Vastu Tips: ಚಪಾತಿ ತಯಾರಿಸುವಾಗ ಲೆಕ್ಕ ಮಾಡಬಾರದು ಯಾಕೆ ಗೊತ್ತೇ?
ರೊಟ್ಟಿ, ಚಪಾತಿ ತಯಾರಿಸುವಾಗ ಯಾರಾದರೂ ಲೆಕ್ಕ ಮಾಡಿದರೆ ಹಿರಿಯರು ಹತ್ತಿರದಲ್ಲಿದ್ದರೆ ಖಂಡಿತಾ ಬಯ್ಯುತ್ತಾರೆ. ಇದು ಅವರ ಮೂಢನಂಬಿಕೆ ಎಂದು ನಾವೆಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಯಾಕೆಂದರೆ ವಾಸ್ತು ಶಾಸ್ತ್ರ ಕೂಡ ಹೇಳುತ್ತದೆ ಚಪಾತಿ, ರೊಟ್ಟಿ ತಯಾರಿಸುವಾಗ ಅದನ್ನು ಲೆಕ್ಕ ಮಾಡಬಾರದು ಎಂದು. ಯಾಕೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

-

ಬೆಂಗಳೂರು: ಸಾಮಾನ್ಯವಾಗಿ ಮನೆಯಲ್ಲಿ ಪ್ರತಿ ನಿತ್ಯ ಚಪಾತಿ, ರೊಟ್ಟಿ (vastu for roti making) ತಯಾರಿಸುತ್ತೇವೆ. ಹೆಚ್ಚು ಉಳಿಯಬಾರದು ಎಂಬ ಕಾರಣಕ್ಕೆ ಮನೆ ಮಂದಿಗೆ ಎಷ್ಟು ಬೇಕು ಎಂದು ಲೆಕ್ಕ ಮಾಡಿ ಮಾಡುತ್ತೇವೆ. ಆದರೆ ಇದನ್ನು ತಪ್ಪು ಎನ್ನುತ್ತದೆ ವಾಸ್ತು ಶಾಸ್ತ್ರ (Vastu Shastra). ರೊಟ್ಟಿ ಅಥವಾ ಚಪಾತಿಗಳನ್ನು ತಯಾರಿಸುವಾಗ ಎಣಿಸುವುದು ಅಡುಗೆ ಮನೆಯಲ್ಲಿರುವ (vastu for kitchen) ಶಕ್ತಿಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರಿಂದ ಸಮೃದ್ಧಿ ಮತ್ತು ಸಂತೋಷದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ರೊಟ್ಟಿ ಅಥವಾ ಚಪಾತಿಗಳನ್ನು ತಯಾರಿಸುವಾಗ ಲೆಕ್ಕ ಮಾಡುವ ಅಭ್ಯಾಸವಿದ್ದರೆ ಅದನ್ನು ಇಂದಿನಿಂದಲೇ ನಿಲ್ಲಿಸಿ. ಯಾಕೆಂದರೆ ಇದರಿಂದ ಅಡುಗೆ ಸ್ಥಳವು ಸಕಾರಾತ್ಮಕತೆ ಮತ್ತು ಸಮೃದ್ಧಿಯ ಸ್ವರ್ಗವಾಗುವುದು ಎನ್ನುತ್ತಾರೆ ವಾಸ್ತು ತಜ್ಞರಾದ ಡಾ. ವೀರೇಂದ್ರ ಸಾಹ್ನಿ.
