗಿಡಗನಹಳ್ಳಿ ಶ್ರೀ ರಂಗನಾಥ ಸ್ವಾಮೀ ಜಾತ್ರಾ ಮಹೋತ್ಸವ ಆರಂಭ

ಏ. ೭ರಂದು ಸೋಮವಾರ ರಾತ್ರಿ ೯ಗಂಟೆಗೆ ಗರುಡೋತ್ಸವ (ದವನೋತ್ಸವ), ೮ರಂದು ಮಂಗಳವಾರ ರಾತ್ರಿ ೯ಕ್ಕೆ ಕಲ್ಲುಗಾಲಿ ರಥೋತ್ಸವ, ೯ರಂದು ಬುಧವಾರ ರಾತ್ರಿ ೯ಕ್ಕೆ ಗಜಪತಿ ಮೇಲೆ ಸ್ವಾಮಿ ಉತ್ಸವ ಜರುಗಲಿದೆ. ಕೊನೆಯ ದಿನವಾದ ೧೦ರಂದು ಗುರುವಾರ ರಾತ್ರಿ ೧೦ ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ವೈಭವದ ಹೂವಿನ ಉತ್ಸವ ನಡೆಯಲಿದೆ.

ಶಿರಾ ಸಾರ್ವಜನಿಕ ಆಸ್ಪತ್ರೆಗೆ 50 ಲಕ್ಷ ವೆಚ್ಚದ ಪ್ರಯೋಗಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ

ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸಲು ಬದ್ಧ; ಟಿ.ಬಿ.ಜಯಚಂದ್ರ

ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ವೈದ್ಯರುಗಳು ಸರಿಯಾದ ವೇಳೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ನೀಡಬೇಕು, ರೋಗಿಗಳಿಗೆ ತೊಂದರೆ ಆಗಬಾರದು ಇತ್ತೀಚಿಗೆ ಕಲುಷಿತ ನೀರು ಹಾಗೂ ಕಲಬೆರಕೆ ಆಹಾರ ದಿಂದ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಅರಿವು ಬಹಳ ಮುಖ್ಯ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ.

ವೆಬ್ ಸೀರಿಸ್ ನೋಡಿ ಬ್ಯಾಂಕ್‌ ದರೋಡೆ; 6 ಮಂದಿ ಬಂಧನ, 13 ಕೋಟಿ ಮೌಲ್ಯದ ಚಿನ್ನಾಭರಣ ವಶ

ವೆಬ್ ಸೀರಿಸ್ ನೋಡಿ ಬ್ಯಾಂಕ್‌ ದರೋಡೆ; 6 ಮಂದಿ ಬಂಧನ

Nyamati SBI bank robbery: ಅಕ್ಟೋಬರ್ 24 ರಂದು ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ನಡೆದಿತ್ತು. ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಇದೀಗ ಆರು ತಿಂಗಳ ಬಳಿಕ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿನ ಪೊಲೀಸರ ತಂಡ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿದೆ.

Chikkaballapur News: ನೂತನವಾಗಿ ನಿರ್ಮಾಣ ಮಾಡಿರುವ ಶಾದಿ ಮಹಲ್ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ

ಶಾದಿಮಹಲ್ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ: ಎಸ್.ಎನ್.ಸುಬ್ಬಾರೆಡ್ಡಿ

16 ಮಸೀದಿಗಳಿಂದಲೂ ಅಲ್ಲಾಹುನನ್ನು ನೆನೆಯುತ್ತಾ ಪಾದಪಾತ್ರೆ ಮೂಲಕ ಕೊಡಿಕೊಂಡ ರಸ್ತೆಯಲ್ಲಿ ರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಮುಸ್ಲಿಂ ಭಾಂಧವರನ್ನು ಅಲಿಂಗನೆ ಮಾಡಿಕೊಂಡು ಶುಭಾಶಯ ಕೋರಿದರು.

