ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಶಾಸ್ತ್ರ ಹೇಳುವ ರಹಸ್ಯ ಇದು; ಮನೆಯ ಸಂಪತ್ತು ಹೆಚ್ಚಾಗಲು ಈ ದೇವರ ಫೋಟೋಗಳನ್ನ ಇಡಿ

ಹಿಂದೂ ಶಾಸ್ತ್ರದ ಪ್ರಕಾರ ಮನೆಯಲ್ಲಿ ಲಕ್ಷ್ಮೀ ದೇವಿ, ಕುಬೇರ ದೇವರು ಮತ್ತು ಗಣೇಶನ ವಿಗ್ರಹ ಅಥವಾ ಫೋಟೋಗಳನ್ನು ಇಡುವುದರಿಂದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಈ ದೇವತೆಗಳನ್ನು ನಿಯಮಿತವಾಗಿ ಪೂಜಿಸಿದರೆ ಮನೆಯಲ್ಲಿನ ಹಣದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ, ಸಂತೋಷ ನೆಲೆಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ದೇವರ ಫೋಟೋ ಸಂಗ್ರಹ ಚಿತ್ರ

ಬೆಂಗಳೂರು: ಹಿಂದೂ ಶಾಸ್ತ್ರ (Hindu Shasthra) ಮತ್ತು ವಾಸ್ತು ಶಾಸ್ತ್ರದಲ್ಲಿ (Vastu Shastra) ಮನೆಯಲ್ಲಿನ ಶಾಂತಿ, ಸಮೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ವಿವರಿಸಲಾಗಿದೆ. ವಿಶೇಷವಾಗಿ ಮನೆಯಲ್ಲಿರುವ ದೇವರ ವಿಗ್ರಹಗಳು ಅಥವಾ ಫೋಟೋಗಳು ಮನೆಯ ವಾತಾವರಣದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ ಎಂದು ನಂಬಲಾಗುತ್ತದೆ.

ಯಾರಾದರೂ ಪದೇ ಪದೇ ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆರ್ಥಿಕವಾಗಿ ಪ್ರಗತಿ ಕಾಣಿಸದಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ದೇವರ ವಿಗ್ರಹ ಅಥವಾ ಫೋಟೋಗಳನ್ನು ಇಡುವುದು ಶುಭಕರ ಎಂದು ಹೇಳಲಾಗಿದೆ.

ಇದಲ್ಲದೆ, ಮನೆಗೆ ಧನಲಾಭ ಮತ್ತು ಸಮೃದ್ಧಿಯನ್ನು ತರಲು ಈ ಮೂರು ದೇವರ ವಿಗ್ರಹಗಳು ಅಥವಾ ಫೋಟೋಗಳು ವಿಶೇಷವಾಗಿ ಮಹತ್ವ ಹೊಂದಿವೆ ಎಂದು ನಂಬಿಕೆ ಇದೆ. ಹಾಗಾದ್ರೆ ಆ ಫೋಟೋಗಳು ಯಾವುವು..? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ(Vastu Tips)..? ಎಂಬ ಮಾಹಿತಿ ಇಲ್ಲಿದೆ.

ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಫೋಟೋ

ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಸಂಪತ್ತಿನ ಮತ್ತು ಐಶ್ವರ್ಯದ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿಯೇ ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಭಕ್ತಿಯಿಂದ ಪೂಜೆ ಮಾಡಿದರೆ ಆರ್ಥಿಕವಾಗಿ ಉತ್ತಮ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ವಿಶೇಷವಾಗಿ ಪ್ರತಿದಿನ ತುಪ್ಪದ ದೀಪ ಹಚ್ಚಿ ಹಾಗೂ ಸುಗಂಧ ದ್ರವ್ಯಗಳಿಂದ ಪೂಜೆ ಮಾಡಿದರೆ ದೇವಿಯ ಕೃಪೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಗೆ ಧನ, ಧಾನ್ಯ ಮತ್ತು ಸಮೃದ್ಧಿ ಬರುತ್ತದೆ ಎಂಬುದು ಶಾಸ್ತ್ರದ ಅಭಿಪ್ರಾಯವಾಗಿದೆ.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ ಈ ಸಮಸ್ಯೆಗಳು ಎದುರಾಗಬಹುದು

ಕುಬೇರ ದೇವನ ವಿಗ್ರಹ ಅಥವಾ ಫೋಟೋ

ಕುಬೇರ ದೇವರನ್ನು ಸಂಪತ್ತಿನ ದೇವರೆಂದು ಹಿಂದೂ ಶಾಸ್ತ್ರದಲ್ಲಿ ಹೇಳಲಾಗಿದೆ. ಲಕ್ಷ್ಮೀ ದೇವಿಯ ಜೊತೆಗೆ ಕುಬೇರ ದೇವನ ಫೋಟೋ ಅಥವಾ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಂಬಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಕುಬೇರನ ವಿಗ್ರಹವನ್ನು ಮನೆಯ ತಿಜೋರಿ ಅಥವಾ ಲಾಕರ್ ಹತ್ತಿರ ಇಡುವುದು ಶುಭಕರ ಎಂದು ಹೇಳಲಾಗಿದೆ. ಇದರಿಂದ ಮನೆಯಲ್ಲಿರುವ ಆರ್ಥಿಕ ಅಡಚಣೆಗಳು ಕಡಿಮೆಯಾಗುತ್ತವೆ ಮತ್ತು ಸಂಪತ್ತಿನ ವೃದ್ಧಿ ಸಾಧ್ಯವಾಗುತ್ತದೆ ಎಂದು ನಂಬಿಕೆ ಇದೆ.

ಗಣೇಶನ ವಿಗ್ರಹ ಅಥವಾ ಫೋಟೋ

ಗಣಪತಿ ದೇವರನ್ನು ವಿಘ್ನವಿನಾಶಕ ಹಾಗೂ ಶುಭದ ಸಂಕೇತವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಮನೆಯಲ್ಲಿಯೇ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪೂಜೆ ಮಾಡಿದರೆ ಮನೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.

ಗಣಪತಿಯನ್ನು ಸಂತೋಷ ಮತ್ತು ಸಮೃದ್ಧಿಯ ದೇವರೆಂದು ಪರಿಗಣಿಸುವುದರಿಂದ ಮನೆಯಲ್ಲಿನ ಶಾಂತಿ ಮತ್ತು ಶುಭಕಾರ್ಯಗಳಿಗೆ ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೂ ವಿಗ್ರಹವನ್ನು ಇಡುವ ಮುನ್ನ ಪಂಡಿತರ ಸಲಹೆ ಪಡೆಯುವುದು ಉತ್ತಮ ಎಂದು ಶಾಸ್ತ್ರದಲ್ಲಿ ಸೂಚಿಸಲಾಗಿದೆ.

ಈ ವಿಷಯ ಗಮನ ಇರಲಿ

ದೇವರ ವಿಗ್ರಹಗಳ ಜೊತೆಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಅಥವಾ ಅಷ್ಟದಳ ಕಮಲದ ಮೇಲೆ ಮಂಗಳ ಕಲಶವನ್ನು ಸ್ಥಾಪಿಸುವುದು ಕೂಡ ಶುಭಕರ ಎಂದು ಹೇಳಲಾಗಿದೆ. ಈ ರೀತಿಯ ಕ್ರಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶಾಂತಿ, ಸಂತೋಷ ಹಾಗೂ ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.