ಬೆಂಗಳೂರು: ಪೂಜೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುವಾದ ಕರ್ಪೂರ (Camphor) ವಾಸ್ತುಶಾಸ್ತ್ರದ (Vastu Shastra) ಪ್ರಕಾರ ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು(Negative Energy) ದೂರ ಮಾಡಿ, ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಕರ್ಪೂರ ಸಹಕಾರಿ. ಒಂದೇ ಕರ್ಪೂರ ಅನೇಕ ವಾಸ್ತು ದೋಷಗಳನ್ನು ಶಮನಗೊಳಿಸಿ, ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚಿಸಬಲ್ಲದು. ಅಲ್ಲದೆ, ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಇದು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ, ಕರ್ಪೂರವನ್ನು ಬಳಸಿ ಮನೆಯ ವಾಸ್ತು ದೋಷಗಳನ್ನು(Vastu Tips) ಹೇಗೆ ನಿವಾರಿಸಬಹುದು ಎಂಬುದನ್ನು ನೋಡೋಣ.
ವ್ಯವಹಾರ ಅಭಿವೃದ್ಧಿಗಾಗಿ
ಉದ್ಯೋಗ ಅಥವಾ ವ್ಯವಹಾರದಲ್ಲಿ ಮುಂದುವರೆಯಲು ಬಯಸುವವರು, ದಿನದ ಅಡುಗೆ ಕಾರ್ಯಗಳನ್ನೆಲ್ಲ ಮುಗಿಸಿದ ಬಳಿಕ ಒಂದು ಪಾತ್ರೆಯಲ್ಲಿ ಕರ್ಪೂರ ಹಾಗೂ ಲವಂಗವನ್ನು ಉರಿಸಬೇಕು. ಇದರಿಂದ ಮನೆಯವರಲ್ಲಿ ಪ್ರಗತಿಯ ಸೂಚನೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಹೊಸ ಅವಕಾಶಗಳು ದೊರಕುತ್ತವೆ ಎಂಬ ನಂಬಿಕೆ ಇದೆ.
ಆರ್ಥಿಕ ಸಮಸ್ಯೆಗಳ ನಿವಾರಣೆಗಾಗಿ
ನಿರಂತರ ಹಣಕಾಸಿನ ತೊಂದರೆ, ಹೆಚ್ಚುವರಿ ಖರ್ಚು ಅಥವಾ ಸಾಲದ ಒತ್ತಡ ಎದುರಾಗುತ್ತಿದ್ದರೆ, ಅದಕ್ಕೆ ಕಾರಣ ಅಡುಗೆಮನೆಯಲ್ಲಿ ಇರುವ ವಾಸ್ತು ದೋಷವಾಗಿರಬಹುದು. ಇಂತಹ ಸಂದರ್ಭದಲ್ಲಿ ಅಡುಗೆಮನೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಪ್ರತಿದಿನ ಉರಿಸುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಲಭಿಸಿ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಜೊತೆಗೆ, ನಿಂತುಕೊಂಡಿರುವ ಕೆಲಸಗಳು ಪೂರ್ಣಗೊಳ್ಳಲು ಸಹಾಯವಾಗುತ್ತದೆ. ವಿಶೇಷವಾಗಿ ಮನೆಯ ಆಗ್ನೇಯ ದಿಕ್ಕಿನಲ್ಲಿ ಕರ್ಪೂರ ಉರಿಸುವುದು ಧನಲಾಭಕ್ಕೆ ಶುಭಕರವೆಂದು ಪರಿಗಣಿಸಲಾಗಿದೆ.
ಧನಾತ್ಮಕ ಶಕ್ತಿ ವೃದ್ಧಿಗಾಗಿ
ಕೆಲವೊಮ್ಮೆ ಮನೆಯ ಸದಸ್ಯರ ನಡುವೆ ಅರ್ಥಮಾತು ಇದ್ದರೂ ಅನಾವಶ್ಯಕ ವೈಮನಸ್ಸು ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕರ್ಪೂರವನ್ನು ದೇಸಿ ತುಪ್ಪದಲ್ಲಿ ನೆನೆಸಿ ಪ್ರತಿದಿನ ಉರಿಸಿ, ಅದರ ಸುಗಂಧ ಮನೆಯಾದ್ಯಂತ ಹರಡುವಂತೆ ಮಾಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗಿ, ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಕುಟುಂಬದವರ ನಡುವಿನ ಭಿನ್ನಾಭಿಪ್ರಾಯಗಳೂ ಕಡಿಮೆಯಾಗುತ್ತವೆ.
ವೈವಾಹಿಕ ಸಂಸಾರದ ಖುಷಿಗಾಗಿ
ಪತಿ-ಪತ್ನಿಯರ ನಡುವೆ ಕಲಹ ಇದ್ದರೆ, ರಾತ್ರಿ ಸಮಯದಲ್ಲಿ ಕರ್ಪೂರವನ್ನು ಗಂಡನ ದಿಂಬಿನ ಕೆಳಗೆ ಇಟ್ಟು, ಬೆಳಿಗ್ಗೆ ಯಾರಿಗೂ ತಿಳಿಯದಂತೆ ಅದನ್ನು ಉರಿಸಬೇಕು. ಹೀಗೆ ಮಾಡುವುದರಿಂದ ದಾಂಪತ್ಯದಲ್ಲಿ ಅನ್ಯೋನ್ಯತೆ, ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಎಂದು ನಂಬಲಾಗುತ್ತದೆ. ಜೊತೆಗೆ, ರಾಹುವಿನ ವಕ್ರ ದೃಷ್ಟಿಯೂ ದೂರವಾಗುತ್ತದೆ.
ಇನ್ನು ಮನೆಯಲ್ಲಿನ ವಾಸ್ತು ದೋಷ ನಿವಾರಣೆಗೆ ಪ್ರತಿಯೊಂದು ಕೊಠಡಿಯಲ್ಲಿ ಸ್ವಲ್ಪ ಕರ್ಪೂರದ ತುಂಡುಗಳನ್ನು ಇಡಬಹುದು. ಕರ್ಪೂರ ಕರಗಿದ ನಂತರ ಅದೇ ಜಾಗದಲ್ಲಿ ಮತ್ತೊಂದು ಹೊಸತುಂಡು ಇಡಬೇಕು. ಈ ಪರಿಹಾರ ಕ್ರಮ ಅನುಸರಿಸುವುದರಿಂದ ವಾಸ್ತು ದೋಷಗಳ ನಿವಾರಣೆಗೊಂಡು, ಮನೆಯಲ್ಲಿ ಶುಭ ಫಲ ಲಭಿಸುತ್ತವೆ.