45 Movie: ತೆರೆಮೇಲೆ ಮೊದಲ ಬಾರಿಗೆ ಒಂದಾದ ಶಿವಣ್ಣ-ಉಪೇಂದ್ರ-ರಾಜ್‌ ಶೆಟ್ಟಿ; ಬಹುನಿರೀಕ್ಷಿತ ʼ45ʼ ಚಿತ್ರದ ಟೀಸರ್ ಔಟ್‌

ಕುತೂಹಲ ಮೂಡಿಸಿದೆ ಬಹುನಿರೀಕ್ಷಿತ ʼ45ʼ ಚಿತ್ರದ ಟೀಸರ್

ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಶಿವ ರಾಜ್‌ಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅಭಿನಯದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼ45ʼ ಚಿತ್ರದ ಟೀಸರ್ ಯುಗಾದಿ ಹಬ್ಬದದಂದು ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವ ರಾಜ್‌ಮಾರ್ ಟೀಸರ್ ಅನಾವರಣಗೊಳಿಸಿದರು.

ಕೃಷಿಕೂಲಿಕಾರರ ಸಂಘದ ವಿಭಾಗೀಯ ಮಟ್ಟದ ಸಭೆ; ಶ್ರೀಮಂತರ ಸಂಪತ್ತು ದುಪ್ಪಟ್ಟು

ಜನಸಾಮಾನ್ಯರ ಸಂಪತ್ತು ಮಾತ್ರ ಹೆಚ್ಚಾಗಿಲ್ಲ: ಬಿ.ವೆಂಕಟ್ ಆರೋಪ

ಪ್ರತಿ ವರ್ಷವು ದೇಶದ ಸಂಪತ್ತು ಖಾಸಗಿ ಕಂಪನಿಯವರ, ಶ್ರೀಮಂತರ, ಶಾಸಕರ, ಸಂಸದರ ಆಸ್ತಿ, ಸಂಪತ್ತು ದ್ವಿಗುಣ ಆಗುತ್ತಿದೆ. ಕೃಷಿ ಕೂಲಿ ಕಾರ್ಮಿಕರು ದೇಶದ ಸಂಪತ್ತನ್ನು ಹೆಚ್ಚು ಮಾಡು ತ್ತಿದ್ದಾರೆ. ಬೆವರ ಹನಿಗಳು ಸುರಿಸಿ, ಕಷ್ಟಪಟ್ಟು ದುಡಿಯುವ ವರ್ಗದ ಜನರಿಗೆ, ಸಾಮಾನ್ಯ ಜನರಿಗೆ ಹೆಚ್ಚು ಸುಂಕ ವಿಧಿಸಲಾಗುತ್ತಿದೆ.

MLA K H PuttaswamyGowdru: ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು

ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಪುಟ್ಟಸ್ವಾಮಿ ಗೌಡ ಭಾಗಿ

ರಂಜಾನ್ ಹಬ್ಬಕ್ಕೂ ಒಂದು ತಿಂಗಳ ಮುಂಚೆಯೇ ಮುಸ್ಲಿಂ ಬಾಂಧವ ರೆಲ್ಲರೂ ಉಪವಾಸದ ವ್ರತ ಆಚರಿಸಿ ಪ್ರತಿನಿತ್ಯವು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ತಮ್ಮದೇ ಆದ ಆಚರಣೆಯಲ್ಲಿ ಸಂತೋಷದಿಂದ ಭಾಗಿಯಾಗಿ ಈ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವುದು ಸಂತಸದ ವಿಷಯ ಮುಂದೆಯೂ ನಾನು ಮುಸ್ಲಿಂ ಸಮುದಾಯದ ಪರವಾಗಿ ಸದಾ ಇರುತ್ತೇನೆ

Kichcha Sudeepa: ಮುದ್ದು ಮಗುವಿನ ಚಿಕಿತ್ಸೆಗೆ ಸುದೀಪ್‌ ಸಹಾಯಹಸ್ತ; ನೆರವು ನೀಡಲು ಅಭಿಮಾನಿಗಳಲ್ಲೂ ಮನವಿ

ಪುಟಾಣಿ ಮಗುವಿನ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಸುದೀಪ್‌

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ ವಿಡಿಯೊವೊಂದನ್ನು ಮಾಡಿದ್ದು, ಮಗಿವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಅಬಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 1 ವರ್ಷ 10 ತಿಂಗಳ ಪುಟ್ಟ ಮಗು ಕೀರ್ತನಾ ಚಿಕಿತ್ಸೆಗೆ 16 ಕೋಟಿ ರೂ. ಅಗತ್ಯವಿದ್ದು, ಧನ ಸಹಾಯ ಮಾಡುವಂತೆ ಸುದೀಪ್‌ ಕೇಳಿಕೊಂಡಿದ್ದಾರೆ.

