ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳನ್ನು ಇಟ್ಟುಕೊಂಡರೆ ಆರೋಗ್ಯ, ನೆಮ್ಮದಿ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸಮಯದಲ್ಲಿ ತಲೆದಿಂಬಿನ ಬಳಿ ಕೆಲವು ವಸ್ತುಗಳನ್ನು ಇಡುವುದರಿಂದ ಉತ್ತಮ ನಿದ್ರೆ, ಮಾನಸಿಕ ನೆಮ್ಮದಿ ಹಾಗೂ ಸಕಾರಾತ್ಮಕ ಶಕ್ತಿ ಲಭಿಸುತ್ತದೆ. ಈ ಸರಳ ವಾಸ್ತು ಕ್ರಮಗಳನ್ನು ಅನುಸರಿಸಿದರೆ ಜೀವನದಲ್ಲಿ ಶಾಂತಿ ಮತ್ತು ಶುಭ ಫಲಗಳು ದೊರೆಯುತ್ತದೆ. ಹಾಗಾದ್ರೆ ಯಾವುವು ಆ ವಸ್ತುಗಳು?

ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳು ಇದ್ದರೆ ನೆಮ್ಮದಿ ನಿದ್ರೆ

ಸಾಂದರ್ಭಿಕ ಚಿತ್ರ -

Profile
Sushmitha Jain Jan 17, 2026 9:02 AM

ಬೆಂಗಳೂರು: ವಾಸ್ತು ಶಾಸ್ತ್ರದ(Vastu Shastra) ಪ್ರಕಾರ ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಸಣ್ಣ ನಿಯಮಗಳನ್ನು ಪಾಲಿಸಿದರೂ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಬಹುದು. ವಿಶೇಷವಾಗಿ ನಾವು ಮಲಗುವ ಸಮಯದಲ್ಲಿ ಪಾಲಿಸುವ ಕೆಲವು ವಾಸ್ತು ಸಲಹೆ(Vastu Tips) ಗಳು ನಮ್ಮ ಆರೋಗ್ಯ, ಮನಸ್ಸಿನ ಸ್ಥಿತಿ ಹಾಗೂ ಜೀವನದ ಒಟ್ಟಾರೆ ಶುಭಫಲಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ ಈ ವಿಷಯಗಳ ಬಗ್ಗೆ ಅನೇಕ ಜನರಿಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಅದಕ್ಕಾಗಿ ಇಂದಿನ ಈ ಲೇಖನದಲ್ಲಿ ಮಲಗುವಾಗ ತಲೆದಿಂಬಿನ ಬಳಿ ಇಡಬಹುದಾದ ವಸ್ತುಗಳ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸ್ಥಳದ ಬಳಿ ನಾಣ್ಯವನ್ನು ಇಡುವುದು ಅತ್ಯಂತ ಶುಭಕರ. ನಾಣ್ಯವನ್ನು ಲಕ್ಷ್ಮೀ ದೇವಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮಲಗುವ ಮೊದಲು ನಿಮ್ಮ ತಲೆದಿಂಬಿನ ಪೂರ್ವ ದಿಕ್ಕಿನಲ್ಲಿ ಒಂದು ನಾಣ್ಯವನ್ನು ಇಟ್ಟರೆ, ಅದು ಆರ್ಥಿಕ ಅಭಿವೃದ್ಧಿ ಹಾಗೂ ಉತ್ತಮ ಅದೃಷ್ಟವನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇನ್ನೂ ಉತ್ತಮ ನಿದ್ರೆಗೆ ಸಹಾಯ ಮಾಡುವ ವಸ್ತುಗಳಲ್ಲಿ ಏಲಕ್ಕಿ ಹಾಗೂ ಮೆಣಸಿನ ಕಾಯಿ ಪ್ರಮುಖವಾದವು. ಈ ಎರಡನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ನಿದ್ರಾದೇವಿಯ ಅನುಗ್ರಹ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ಉಲ್ಲೇಖಿಸುತ್ತದೆ. ಇದರಿಂದ ಮನಸ್ಸು ಶಾಂತವಾಗಿದ್ದು ಆಳವಾದ ನಿದ್ರೆ ಲಭಿಸುತ್ತದೆ.

