ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ನಿಮ್ಮ ಮನೆಯ ಕಿಟಕಿ-ಬಾಗಿಲು ಈ ದಿಕ್ಕಿನಲ್ಲಿದೆಯೇ? ಹಾಗಾದರೆ ಕಂಟಕ ತಪ್ಪಿದ್ದಲ್ಲ!

ಮನೆಯ ಕಿಟಕಿ ಮತ್ತು ಬಾಗಿಲುಗಳಿಂದ ಹೇಗೆ ಒಳಗೆ ಸಕಾರಾತ್ಮಕ ಶಕ್ತಿಗಳು ಬರುತ್ತವೆಯೋ ಹಾಗೆಯೇ ನಕಾರಾತ್ಮಕ ಶಕ್ತಿಗಳೂ ಕೂಡ ಚಲಿಸುತ್ತವೆ. ಮನೆಯಲ್ಲಿರುವ ಕಿಟಕಿ ಮತ್ತು ಬಾಗಿಲುಗಳು ವಾಸ್ತು ಪ್ರಕಾರ ಇದ್ದಲ್ಲಿ ಮಾತ್ರ ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಬಹುದಾಗಿದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಕಿಟಕಿ ಮತ್ತು ಬಾಗಿಲುಗಳು ಯಾವ ದಿಕ್ಕಿಗೆ ಇರಬೇಕು? ವಾಸ್ತು ಪ್ರಕಾರ ಕಿಟಕಿ, ಬಾಗಿಲು ಇಡುವುದರ ಆಗುವ ಪ್ರಯೋಜನಗಳೇನು ತಿಳಿಯೋಣ ಬನ್ನಿ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಪ್ರತಿಯೊಬ್ಬರೂ ವಾಸ್ತುವಿಗೆ (Vastu Shastra) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮನೆ ಕಟ್ಟುವುದರಿಂದ ಹಿಡಿದು ಮನೆಯೊಳಗಿನ ಅಲಂಕಾರಿಕ ವಸ್ತುವಿನ ತನಕ ವಾಸ್ತುವಿನ ಸಲಹೆಯನ್ನು(Vastu Tips) ಪಾಲಿಸುತ್ತಾರೆ. ಹಾಗೆಯೇ ಮನೆಯ ಪ್ರತಿಯೊಂದು ದಿಕ್ಕು, ಬಾಗಿಲು, ಕಿಟಕಿ, ಪೂಜೆಯ ಕೋಣೆಗೂ ವಾಸ್ತುವಿನಲ್ಲಿ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ ಮನೆಯ ಬಾಗಿಲುಗಳು ಹಾಗೂ ಕಿಟಕಿಗಳು ದಿಕ್ಕಿನಲ್ಲಿ ಇರಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಿಟಕಿಯ ದಿಕ್ಕು, ಬಾಗಿಲುಗಳು ನಿಮ್ಮ ಖ್ಯಾತಿ ಮತ್ತು ಪ್ರಗತಿಯ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಕಿಟಕಿಗಳು ಮತ್ತು ಬಾಗಿಲುಗಳು ಹೊರಗಿನ ಪ್ರಪಂಚವನ್ನು ಮನೆಯೊಂದಿಗೆ ಸಂಪರ್ಕಿಸುವ ಸ್ಥಳಗಳಾಗಿವೆ. ಮನೆಯ ಕಿಟಕಿ ಮತ್ತು ಬಾಗಿಲುಗಳಿಂದ ಹೇಗೆ ಒಳಗೆ ಸಕಾರಾತ್ಮಕ ಶಕ್ತಿಗಳು ಬರುತ್ತವೆಯೋ ಹಾಗೆಯೇ ನಕಾರಾತ್ಮಕ ಶಕ್ತಿಗಳೂ ಕೂಡ ಚಲಿಸುತ್ತವೆ. ಮನೆಯಲ್ಲಿರುವ ಕಿಟಕಿ ಮತ್ತು ಬಾಗಿಲಗಳು ವಾಸ್ತು ಪ್ರಕಾರ ಇದ್ದಲ್ಲಿ ಮಾತ್ರ ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಬಹುದಾಗಿದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಕಿಟಕಿ ಮತ್ತು ಬಾಗಿಲುಗಳು ಯಾವ ದಿಕ್ಕಿಗೆ ಇರಬೇಕು? ವಾಸ್ತು ಪ್ರಕಾರ ಕಿಟಕಿ, ಬಾಗಿಲು ಇಡುವುದರ ಆಗುವ ಪ್ರಯೋಜನಗಳೇನು ತಿಳಿಯೋಣ ಬನ್ನಿ.

ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಇರಲಿ

ಪೂರ್ವ ದಿಕ್ಕಿನಿಂದ ಸೂರ್ಯ ಉದಯಿಸುತ್ತಾನೆ ಮತ್ತು ಈ ದಿಕ್ಕು ದೈವತ್ವದ ಸಂಕೇತವಾಗಿದೆ ಎಂಬುವುದು ಹಿಂದೂಗಳ ನಂಬಿಕೆ. ಆರ್ಥಿಕ ನಷ್ಟ, ಅಪಘಾತ ಮತ್ತು ಕೆಲವು ರೀತಿಯ ಭಯಗಳು ನಿಮ್ಮನ್ನು ಕಾಡುತ್ತಿದ್ದರೆ ಈ ದಿಕ್ಕಿನಲ್ಲಿ ಮನೆ ಬಾಗಿಲು ನಿರ್ಮಿಸುವುದನ್ನು ನೀವು ಮರೆಯಬಾರದು. ಈ ದಿಕ್ಕಿನಲ್ಲಿ ಬಾಗಿಲು ಇಟ್ಟುಕೊಂಡ ಮನೆಗಳಲ್ಲಿ ಸಾಕಷ್ಟು ಕಸ ಇರುತ್ತದೆ ಆದರೆ ಹಣ ವ್ಯರ್ಥವಾಗುವುದಿಲ್ಲ.

Vastu Tips: ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ


ಒಂದೇ ದಿಕ್ಕಿನಲ್ಲಿ ಮೂರು ಬಾಗಿಲು ಬೇಡ

ಮನೆಯಲ್ಲಿ ಒಂದೇ ದಿಕ್ಕಿನಲ್ಲಿ ನೇರವಾಗಿ ಮೂರು ಬಾಗಿಲುಗಳನ್ನು ನಿರ್ಮಿಸಬಾರದು. ಬಾಗಿಲಿನೊಳಗೆ ಇನ್ನೊಂದು ಬಾಗಿಲು ಇಡಬಾರದು. ಮನೆಯ ಮುಖ್ಯ ಪ್ರವೇಶ ದ್ವಾರವು ಮೂಲೆಗೆ ಬರದಂತೆ ಮನೆ ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆ ಪ್ರವೇಶಿಸುವುದಿಲ್ಲ.


ಪ್ರವೇಶ ದ್ವಾರ ಹೀಗಿರಲಿ

ಮನೆಯ ಮುಖ್ಯ ಪ್ರವೇಶ ದ್ವಾರದ ಮುಂದೆ ಹೂವು, ಗಿಡಗಳ ಪಾಟ್, ಮೆಟ್ಟಿಲುಗಳು, ಕಂಬಗಳು ಇರಬಾರದು. ಪ್ರವೇಶ ದ್ವಾರಕ್ಕೆ ಯಾವುದೇ ಅಡಚಣೆಗಳಿರದಂತೆ ನೋಡಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಗಳು ಮನೆ ಪ್ರವೇಶಿಸುತ್ತವೆ.

ಕಿಟಕಿ ಬಾಗಿಲುಗಳ ಸಂಖ್ಯೆ ಸಮನಾಗಿರಲಿ

ಮನೆಗೆ ನಿರ್ಮಿಸುವ ಕಿಟಕಿ ಹಾಗೂ ಬಾಗಿಲುಗಳ ಸಂಖ್ಯೆ ಸಮವಾಗಿರಲಿ. ಅಂದರೆ 2, 4, 6, 8 ಹೀಗೆ. ಮತ್ತು ಅವುಗಳ ಒಟ್ಟು ಸಂಖ್ಯೆ 10 ಆಗಿರಬಾರದು.


ಕಿಟಕಿ ಬಾಗಿಲುಗಳು ಈ ರೀತಿ ಇರಲಿ

ಕಿಟಕಿ ಮತ್ತು ಬಾಗಿಲುಗಳು ಪರಸ್ಪರ ವಿರುದ್ಧಗಿ ನಿರ್ಮಿಸಬೇಕು, ಆಗ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯ ಚಕ್ರವು ಪೂರ್ಣಗೊಳ್ಳುತ್ತದೆ. ಆಧುನಿಕ ಭಾಷೆಯಲ್ಲಿ ಇದನ್ನು ಅಡ್ಡ ವಾತಾಯನ ಎಂದು ಕರೆಯಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಅಡ್ಡ ವಾತಾಯನ ನಿರ್ಮಿಸುವುದು ಉತ್ತಮ ಪರಿಣಿತರ ಮಾತಾಗಿದೆ. ಅಡ್ಡ ವಾತಾಯನ ಇರುವ ಮನೆಗಳಲ್ಲಿ ಗಾಳಿಯು ನೀರನ್ನು ಉತ್ತಮವಾಗಿ ಪ್ರವೇಶಿಸುತ್ತದೆ. ಅಲ್ಲದೇ ಇದು ವಾಸ್ತು ಪ್ರಕಾರ ಉತ್ತಮವೆಂದು ಪರಿಗಣಿಸಲಾಗುತ್ತದೆ.