Eid Ul Fitr: ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಈದ್‌ ಉಲ್‌ ಫಿತ್ರ್‌ ಸಡಗರ ಸಂಭ್ರಮದಿಂದ ಆಚರಣೆ

ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಒಂದು ತಿಂಗಳ ಕಾಲ ರಮ್ಜಾನ್ ಉಪವಾಸ ಆಚರಿಸಿದ ಮುಸ್ಲಿಮರು,ಈ ಅವಧಿಯಲ್ಲಿ ಮಾಡಿರುವ ವಿಶೇಷ ನಮಾಝ್,ಕುರ್‌ಆನ್ ಪಾರಾಯಣ,ದಾನ ಧರ್ಮ, ಸೇವಾ ಕಾರ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಆತ್ಮಾವಲೋಕನ ನಡೆಸಬೇಕು.ಇದು ಮುಂದಿನ ಜೀವನ ಸುಧಾರಣೆಗೆ ಮಾರ್ಗಸೂಚಿಯಾಗಬೇಕು ಎಂದು ಹೇಳಿದರು

Chikkaballapur News: ಗ್ರಾಮದೇವತೆಗೆ ಅರ್ಧ ಕೆಜಿ ಬೆಳ್ಳಿ ಗಿಫ್ಟ್ ಕೊಟ್ಟ ಮಂಗಳಮುಖಿಯರು

ಸುಮಾರು 53 ಸಾವಿರ ರೂ. ಮೌಲ್ಯದ ಬೆಳ್ಳಿ ಬಿಸ್ಕೆಟ್ ಗಿಫ್ಟ್

ಮಂಗಳಮುಖಿಯರ ಮೇಲಿನ ಕೆಟ್ಟ ಅಭಿಪ್ರಾಯ ಹೋಗಲು ನಿರ್ಧಾರ ಮಾಡಿ ಮಂಗಳಮುಖಿ ಯರ ತಂಡದ ಮುಖ್ಯಸ್ಥೆ ಸಲ್ಮಾ ರವರ ನೇತೃತ್ವದಲ್ಲಿ ಮಂಗಳ ಮುಖಿ ಯಾರು ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮ ದೇವತೆ ಗಂಗಮ್ಮನವರಿಗೆ ವಿಶೇಷ ಪೂಜೆಗಳನ್ನು ಮಾಡಿಸಿ ಅರ್ಧ ಕೆಜಿ ಎಷ್ಟು ಬೆಳ್ಳಿಯ ಬಿಸ್ಕತ್ ದೇವತೆಗೆ ಮುಖವಾಡ ಮಾಡಿಸಲು ನೀಡಿದ್ದಾರೆ.

ಬಂಧಿತ ಆರೋಪಿಗಳಿಂದ 60 ಸಾವಿರ ಮೌಲ್ಯದ ಗಾಂಜಾ ವಶ

ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ ಮಾಡಲು ಬಂದ್ ಇಬ್ಬರು ಆರೋಪಿಗಳನ್ನು ಬಂಧಿಸು ವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿಸ್ಸಾರ್ ಅಹಮದ್ ಬಿನ್ ನಾಸೀರ್ ಅಹಮದ್.(33 ವರ್ಷ)ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಫಯಾಜ್ ಪಾಷ ಬಿನ್ ಫಾರೂಕ್ ಪಾಷ,(32 ವರ್ಷ) ವಾರ್ಡ್ ನಂ13. ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು,ಅರ್ಬಾಜ್ ಖಾನ್ ಬಿನ್ ವಜೀರ್ ಖಾನ್ ಎಂದು ಗುರುತಿಸಲಾಗಿದೆ.

Nandini milk price hike: ನಂದಿನಿ ಹಾಲಿನ ದರ ಹೆಚ್ಚಳ; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!

ನಂದಿನಿ ಹಾಲಿನ ದರ ಹೆಚ್ಚಳ; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!

Nandini milk price hike: ಈ ಹಿಂದೆ ಲೀಟ‌ರ್ ಪೊಟ್ಟಣದಲ್ಲಿ 50 ಮಿ.ಲೀ. ಹೆಚ್ಚುವರಿ ಹಾಲು ನೀಡಿ 2 ರೂ. ಏರಿಕೆ ಮಾಡಲಾಗಿತ್ತು, ಈಗ ಅದನ್ನು ಕೆಎಂಎಫ್‌ ಹಿಂಪಡೆಯಲಿದೆ. ಮಂಗಳವಾರದಿಂದ ಲೀಟರ್‌ ಹಾಲಿನ ಮೇಲೆ 4 ರೂ. ಏರಿಕೆಯಾಗಲಿದ್ದು, ಮೊಸರಿನ ದರವೂ 4 ರೂ. ಏರಿಕೆಯಾಗಲಿದೆ.

