ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ದುಡ್ಡು ಬರುತ್ತದೆ… ಆದರೆ ಉಳಿಯೋದಿಲ್ಲವಾ? ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ!

ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಗಣೇಶನ ಚಿತ್ರ, ಶಮಿ ಗಿಡ, ಸ್ವಸ್ತಿಕ ಚಿಹ್ನೆ ಮತ್ತು ಸೂರ್ಯ ದೇವರ ಆರಾಧನೆಯಂತಹ ಸರಳ ವಾಸ್ತು ಪರಿಹಾರಗಳಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರ

ಬೆಂಗಳೂರು: ಮನೆಯ ಪ್ರತಿಯೊಂದು ದಿಕ್ಕಿಗೂ ವಾಸ್ತುಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ವಿಶೇಷವಾಗಿ ಮನೆಯ ಮುಖ್ಯ ಬಾಗಿಲು ವ್ಯಕ್ತಿಯ ಜೀವನದ ಪ್ರಗತಿ, ಖ್ಯಾತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಇದೇ ದ್ವಾರದಿಂದ ಮನೆಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಆದ್ದರಿಂದ ಮುಖ್ಯ ದ್ವಾರದಲ್ಲಿ ವಾಸ್ತು ದೋಷಗಳಿರದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಕೆಲವರು ಬಹಳಷ್ಟು ಹಣ ಸಂಪಾದಿಸಿದರೂ ಅದು ಕೈಯಲ್ಲಿ ಉಳಿಯದಿದ್ದರೆ, ಅದರ ಹಿಂದಿನ ಕಾರಣಗಳಲ್ಲಿ ವಾಸ್ತು ದೋಷವೂ ಒಂದಾಗಿರಬಹುದು. ಈ ಹಿನ್ನೆಲೆಯಲ್ಲಿ, ಮುಖ್ಯ ಬಾಗಿಲಿಗೆ ಸಂಬಂಧಿಸಿದ ಕೆಲವು ಸರಳ ಪರಿಹಾರಗಳನ್ನು ಅನುಸರಿಸಿದರೆ ಮನೆಯಲ್ಲಿನ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತುಶಾಸ್ತ್ರ ತಿಳಿಸುತ್ತದೆ.

ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಸಲಹೆಯಂತೆ (Vastu Tips) ಯಾವ ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಡಬೇಕು..? ಇಟ್ಟರೆ ಏನೆಲ್ಲಾ ಪ್ರಯೋಜನ ಇದೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ

ಗಣೇಶನ ಕೃಪೆಯಿಂದ ವಿಘ್ನ ನಿವಾರಣೆ:

ವಿಘ್ನವಿನಾಶಕನಾದ ಗಣೇಶನ ಆರಾಧನೆ ಅತ್ಯಂತ ಮುಖ್ಯ. ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶ ಪೂಜೆ ಮಾಡುವ ಪದ್ಧತಿ ಇದೆ. ಮನೆಯಲ್ಲಿ ವಾಸ್ತು ದೋಷಗಳಿದ್ದರೆ, ಮುಖ್ಯ ದ್ವಾರದ ಮೇಲೆ ಗಣೇಶನ ಚಿತ್ರ ಅಥವಾ ವಿಗ್ರಹವನ್ನು ಅಳವಡಿಸುವುದು ಶುಭಕರ. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರವೇಶ ಕಡಿಮೆಯಾಗುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಸುಲಭವಾಗಿ ದೊರೆಯುತ್ತದೆ.

ಶಮಿ ಗಿಡದಿಂದ ಲಕ್ಷ್ಮೀ ಕೃಪೆ:

ಶಮಿ ಸಸ್ಯವು ಶನಿ ದೇವನಿಗೆ ಸಂಬಂಧಿಸಿದ್ದು, ಅದನ್ನು ಪವಿತ್ರ ವೃಕ್ಷವೆಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಶಮಿ ಗಿಡವನ್ನು ನೆಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಲಭಿಸುತ್ತದೆ ಎಂದು ನಂಬಲಾಗಿದೆ. ಇದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿ, ನಕಾರಾತ್ಮಕತೆ ದೂರವಾಗುತ್ತದೆ ಹಾಗೂ ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

Vastu Tips: ಸ್ನಾನದ ನಂತರ ಈ ತಪ್ಪುಗಳನ್ನು ಮಾಡಬೇಡಿ ಅನ್ನುತ್ತದೆ ವಾಸ್ತು ಶಾಸ್ತ್ರ

ಸ್ವಸ್ತಿಕ ಚಿಹ್ನೆಯಿಂದ ಸಕಾರಾತ್ಮಕ ಶಕ್ತಿ:

ಸ್ವಸ್ತಿಕ ಚಿಹ್ನೆ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಚಿಹ್ನೆಯಾಗಿದೆ. ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಕೆಂಪು ಅಥವಾ ಸಿಂಧೂರ ಬಣ್ಣದಲ್ಲಿ ಸ್ವಸ್ತಿಕ ಗುರುತು ಹಾಕುವುದರಿಂದ ಸಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುತ್ತದೆ. ವಾಸ್ತು ಪ್ರಕಾರ, ಈ ಚಿಹ್ನೆಯ ಗಾತ್ರವೂ ಸರಿಯಾದ ಪ್ರಮಾಣದಲ್ಲಿರಬೇಕು ಮತ್ತು ಸಿಂಧೂರದಿಂದ ಬರೆದರೆ ಹೆಚ್ಚು ಶುಭಕರವೆಂದು ಹೇಳಲಾಗಿದೆ.

ಸೂರ್ಯ ದೇವರಿಂದ ಧನಾತ್ಮಕ ಶಕ್ತಿ:

ಸೂರ್ಯ ದೇವರ ತಾಮ್ರದ ವಿಗ್ರಹವನ್ನು ಮನೆಯ ಮುಖ್ಯ ದ್ವಾರದ ಮೇಲೆ ಅಳವಡಿಸುವುದೂ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಮನೆಗೆ ಒಳಗೆ ಪ್ರವೇಶಿಸುವಾಗ ಮತ್ತು ಹೊರಡುವಾಗ ಸೂರ್ಯ ದೇವರನ್ನು ಸ್ಮರಿಸುವುದರಿಂದ ಗ್ರಹ ದೋಷಗಳು ಕಡಿಮೆಯಾಗುತ್ತವೆ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜೀವನದಲ್ಲಿ ಎದುರಾಗುವ ಅನೇಕ ಅಡಚಣೆಗಳು ನಿವಾರಣೆಯಾಗುತ್ತವೆ.