ನಮ್ಮ ದೈನಂದಿನ ದಿನಚರಿಯ ಕೆಲವೊಂದು ಸಣ್ಣಪುಟ್ಟ ವಿಷಯಗಳು ಮನೆಯ, ನಮ್ಮ ಜೀವನದ ಶಕ್ತಿಯ ಹರಿವಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಇದರಲ್ಲಿ ಆಹಾರವನ್ನು ತಯಾರಿಸುವ ಕ್ರಿಯೆಯು ಕೂಡ ಸೇರಿದೆ. ವಿಶೇಷವಾಗಿ ಮನೆಯಲ್ಲಿ ನಾವು ತಯಾರಿಸುವ ಚಪಾತಿ, ರೊಟ್ಟಿಯಂತಹ ವಸ್ತುಗಳು ಆಧ್ಯಾತ್ಮಿಕ ಮತ್ತು ಶಕ್ತಿಯುತ ಮಹತ್ವವನ್ನು ಹೊಂದಿವೆ. ರೊಟ್ಟಿಗಳನ್ನು ಎಣಿಸುವುದು ಯಾರಿಗೂ ತೊಂದರೆ ಉಂಟು ಮಾಡುವುದಿಲ್ಲ ಎಂದು ನಾವೆಂದುಕೊಂಡರೆ ಅದು ಮನೆಯ ಶಕ್ತಿಯ ಮೇಲೆ, ವಾಸ್ತುವಿನ ಮೇಲೆ ಪರಿಣಾಮ ಬೀರಿ ದೀರ್ಘಕಾಲದವರೆಗೆ ನಮ್ಮನ್ನು ಬಾಧಿಸುವ ನಕಾರಾತ್ಮಕ ಶಕ್ತಿಯನ್ನು ಉದ್ಭವಿಸುವಂತೆ ಮಾಡಿರುತ್ತದೆ.
ಆಹಾರವೆಂದರೆ ಸಾಕ್ಷಾತ್ ಅನ್ನಪೂರ್ಣಾ ದೇವಿಯ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ. ಇದು ಸಮೃದ್ಧಿ, ಪೋಷಣೆಯ ಪ್ರತೀಕವಾಗಿದೆ. ರೊಟ್ಟಿಗಳನ್ನು ತಯಾರಿಸುವಾಗ ಅವುಗಳನ್ನು ಎಣಿಸುವುದು ಮಿತಿ ಅಥವಾ ಕೊರತೆಯನ್ನು ಸೂಚಿಸುತ್ತದೆ. ಇದರಿಂದ ಮನೆಯ ಸಮೃದ್ಧಿ, ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಕಾರಾತ್ಮಕತೆಯನ್ನು ಬೆಳೆಸಲು, ಸಂಖ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಮುಕ್ತ ಮತ್ತು ಉದಾರ ಮನಸ್ಥಿತಿಯೊಂದಿಗೆ ಚಪಾತಿ, ರೊಟ್ಟಿಗಳನ್ನು ತಯಾರಿಸುವುದು ಉತ್ತಮ.
ಅಡುಗೆ ಮನೆಯನ್ನು ಮನೆಯ ಹೃದಯ ಮತ್ತು ಕುಟುಂಬಕ್ಕೆ ಶಕ್ತಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅತಿಯಾಗಿ ಯೋಚಿಸದೆ ಅಥವಾ ಆಲೋಚನೆಗಳನ್ನು ಮಿತಿಗೊಳಿಸದೆ ಆಹಾರವನ್ನು ತಯಾರಿಸುವುದರಿಂದ ಆಹಾರಕ್ಕೆ ಸೇರಿಸಲಾದ ಶಕ್ತಿಯು ಸಕಾರಾತ್ಮಕ ಮತ್ತು ಪೋಷಣೆಯನ್ನು ಖಚಿತಪಡಿಸುತ್ತದೆ. ರೊಟ್ಟಿಗಳನ್ನು ಎಣಿಸುವುದರಿಂದ ಅದರ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವ ಬದಲು ಅನಗತ್ಯ ಒತ್ತಡವನ್ನು ಉಂಟು ಮಾಡುತ್ತದೆ.