MLA Pradeep Eshwar: ಧಾರ್ಮಿಕ ಸಾಮರಸ್ಯವೇ ಬಹುತ್ವ ಭಾರತದ ಹೆಗ್ಗಳಿಕೆ: ಶಾಸಕ ಪ್ರದೀಪ್ ಈಶ್ವರ್ ಅಯ್ಯರ್

ರೇಣು ಮಾಕಲಹಳ್ಳಿ ಈದ್ಗಾ ಮೈದಾನಕ್ಕೆ ಶಾಸಕ ಪ್ರದೀಪ ಈಶ್ವರ ಭೇಟಿ

2024 ನವೆಂಬರ್ 27ರಂದು ಕಮ್ಮಗುಟ್ಟಹಳ್ಳಿ ಪಂಚಾಯಿತಿಯ ರೇಣು ಮಾಕಲಹಳ್ಳಿ ಗ್ರಾಮದಲ್ಲಿ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ  ಸಮುದಾಯದ ಮುಖಂಡರು ಮಸೀದಿಗೆ ರಸ್ತೆ ಬೇಕು ಎಂದು ಮಾಡಿದ್ದ ಮನವಿಗೆ ಓಗೊಟ್ಟು ರಂಜಾನ್ ಹಬ್ಬದ ದಿನವೇ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ದ್ದೇನೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದರು.

Chikkaballapur News: ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ

ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು

ಈದ್ಗಾ ಮೈದಾನಕ್ಕೆ ಮಾಜಿ ಶಾಸಕರಾದ ಕೆ.ಪಿ ಬಚ್ಚೆಗೌಡ ಆಗಮಿಸಿ ರಂಜಾನ್ ಹಬ್ಬದ ಶುಭ ಕೋರಿದರು ಕಳೆದ 30 ವರ್ಷಗಳಿಂದ ಸತತವಾಗಿ ಈದ್ಗಾ ಮೈದಾನಲ್ಲಿ ಬಂದು ಪ್ರೀತಿ ಹಂಚಿಕೊಳ್ಳುತ್ತಿದ್ದು ಎಲ್ಲರೂ ಪ್ರೀತಿ ಸೌಹಾರ್ದತೆ ಬದುಕು ಬಾಳುವ ಮೊಲಕ ಶಾಂತಿ ಸಂದೇಶ ಸಾರೂಣ ಎಂದರು.

KAS Officers Transfer: 13 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

13 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

KAS Officers Transfer: ಐಎಎಸ್‌ ಅಧಿಕಾರಿಗಳಾದ ಸೈಯಿದಾ ಆಯಿಷಾ, ಅನ್ನಪೂರ್ಣ ಕೆ, ಶಬೀರ್ ಬಾಷಾ ಗಂಟಿ, ಕ್ಯಾಪ್ಟನ್ ಶ್ರೀನಿವಾಸಗೌಡ, ಮಮತ ಹೊಸಗೌಡರ್ ಸೇರಿ 13 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೊಂಡ 13 ಕೆಎಎಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ.

Celebrities Ugadi Fashion: ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು

ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು

Celebrities Ugadi Fashion: ವೈವಿಧ್ಯಮಯ ಎಥ್ನಿಕ್‌ವೇರ್‌ ಹಾಗೂ ಟ್ರೆಡಿಷನಲ್‌ವೇರ್‌ಗಳಲ್ಲಿ ಕಾಣಿಸಿಕೊಂಡ ಸೆಲೆಬ್ರೆಟಿಗಳು ಯುಗಾದಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಯಾರ‍್ಯಾರು ಹೇಗೆಲ್ಲಾ ಕಾಣಿಸಿಕೊಂಡರು? ಯಾವ ಬಗೆಯ ಔಟ್‌ಫಿಟ್‌ಗಳನ್ನು ಧರಿಸಿದ್ದರು? ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ತಿಳಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

