ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆ ಸಮೀಪ ತಾಳೆ ಮರವಿದ್ದರೆ ಎದುರಾಗುವುದೆ ಸಮಸ್ಯೆ?

ಕೆಲವೊಂದು ಜಾತಿಯ ಗಿಡ ಮರಗಳು ಮನೆಯ ಸಮೀಪ ಇರಬಾರದು ಎನ್ನುತ್ತದೆ ವಾಸ್ತು. ಯಾಕೆಂದರೆ ಈ ಗಿಡ ಮರಗಳು ಮನೆಗೆ ಹಾನಿಯುಂಟು ಮಾಡುವುದು ಮಾತ್ರವಲ್ಲ ಮನೆಯ ಸಮೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ. ಸಕಾರಾತ್ಮಕ ಅಂಶಗಳ ಪ್ರಭಾವವನ್ನು ಕಡಿಮೆ ಮಾಡಿ ನಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ. ತಾಳೆ ಮರ ಮನೆ ಸಮೀಪವಿದ್ದರೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎನ್ನುವ ಕುರಿತು ವಾಸ್ತು ಶಾಸ್ತ್ರ ಹೇಳುವುದು ಹೀಗೆ..

ಬೆಂಗಳೂರು: ಕೆಲವೊಂದು ಗಿಡ (Vastu for Palm Tree) ಮರಗಳು ಮನೆಯ (Vastu for home) ಸಮೀಪದಲ್ಲಿದ್ದರೆ ಅದು ಮನೆಯ ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತಹ ಗಿಡ ಮರಗಳು (Vastu for plant) ಮನೆಗಿಂತ ಸ್ವಲ್ಪ ದೂರದಲ್ಲಿರುವುದು ಒಳ್ಳೆಯದು ಎನ್ನುತ್ತದೆ ವಾಸ್ತು ಶಾಸ್ತ್ರ. ಹೆಚ್ಚಾಗಿ ನಾವು ಮನೆ ಸಮೀಪದಲ್ಲಿ ಅತ್ಯಂತ ಸುಂದರವಾದ ಗಿಡ ಮರಗಳನ್ನು ನೆಡುತ್ತೇವೆ. ಯಾಕೆಂದರೆ ಇವುಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ. ಇಂತಹ ಮರಗಳಲ್ಲಿ ತಾಳೆ ಮರಗಳು ಕೂಡ ಒಂದು. ಆದರೆ ಇದು ಮನೆ ಸಮೀಪವಿರಬಹುದೇ ಎನ್ನುವ ಪ್ರಶ್ನೆಗೆ ವಾಸ್ತು ಶಾಸ್ತ್ರಜ್ಞೆ ಪೂಜಾ ವರ್ಮಾ ಉತ್ತರಿಸಿದ್ದಾರೆ.

ಅತ್ಯಂತ ಸುಂದರವಾಗಿರುವ ತಾಳೆ ಮರಗಳು ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ನೆಡುವ ಮುನ್ನ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಬೇಕು ಎನ್ನುತ್ತಾರೆ ಪೂಜಾ ವರ್ಮಾ.

ಮನೆಯಲ್ಲಿರುವ ಶಕ್ತಿಗಳನ್ನು ನಿಯಂತ್ರಿಸಲು, ಶಕ್ತಿಯ ಹರಿವನ್ನು ಸುಧಾರಿಸಲು ಸಸ್ಯಗಳು ಅತ್ಯವಶ್ಯಕ ಎನ್ನುತ್ತದೆ ವಾಸ್ತು ಶಾಸ್ತ್ರ. ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ತಾಳೆ ಮರವು ಕೆಲವೊಂದು ವಿಶೇಷ ಗುಣಲಕ್ಷಣಗಳನ್ನೂ ಹೊಂದಿದೆ.

