ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಕೈ ಗಡಿಯಾರ

ಗಡಿಯಾರ ನಮ್ಮ ಬದುಕಿನ ಅವಿಭಾಜ್ಯ ಅಂಶವೆಂದೇ ಪರಿಗಣಿಸಬಹುದು. ಮೊಬೈಲ್ ಗಳು ಬಂದ ಮೇಲೆ ಕೈ ಗಡಿಯಾರದ ಬಳಕೆ ಕೊಂಚ ಕಡಿಮೆಯಾಗಿದ್ದರೂ ಪ್ರತಿಯೊಬ್ಬರಲ್ಲೂ ತಮ್ಮದೇ ಆಗಿರುವ ಒಂದೆರಡು ಗಡಿಯಾರ ಇದ್ದೇ ಇರುತ್ತದೆ. ನಾವು ಧರಿಸುವ ಕೈಗಡಿಯಾರಗಳು ನಮ್ಮ ಜೀವನದ ಪ್ರಗತಿಗೆ ಕಾರಣವಾಗುತ್ತದೆ. ಆದರೆ ಕೆಲವೊಂದು ಗಡಿಯಾರಗಳನ್ನು ಬಳಸುವುದರಿಂದ ಅದು ನಮ್ಮ ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಬೆಂಗಳೂರು: ಗಂಟೆ (vastu for clock) ನೋಡಲು ಮೊಬೈಲ್ ಬಳಸುತ್ತಿದ್ದರೂ ಕೈಯಲ್ಲೊಂದು ಗಡಿಯಾರವಿದ್ದರೆ ಮನಸ್ಸಿಗೆ ನೆಮ್ಮದಿ. ಅದು ಹೇಗೆ ಬೇಕಾದರೂ ಇರಲಿ. ಆದರೆ ಅದು ಕೈಯಲ್ಲಿರಬೇಕು ಎಂದು ಬಯಸುವವರು ಅನೇಕರು. ಆದರೆ ಈ ಗಡಿಯಾರದ ಬಗ್ಗೆ ಎಚ್ಚರಿಕೆ ಇರಬೇಕು. ಯಾವುದೇ ಕಾರಣಕ್ಕೂ ನಿಖರವಾದ ಸಮಯ ತೋರಿಸುವುದನ್ನು ನಿಲ್ಲಿಸಿರುವ, ಮುರಿದಿರುವ ಕೈಗಡಿಯಾರಗಳನ್ನು ಧರಿಸಕೂಡದು ಎನ್ನುತ್ತದೆ ವಾಸ್ತು ಶಾಸ್ತ್ರ (Vastu shastra). ಕೈ ಗಡಿಯಾರಗಳು ಜೀವನದಲ್ಲಿ ಶಕ್ತಿಯ ಹರಿವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಗಡಿಯಾರಗಳ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿದುಕೊಂಡು ಧರಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ವಾಸ್ತು (vastu tips) ತಜ್ಞರು.

ಶಕ್ತಿಯ ಹರಿವು ಜೀವನದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಗಡಿಯಾರಗಳು ಪ್ರಮುಖ ಪಾತ್ರ ವಹಿಸುತ್ತದೆ. ಕೆಲಸ ಮಾಡುವುದನ್ನು ನಿಲ್ಲಿಸಿರುವ ಅಥವಾ ಮುರಿದ ಗಡಿಯಾರವು ಜೀವನದ ಪ್ರಗತಿಯಲ್ಲಿ ನಿಶ್ಚಲತೆ, ವಿಳಂಬ ಅಥವಾ ಅಡಚಣೆಯನ್ನು ಉಂಟು ಮಾಡುತ್ತದೆ. ಅಲ್ಲದೇ ಜೀವನದ ಗುರಿಗಳನ್ನು ಸಾಧಿಸುವಲ್ಲಿ ಇದು ಅಡ್ಡಿಯನ್ನು ಉಂಟು ಮಾಡುತ್ತದೆ. ಮುರಿದ ಗಡಿಯಾರವನ್ನು ಧರಿಸಿದ ವ್ಯಕ್ತಿಯ ವೃತ್ತಿ ಬೆಳವಣಿಗೆ ಅಥವಾ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಉಂಟಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಜೀವನದ ಪ್ರತಿಯೊಂದು ಅಂಶವನ್ನೂ ಸಮಯ ನಿಯಂತ್ರಿಸುತ್ತದೆ. ಇದಕ್ಕಾಗಿ ಸಕಾರಾತ್ಮಕ ಶಕ್ತಿಯೊಂದಿಗೆ ಅದರ ಹೊಂದಾಣಿಕೆ ಮುಖ್ಯವಾಗಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರಾದ ಡಾ. ವೀರೇಂದ್ರ ಸಾಹ್ನಿ. ಗಡಿಯಾರವು ನಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ವಿವರಿಸುವುದು ಹೀಗೆ.

cl1

ಏನು ಪರಿಣಾಮ?