ಆಹಾರವನ್ನು ಅತಿಥಿಗಳು, ಪ್ರಾಣಿ, ಪಕ್ಷಿಗಳೊಂದಿಗೆ ಹಂಚಿಕೊಂಡು ತಿನ್ನುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆಯಾಗುವುದಿಲ್ಲ. ರೊಟ್ಟಿಗಳನ್ನು ಎಣಿಸುವುದು ಈ ಉದ್ದೇಶದ ಮೇಲೆ ಪರಿಣಾಮ ಬೀರುತ್ತದೆ. ಇದು ಅನ್ನ ದಾನ ತತ್ತ್ವಕ್ಕೆ ವಿರುದ್ಧವಾಗಿದೆ. ಆಹಾರವನ್ನು ಯಾವತ್ತೂ ನಿಸ್ವಾರ್ಥವಾಗಿ ತಯಾರಿಸಬೇಕು. ಎಣಿಸುವ ಬದಲು, ಸಮೃದ್ಧಿಯ ಮನಸ್ಥಿತಿಯೊಂದಿಗೆ ಸಾಕಷ್ಟು ಮಾಡುವತ್ತ ಗಮನಹರಿಸಬೇಕು.
ಆಹಾರ ತಯಾರಿಕೆಯು ಕೇವಲ ಒಂದು ಪ್ರಾಪಂಚಿಕ ಚಟುವಟಿಕೆಯಲ್ಲ. ಇದು ಆಧ್ಯಾತ್ಮಿಕವಾಗಿದೆ. ಹೀಗಾಗಿ ಆಹಾರ ತಯಾರಿಸುವಾಗ ಭಕ್ತಿ ಭಾವದೊಂದಿಗೆ ತಯಾರಿಸಬೇಕು. ಲೆಕ್ಕಾಚಾರದ ಬದಲು ಎಲ್ಲರಿಗೂ ಸಂತೃಪ್ತಿ ಆಗುವಷ್ಟು ತಯಾರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಶಕ್ತಿಯು ಸಾಮರಸ್ಯವನ್ನು ಮನೆಯಲ್ಲಿ ಹರಿಯಲು ಅನುವು ಮಾಡಿಕೊಡುತ್ತದೆ.
ಹೇಗೆ ತಯಾರಿಸಬೇಕು?
ಮನೆಯಲ್ಲಿ ಆಹಾರ ತಯಾರಿಸುವ ಕೃತಜ್ಞತೆ ಮತ್ತು ಸಕಾರಾತ್ಮಕತೆಯ ಮೇಲೆ ಗಮನ ಕೇಂದ್ರೀಕರಿಸಬೇಕು. ನಿಖರವಾಗಿ ಸಂಖ್ಯೆಗಳನ್ನು ಲೆಕ್ಕ ಹಾಕುವ ಬದಲು ನೋಡಿ ಪ್ರಮಾಣವನ್ನು ಅಂದಾಜು ಮಾಡುವುದು ಒಳ್ಳೆಯದು. ಇದು ಮನೆಯೊಳಗೆ ಸಮೃದ್ಧಿ, ಸಾಮರಸ್ಯ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಇದನ್ನೂ ಓದಿ: Vastu Tips: ಅದೃಷ್ಟ, ಸಮೃದ್ಧಿಯನ್ನು ಆಹ್ವಾನಿಸುತ್ತದೆ ಬಿದಿರು
ಇನ್ನು ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡಿ,. ಯಾಕೆಂದರೆ ಇದು ಸಕಾರಾತ್ಮಕತೆ ಮತ್ತು ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಅಡುಗೆ ಮಾಡುವಾಗ ಉಳಿದ ಹಿಟ್ಟನ್ನು ಮುಚ್ಚಿಡಿ. ಇಲ್ಲವಾದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇನ್ನು ಅಡುಗೆ ಮನೆಯು ಸದಾ ಸ್ವಚ್ಛ ಮತ್ತು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಸಕಾರಾತ್ಮಕ ಶಕ್ತಿಯ ಹರಿವು ವೃದ್ಧಿಯಾಗುವುದು.