Basanagouda Patil Yatnal: ವಿಜಯೇಂದ್ರನ ಚಮಚಾಗಳಿದ್ರೆ ಗೆಟ್ ಔಟ್; ಮಾಧ್ಯಮಗಳ ಬಗ್ಗೆ ಯತ್ನಾಳ್‌ ಸಿಡಿಮಿಡಿ

ವಿಜಯೇಂದ್ರನ ಚಮಚಾಗಳಿದ್ರೆ ಗೆಟ್ ಔಟ್; ಮಾಧ್ಯಮಗಳ ಬಗ್ಗೆ ಯತ್ನಾಳ್‌ ಸಿಡಿಮಿಡಿ

Basanagouda Patil Yatnal: ಯತ್ನಾಳ್‌ ಕಾಂಗ್ರೆಸ್‌ ಸೇರ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು, ಕಾಂಗ್ರೆಸ್ ಪಕ್ಷಕ್ಕೆ ಈ ಜನ್ಮದಲ್ಲೂ ಹೋಗಲ್ಲ, ಮುಂದಿನ ಜನ್ಮದಲ್ಲೂ ಹೋಗಲ್ಲ. ಅದು ಮುಸ್ಲಿಮರ ಪಕ್ಷ. ವಿಜಯೇಂದ್ರನ ಟೀಂ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಪ್ರಶ್ನೆಗಳನ್ನು ಕೇಳುವ ವಿಜಯೇಂದ್ರನ ಚಮಚಾಗಳಿದ್ದರೆ ಗೆಟ್ ಔಟ್ ಎಂದು ಪತ್ರಕರ್ತರ ವಿರುದ್ಧ ಯತ್ನಾಳ್‌ ಕಿಡಿಕಾರಿದ್ದಾರೆ.

BY Vijayendra: ಬೆಲೆ ಏರಿಕೆ; ರಾಜ್ಯ ಸರ್ಕಾರದ ವಿರುದ್ಧ ಏ.2ರಿಂದ ಬಿಜೆಪಿ ಅಹೋರಾತ್ರಿ ಧರಣಿ, ಏ.7ರಿಂದ ಜನಾಕ್ರೋಶ ಯಾತ್ರೆ: ವಿಜಯೇಂದ್ರ

ಬೆಲೆ ಏರಿಕೆ ವಿರುದ್ಧ ಏ.2ರಿಂದ ಬಿಜೆಪಿ ಅಹೋರಾತ್ರಿ ಧರಣಿ: ವಿಜಯೇಂದ್ರ

BY Vijayendra: ಬೆಲೆ ಏರಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯದ ಎಲ್ಲ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಈ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Karnataka Weather: ಉತ್ತರ ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಆರೆಂಜ್‌ ಅಲರ್ಟ್‌ ಘೋಷಣೆ

ಉತ್ತರ ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

Karnataka Weather: ರಾಜ್ಯದ ಕಲಬುರಗಿಯಲ್ಲಿ ಭಾನುವಾರ ಅತೀ ಹೆಚ್ಚು ಉಷ್ಣಾಂಶ 40.6 ಡಿ.ಸೆ. ದಾಖಲಾಗಿದೆ. ಇನ್ನು ಚಾಮರಾಜನಗರದಲ್ಲಿ ಅತೀ ಕಡಿಮೆ ಉಷ್ಣಾಂಶ 14.7 ಡಿ.ಸೆ. ವರದಿಯಾಗಿದೆ. ಮುಂದಿನ 2 ದಿನಗಳವರೆಗೆ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಿಲ್ಲ, ನಂತರ 3-4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದೆ. ಕರ್ನಾಟಕದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

Guerrilla War Movie: ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ ‘ಗೆರಿಲ್ಲಾ WAR’ ಪೋಸ್ಟರ್‌ ಬಿಡುಗಡೆ

ಓಂಪ್ರಕಾಶ್ ರಾವ್ ನಿರ್ದೇಶನದ ‘ಗೆರಿಲ್ಲಾ WAR’ ಚಿತ್ರದ ಪೋಸ್ಟರ್‌ ಬಿಡುಗಡೆ

Guerrilla War Movie: ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ ‘ಗೆರಿಲ್ಲಾ WAR’ ಚಿತ್ರಕ್ಕೆ ‘ಮಂಡ್ಯ ಸ್ಟಾರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ‘ಮಂಡ್ಯ ಸ್ಟಾರ್’ ಲೋಕಿ ಎಂದೇ ಪ್ರಸಿದ್ಧರಾಗಿರುವ ಲೋಕೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಿರ್ದೇಶಕರು ತಮ್ಮ ನಿರ್ದೇಶನದ 50ನೇ ಚಿತ್ರದ ಘೋಷಣೆ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Gadag News: ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್‌ ಆಗಲು ಯತ್ನ; ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್‌ ಆಗಲು ಯತ್ನ; ಆರೋಪಿ ಕಾಲಿಗೆ ಗುಂಡೇಟು