ಮುರಿದ ಅಥವಾ ಕಾರ್ಯ ನಿಲ್ಲಿಸಿದ ಗಡಿಯಾರವು ಋಣಾತ್ಮಕ ಕಂಪನ ವಾಹಕವಾಗಿದೆ. ಇದು ಆರ್ಥಿಕ ನಷ್ಟ ಅಥವಾ ಸಂಬಂಧಗಳಲ್ಲಿ ಬಗೆಹರಿಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಂತಿರುವ ಗಡಿಯಾರವು ನಿಷ್ಪ್ರಯೋಜಕತೆಯನ್ನು ಸೂಚಿಸುತ್ತದೆ. ಇದರಿಂದ ನಾವು ಮಾಡುವ ಯಾವುದೇ ಪ್ರಯತ್ನಗಳು ಫಲ ಕೊಡುವುದಿಲ್ಲ. ನಮ್ಮ ಎಲ್ಲ ಶ್ರಮ ವ್ಯರ್ಥವಾಗಿ ಬಿಡುತ್ತದೆ.

ಕಾರ್ಯ ನಿಲ್ಲಿಸಿದ ಅಥವಾ ಮುರಿದ ಗಡಿಯಾರವು ಕೇವಲ ಒಂದು ವಸ್ತುವಲ್ಲ. ಅದು ಜೀವನದಲ್ಲಿ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುವ ಪ್ರಬಲ ಸಂಕೇತವಾಗಿದೆ. ಇದನ್ನು ಧರಿಸುವುದು ಅಥವಾ ಇರಿಸಿಕೊಳ್ಳುವುದು ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಸ್ವೀಕರಿಸುವ ಮತ್ತು ಜೀವನದ ಲಯದೊಂದಿಗೆ ನಿಮ್ಮ ಸಂಪರ್ಕವನ್ನು ಬೆಳೆಸುತ್ತದೆ.

ಮಾನಸಿಕ ದೃಷ್ಟಿಕೋನದಿಂದಲೂ ನಿಂತಿರುವ ಗಡಿಯಾರವು ತಪ್ಪು ನಿರ್ಧಾರಗಳನ್ನು ಕೈಗೊಳ್ಳಲು, ಒತ್ತಡ, ಹತಾಶೆಯನ್ನು ಉಂಟು ಮಾಡುತ್ತದೆ. ಮುರಿದ ಗಡಿಯಾರವು ಅವಕಾಶಗಳನ್ನು ಕೈ ತಪ್ಪುವಂತೆ ಮಾಡುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಸಮೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ದೀಪ ಬೆಳಗಿಸಿ

ಏನು ಮಾಡಬೇಕು?

ನಿಲ್ಲಿಸಿದ ಅಥವಾ ಮುರಿದ ಗಡಿಯಾರವಿದ್ದರೆ ತಕ್ಷಣ ಅದನ್ನು ದುರಸ್ತಿ ಮಾಡುವ ಬದಲಾಯಿಸುವ ಕಾರ್ಯ ಮಾಡಬೇಕು. ಗಡಿಯಾರವು ಭಾವನಾತ್ಮಕ ಮೌಲ್ಯವನ್ನು ಹೊಂದಿದ್ದರೆ ಅದನ್ನು ಸರಿಪಡಿಸಿ. ಯಾವುದೇ ರೀತಿಯಲ್ಲಿ ನಕಾರಾತ್ಮಕ ಶಕ್ತಿ ಅದರೊಳಗೆ ಆಶ್ರಯ ಪಡೆಯುವುದನ್ನು ತಪ್ಪಿಸಿ.

ವಿದ್ಯಾ ಇರ್ವತ್ತೂರು

View all posts by this author