ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನೆ ನಿರ್ಮಾಣ ಕಾರ್ಯದಲ್ಲಿ ವಾಸ್ತು ಶಾಸ್ತ್ರ(Vastu Shastra) ಕ್ಕೆ ಅಪಾರ ಮಹತ್ವ ದೊರೆತಿದ್ದು, ಹೆಚ್ಚಿನವರು ತಮ್ಮ ಕನಸಿನ ಮನೆಯನ್ನು ಕಟ್ಟುವಾಗ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ವಾಸ್ತು ತಜ್ಞರ ಪ್ರಕಾರ (Vastu Expert) , ಮನೆಯಲ್ಲಿನ ಪ್ರತಿಯೊಂದು ಕೋಣೆಗೆ ಅನುಗುಣವಾಗಿ ಬಣ್ಣ ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದ್ದು, ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡಿದಾಗ ಮಾತ್ರ ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿದ್ದು, ಸುಖ-ಶಾಂತಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯ ಪೂಜಾ ಕೋಣೆಗೂ ಹಾಗೂ ಅದರ ಗೋಡೆಗಳಿಗೆ ಹಾಕುವ ಬಣ್ಣಕ್ಕೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದ್ದು, ಕುಟುಂಬದಲ್ಲಿ ನೆಮ್ಮದಿ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲು ಪೂಜಾ ಕೋಣೆಗೆ ಸೂಕ್ತ ಬಣ್ಣ ಆಯ್ಕೆ ಮಾಡುವುದು ಅಗತ್ಯ ಎಂದು ಹೇಳುತ್ತಾರೆ
ವಾಸ್ತು ನಿಯಮದಂತೆ, ಸರಿಯಾದ ಬಣ್ಣವು ಮನೆಯಲ್ಲಿನ ಆತಂಕ, ಒತ್ತಡ ಮತ್ತು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಹಾಯಕವಾಗಲಿದ್ದು, ಬಣ್ಣಗಳು ಶಕ್ತಿ ಪ್ರಸರಣದ ಮಾಧ್ಯಮವಾಗಿದೆ. ಮನೆಯಲ್ಲಿ ಬಳಸುವ ಬಣ್ಣಗಳು ಕುಟುಂಬದ ಸದಸ್ಯರ ಮನಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ವಿವಿಧ ಬಣ್ಣಗಳು ವಿಭಿನ್ನ ರೀತಿಯಲ್ಲಿ ವ್ಯಕ್ತಿಯ ಮನಸ್ಸು, ವರ್ತನೆ ಮತ್ತು ದಿನನಿತ್ಯದ ಚಟುವಟಿಕೆಗಳ ತನ್ನ ಪ್ರಭಾವ .ಬೀರುತ್ತದೆ. ಆದ್ದರಿಂದ ಮನೆಯ ಯಾವ ಭಾಗಕ್ಕೆ ಯಾವ ಬಣ್ಣ ಬಳಸಬೇಕು ಎಂಬುದು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮುಖ್ಯ ಅಂಶವಾಗಿ ಪರಿಗಣಿಸಲಾಗಿದ್ದು, ಇದಕ್ಕೆ ದೇವರ ಮನೆ ಅಥವಾ ಕೋಣೆ ಹೊರತಾಗಿಲ್ಲ..
ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ದೇವರ ಕೋಣೆಗೆ ಯಾವ ಬಣ್ಣ ಹಾಕಿದ್ದರೆ ಸೂಕ್ತ..? ಆದ್ದರಿಂದ ಏನು ಪ್ರಯೋಜನ ಆಗುತ್ತದೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಹಳದಿ ಬಣ್ಣ
ಹಳದಿ ಬಣ್ಣ ಆನಂದ ಹಾಗೂ ಶುಭದ ಸಂಕೇತವಾಗಿದ್ದು, ಇದು ಸಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈಶಾನ್ಯ ದಿಕ್ಕಿನಲ್ಲಿ ಇರುವ ಪೂಜಾ ಕೋಣೆಗೆ ಹಳದಿ ಬಳಸುವುದು ಸೂಕ್ತವಾಗಿದ್ದು, ಇದರಿಂದ ಮನೆಯಲ್ಲಿ ಬೆಳಕು ಮತ್ತು ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
Astro Tips: ಸಾಡೇಸಾತಿ ಶನಿ ದೋಷದಿಂದ ಸಂಕಷ್ಟಕ್ಕೆ ಸಿಲುಕಿದ್ದೀರಾ..?; ಹಾಗಾದ್ರೆ ಈ ವಸ್ತುಗಳನ್ನು ದಾನ ಮಾಡಿ
ಕಿತ್ತಳೆ ಅಥವಾ ಕೇಸರಿ
ಕಿತ್ತಳೆ ಅಥವಾ ಕೇಸರಿ ಬಣ್ಣವನ್ನು ಧೈರ್ಯ ಮತ್ತು ಭಕ್ತಿಯ ಬಣ್ಣ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದ್ದು, ಸಾಮಾನ್ಯವಾಗಿ ಇದನ್ನು ಆಧ್ಯಾತ್ಮಿಕ ಬಣ್ಣವೆಂದು ಪರಿಗಣಿಸಲಾಗುತ್ತದೆ. ಅಗ್ನೇಯ ಭಾಗದಲ್ಲಿರುವ ಪೂಜಾ ಸ್ಥಳಕ್ಕೆ ಈ ಬಣ್ಣ ಅತ್ಯುತ್ತಮವಾಗಿದ್ದು, ದೇವರ ಚಿತ್ರಗಳಲ್ಲಿ ಕಂಡುಬರುವ ಕೇಸರಿ ಬಣ್ಣವೇ ಇದರ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಬಿಳಿ
ಬಿಳಿ ಬಣ್ಣವು ಅತ್ಯಂತ ಪವಿತ್ರ ಬಣ್ಣವೆಂದು ವಾಸ್ತು ತಿಳಿಸಿದ್ದು, ಶಾಂತಿ ಮತ್ತು ಶುದ್ಧತೆಯ ಪ್ರತೀಕವಾಗಿದೆ. ಬಿಳಿ ಗೋಡೆಗಳು ದೇವರ ಚಿತ್ರಗಳನ್ನು ಹೈಲೈಟ್ ಮಾಡಲಿದ್ದು, ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ನಿರ್ಮಿಸಲಿದೆ.
ಹಸಿರು
ಪೂರ್ವ ದಿಕ್ಕಿನಲ್ಲಿ ಇರುವ ಪೂಜಾ ಸ್ಥಳಕ್ಕೆ ಲೈಟ್ ಗ್ರೀನ್ ಬಣ್ಣ ಬಳಸುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾಗಿದ್ದು, ಧೈರ್ಯ ಮತ್ತು ಸಮತೋಲನದ ಸಂಕೇತವಾಗಿದೆ. ಈ ಬಣ್ಣ ಮನೆಯ ಸದಸ್ಯರ ನಡುವೆ ಉತ್ತಮ ಸಂಬಂಧ ಬೆಳೆಯುವಂತೆ ಮಾಡಲಿದ್ದು, ಖುಷಿಯನ್ನು ಹೆಚ್ಚಿಸಲಿದೆ.