Gadag News: ಮನೆ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಾಗ ಗುಂಡು ಹಾರಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

KCL Season 1: ಸ್ಯಾಂಡಲ್‌ವುಡ್ ಕಲಾವಿದರು, ತಂತ್ರಜ್ಞರ ಸಮಾಗಮದಲ್ಲಿ ಏ.28ರಿಂದ ದುಬೈನ‌ ಶಾರ್ಜಾ ಮೈದಾನದಲ್ಲಿ ʼಕೆಸಿಎಲ್‌ʼ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಏ.28ರಿಂದ ʼಕೆಸಿಎಲ್‌ʼ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಆಯೋಜನೆ

KCL Season 1: ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಒಂದುಗೂಡಿ ಕರ್ನಾಟಕ ಸೆಲೆಬ್ರಿಟಿ ಲೀಗ್ (KCL) ಸೀಸನ್ 1 ಆಯೋಜಿಸುತ್ತಿದ್ದಾರೆ‌. ಏಪ್ರಿಲ್ 28 ರಿಂದ ಮೇ 3 ರವರೆಗೂ ದುಬೈನ‌ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಮಾತ್ರ ಭಾಗವಹಿಸಲಿದ್ದಾರೆ. ಅವರಿಗಾಗಿಯೇ ಈ ಟೂರ್ನಿ ಆಯೋಜಿಸಲಾಗಿದೆ. ದುಬೈನಲ್ಲಿರುವ ಸುಮಾರು ಹತ್ತು ಸಾವಿರ ಕನ್ನಡಿಗರನ್ನು ಒಂದುಗೂಡಿಸುವುದೇ ʼಕೆಸಿಎಲ್ʼ ನ ಉದ್ದೇಶ ಎಂದು ಅನಿವಾಸಿ ಕನ್ನಡಿಗ ಮಯೂರ್ ಮಾಸ್ಟರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Bank Holidays: ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ, ಗ್ರಾಹಕರು ಗಮನಿಸಿ

ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ, ಗ್ರಾಹಕರು ಗಮನಿಸಿ

ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ರಜಾ ದಿನಗಳಿವೆ. ರಾಜ್ಯ ಸರ್ಕಾರ ಘೋಷಿಸಿರುವ ರಜೆಗಳು ಹಾಗೂ ಆರ್‌ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ ನೋಡುವುದಾದರೆ ಈ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ರಜೆ ಇದೆ. ಬ್ಯಾಂಕ್‌ಗಳಿಗೆ ಯಾವಾಗ, ಯಾವ ಕಾರಣಕ್ಕೆ ರಜೆ ಎಂಬ ಪಟ್ಟಿ ಇಲ್ಲಿದೆ ನೋಡಿ.

MLC Rajendra: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸಂಚು; ಸುಪಾರಿ ಕುರಿತ ಸ್ಫೋಟಕ ಆಡಿಯೊ ವೈರಲ್‌!

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸಂಚು; ಸುಪಾರಿ ಕುರಿತ ಸ್ಫೋಟಕ ಆಡಿಯೊ ವೈರಲ್‌

MLC Rajendra: ರಾಜೇಂದ್ರ ಹತ್ಯೆಗೆ ಸುಪಾರಿ ಬಗ್ಗೆ ವೈರಲ್‌ ಆಗಿರುವ ಆಡಿಯೊದಲ್ಲಿ ಮಹಿಳೆ ಮಾತನಾಡಿದ್ದಾಳೆ. ಡಿಸೆಂಬರ್‌ನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಈ ಆಡಿಯೊದಲ್ಲಿದೆ. ಈ ಆಡಿಯೊದಿಂದಲೇ ಕೊಲೆ ಸುಪಾರಿಯ ವಿಚಾರ ರಾಜೇಂದ್ರಗೆ ತಿಳಿದಿತ್ತು.