ಸರಿಯಾದ ಸ್ಥಳ ಮತ್ತು ಪೋಷಣೆಯಲ್ಲಿ ನಿಖರತೆಯನ್ನು ಕಾಯ್ದುಕೊಂಡರೆ ತಾಳೆ ಮರ ಮನೆಯಲ್ಲಿ ಸ್ಥಿರತೆ, ಬೆಳವಣಿಗೆ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ. ತಾಳೆ ಮರವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಇರಿಸಬೇಕು. ಈ ಸ್ಥಳಗಳು ಹೆಚ್ಚಾಗಿ ಶಕ್ತಿ, ಸ್ಥಿರತೆ ಮತ್ತು ನೆಲದ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಈ ದಿಕ್ಕುಗಳಲ್ಲಿ ತಾಳೆ ಮರಗಳನ್ನು ನೆಡುವುದು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಲು ಮತ್ತು ಮನೆಗೆ ರಕ್ಷಣೆಯನ್ನು ನೀಡಲು ಸಹಾಯ ಮಾಡುತ್ತದೆ.

palm1

ನೀರು ಮತ್ತು ಆಧ್ಯಾತ್ಮಿಕತೆಯ ವಲಯವೆಂದು ಪರಿಗಣಿಸಲಾಗಿರುವ ಮನೆಯ ಈಶಾನ್ಯ ಮೂಲೆಯಲ್ಲಿ ತಾಳೆ ಮರವನ್ನು ನೆಡುವುದು ಸರಿಯಲ್ಲ. ಯಾಕೆಂದರೆ ಇಲ್ಲಿ ಇರಿಸುವ ಬೃಹತ್ ಸಸ್ಯಗಳು ಆಧ್ಯಾತ್ಮಿಕ ಶಕ್ತಿಯ ಹರಿವನ್ನು ತಡೆಯುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟು ಮಾಡಿ ಸಕಾರಾತ್ಮಕ ಚಿಂತನೆಗೆ ಅಡ್ಡಿ ಉಂಟು ಮಾಡಬಹುದು.

ತಾಳೆ ಗಿಡವನ್ನು ಉತ್ತಮವಾಗಿ ನಿರ್ವಹಿಸುವುದು ಕೂಡ ಬಹಳ ಮುಖ್ಯ. ಇದರಲ್ಲಿರುವ ಒಣಗಿದ ಎಲೆಗಳನ್ನು ತೆಗೆದುಹಾಕಬೇಕು. ಯಾಕೆಂದರೆ ಇವುಗಳು ನಿಶ್ಚಲ ಅಥವಾ ನಕಾರಾತ್ಮಕ ಶಕ್ತಿಯ ಪ್ರತಿಕವಾಗಿದ್ದು, ಇದು ಮನೆ ಮಂದಿಯ ನಡುವೆ ಇರುವ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೂಜಾ ವರ್ಮಾ.

ತಾಳೆ ಮರಗಳಿಗೆ ಸೂರ್ಯನ ಬೆಳಕು ಅಗತ್ಯವಿಲ್ಲ. ಆದರೂ ಇದನ್ನು ಕಿಟಕಿಯ ಹತ್ತಿರ ಇಡುವುದು ಒಳ್ಳೆಯದು. ಇದು ಸಸ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲ ಮನೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಆಹ್ವಾನಿಸುತ್ತದೆ.

ಇದನ್ನೂ ಓದಿ: Vastu Tips: ಮನೆ ಸಮೃದ್ಧಿಗೆ ಅಡ್ಡಿಯಾಗುತ್ತದೆ ಈ 2 ಪಾತ್ರೆಗಳು

ತಾಳೆ ಮರಗಳನ್ನು ಮಲಗುವ ಕೋಣೆ ಅಥವಾ ಅಡುಗೆ ಮನೆಗೆ ಸಮೀಪವಾಗಿ ಇರಿಸಬಾರದು. ಒಂದುವೇಳೆ ಇಲ್ಲಿ ಇಟ್ಟರೆ ಇದು ಇಲ್ಲಿನ ಶಕ್ತಿಯನ್ನು ಅಸಮತೋಲನಗೊಳಿಸಿ ಮನೆ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ವಿದ್ಯಾ ಇರ್ವತ್ತೂರು

View all posts by this author