ಸಾಮಾನ್ಯವಾಗಿ ಮಲಗುವಾಗ ಹತ್ತಿರದಲ್ಲಿ ನೀರಿನ ಪಾತ್ರೆ ಇಡುವುದು ಒಳ್ಳೆಯ ಅಭ್ಯಾಸವೆಂದು ಹಿರಿಯರು ಹೇಳುತ್ತಾರೆ. ಇದು ಕೇವಲ ರಾತ್ರಿ ಬಾಯಾರಿಕೆಗಾಗಿ ಮಾತ್ರವಲ್ಲ, ವಾಸ್ತು ದೃಷ್ಟಿಯಿಂದಲೂ ಶುಭಕರ. ರಾತ್ರಿ ನೀರನ್ನು ಕುಡಿಯುವುದರಿಂದ ದೇಹದ ಆರೋಗ್ಯ
ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Vastu Tips: ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳನ್ನು ಇಟ್ಟರೆ ಸಿಗುತ್ತದೆ ಆರೋಗ್ಯ ಮತ್ತು ನೆಮ್ಮದಿ

ಜೀರಿಗೆ ಕಾಳು ಕೂಡ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ಹೊಂದಿದೆ. ಜೀರಿಗೆ ರಾಹು ದೋಷಕ್ಕೆ ಸಂಬಂಧಿಸಿದ ವಸ್ತುವೆಂದು ಪರಿಗಣಿಸಲಾಗುತ್ತದೆ. ಮಲಗುವಾಗ ತಲೆದಿಂಬಿನ ಬಳಿ ಜೀರಿಗೆ ಇಟ್ಟರೆ ರಾಹು ದೋಷದ ಪ್ರಭಾವ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಇದರ ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.

ಮಲಗುವ ಮುನ್ನ ಬೆಳ್ಳುಳ್ಳಿ ಮತ್ತು ಲವಂಗವನ್ನು ತಲೆದಿಂಬಿನ ಕೆಳಗೆ ಇಡುವುದರಿಂದ ಸಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಇದರಿಂದ ನಿದ್ರೆ ಉತ್ತಮವಾಗುತ್ತದೆ. ವಾಸನೆ ಇಷ್ಟವಿಲ್ಲದವರು ಇದನ್ನು ಸಣ್ಣ ಡಬ್ಬಿಯಲ್ಲಿ ಇಟ್ಟುಕೊಳ್ಳಬಹುದು.
ಇಂತಹ ವಾಸ್ತು ನಿಯಮಗಳನ್ನು ಪಾಲಿಸಿದರೆ ಉತ್ತಮ ನಿದ್ರೆಯ ಜೊತೆಗೆ ಜೀವನದಲ್ಲಿ ಅದೃಷ್ಟ, ಶಾಂತಿ ಹಾಗೂ ಶುಭ ಫಲಗಳು ಹೆಚ್ಚಾಗುತ್ತದೆ.

ಕೆಲವರಿಗೆ ದಿನಪೂರ್ತಿ ಕೆಲಸದ ನಂತರ ರಾತ್ರಿ ಕೆಟ್ಟ ಕನಸುಗಳು ಕಾಡುತ್ತವೆ. ಇಂತಹ ಸಮಸ್ಯೆ ಇದ್ದರೆ ಲೋಹದ ಚಾಕುವನ್ನು ಬಟ್ಟೆಯಲ್ಲಿ ಸುತ್ತಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಚಾಕುವಿನ ತುದಿಯನ್ನು ಮೇಲಿನ ದಿಕ್ಕಿಗೆ ಇರಿಸುವುದು ಸೂಕ್ತ. ಇದರಿಂದ ಕೆಟ್ಟ ಕನಸುಗಳು ದೂರವಾಗುತ್ತವೆ ಹಾಗೂ ಯಾವುದೇ ಅಪಾಯವೂ ಇರುವುದಿಲ್ಲ.
ಮನೆಯಲ್ಲೇ ಮನಸ್ಸಿಗೆ ನೆಮ್ಮದಿ ಇಲ್ಲ, ಅಶಾಂತಿ ಕಾಡುತ್ತಿದೆ ಎಂಬ ಭಾವನೆ ಇದ್ದರೆ ಸುಗಂಧಿತ ಹೂವುಗಳು ಅಥವಾ ಸುಗಂಧಿತ ಕ್ಯಾಂಡಲ್ ಅನ್ನು ಮಲಗುವ ಸ್ಥಳದಲ್ಲಿ ಇಡುವುದು ಒಳ್ಳೆಯದು. ಇದರಿಂದ ಮನಸ್ಸು ಶಾಂತವಾಗುತ್ತದೆ ಹಾಗೂ ನಿದ್ರೆಯ ಗುಣಮಟ್ಟ ಹೆಚ್ಚಾಗುತ್ತದೆ.