ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ತಪ್ಪಿಯೂ ಮನೆಯ ಮುಖ್ಯ ದ್ವಾರದ ಮುಂದೆ ಈ ಮೂರು ವಸ್ತುಗಳು ಇರದಂತೆ ನೋಡಿಕೊಳ್ಳಿ..!

Vastu Tips: ಮನೆಯಲ್ಲಿ ವಾಸ್ತು ಸಮಸ್ಯೆಯಿದ್ದರೆ ಆ ಮನೆಯಲ್ಲಿ ಆರೋಗ್ಯದ ಸಮಸ್ಯೆಗಳು, ಹಣದ ಸಮಸ್ಯೆಗಳು ಸೇರಿದಂತೆ ಇನ್ನಿತರ ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಹಾಗಾಗಿ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲು ವಾಸ್ತುವಿನ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಅದರಲ್ಲೂ ಲಕ್ಷ್ಮೀ ವಾಸ ಸ್ಥಳ ಎನ್ನಿಸುವ ಮನೆಯ ಮುಖ್ಯ ದ್ವಾರದ ವಿಷಯದಲ್ಲಿಯೂ ವಾಸ್ತು ಪಾಲನೆ ಮಾಡುವುದು ಅತ್ಯಗತ್ಯವಾಗಿದ್ದು, ಇಲ್ಲಿ ಆ ಕುರಿತು ವಿವರಿಸಲಾಗಿದೆ.

ಸಾಂಧರ್ಬಿಕ ಚಿತ್ರ

ಬೆಂಗಳೂರು: ಮನೆಯಲ್ಲಿನ ಶಾಂತಿ, ನೆಮ್ಮದಿ ಹಾಗೂ ಸಂಪತ್ತು, ಆ ಮನೆಯ ವಾಸ್ತುವಿನ (Vastu) ಮೇಲೆ ಅವಲಂಬಿವಾಗಿರುತ್ತದೆ. ಅದೇ ಮನೆಯಲ್ಲಿ ವಾಸ್ತು ದೋಷವಿದ್ದರೆ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದ್ದು, ಕೌಟುಂಬಿಕ ಕಲಹ, ಆರ್ಥಿಕ ನಷ್ಟ, ಸೋಲು ಹೀಗೆ ನಾನಾ ವೈಯಕ್ತಿಕ ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಅಥವಾ ಸ್ಥಳದಲ್ಲಿ ಇಡದಿದ್ದರೆ, ಅದು ವಾಸ್ತು ದೋಷವನ್ನು ಉಂಟುಮಾಡಬಹುದಾಗಿದ್ದು, ಇದರಿಂದಾಗಿ ಕುಟುಂಬ ಸದಸ್ಯರು ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಸುಖ ಖುಷಿ ಇರಬೇಕೆಂದರೆ ವಾಸ್ತು ಶಾಸ್ತ್ರವನ್ನು (Vastu Shastra) ಪಾಲಿಸುವುದು ಅತ್ಯಗತ್ಯವಾಗಿದ್ದು, ವಾಸ್ತು ಪ್ರಕಾರ ಪ್ರತಿಯೊಂದು ವಸ್ತುಗಳು ಮನೆಯಲ್ಲಿ ಇದ್ದರೆ ಅಂಥವರ ಜೀವನ ಸುಖಮಯವಾಗಿರುತ್ತದೆ. ಮಾತ್ರವಲ್ಲದೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ.

ಹೇಗೆ ಒಂದು ಸಣ್ಣ ಗಿಡದಿಂದ ಹಿಡಿದು ಗೋಡೆಯ ಮೇಲಿನ ದೇವರ ಫೋಟೋದವರೆಗೂ ವಾಸ್ತು ಶಾಸ್ತ್ರದ ನಿಯಮ ಮುಖ್ಯವಾಗುತ್ತದೆಯೋ ಹಾಗೇ ಮನೆಯಲ್ಲಿರುವ ಬಾಗಿಲು - ಕಿಟಕಿಗಳನ್ನು ವಾಸ್ತು ಪ್ರಕಾರ ಇಡುವುದು ಪ್ರಮುಖವಾಗುತ್ತದೆ. ಮನೆ ಕಟ್ಟುವಾಗ ಹೇಗೆ ವಾಸ್ತು ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಅಂತಹವುಗಳ ಪೈಕಿ ಮನೆಯ ಮುಖ್ಯ ದ್ವಾರವೂ ಒಂದಾಗಿದ್ದು, ಅಲ್ಲಿ ಲಕ್ಷ್ಮೀ ವಾಸಿಸುತ್ತಾಳೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಮನೆಯ ಮುಖ್ಯ ಬಾಗಿಲ ಎದುರು ಕೆಲವೊಂದು ವಸ್ತುಗಳನ್ನು ಹಿಡುವುದು ಹಾಗೂ ಇರುವುದು ಬಾಹಿರವಾಗಿದ್ದು, ಆ ವಸ್ತುಗಳು ಯಾವುವು..? ಇಟ್ಟರೆ ಏನಾಗುತ್ತದೆ..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ತಪ್ಪಿಯೂ ಕಸದ ಬುಟ್ಟಿ ಇಡಬೇಡಿ..!

ಕಸ ಎಂದರೆ ದಾರಿದ್ರ್ಯ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಬೆಳಗ್ಗೆ ಎದ್ದ ಕೂಡಲೇ ನಮ್ಮ ಹಿರಿಯರು ಮನೆಯ ಶನಿಗಸವನ್ನು ಹೊರಹಾಕಬೇಕೆಂದು ಹೇಳುತ್ತಾರೆ. ಹೀಗಿರುವಾಗ ಮನೆಯ ಮುಂದೆ ಕಸದ ಬುಟ್ಟಿ ಹಿಡುವುದು ಅಥವಾ ಹಾಕುವುದು ಮನೆಗೆ ದುರಾದೃಷ್ಟವನ್ನು ಆಹ್ವಾನಿಸಿದಂತೆ. ಅದಕ್ಕೆ ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಮನೆಯ ಹೊರಗೆ ಕಸ ಹಾಕವುದು ಮಂಗಳಕರವಲ್ಲ ಎಂಬುದನ್ನು ತಿಳಿಸಿದೆ. ಮುಖ್ಯ ದ್ವಾರದ ಹೊರಗೆ ಹಾಕುವ ಕಸ ಆ ಮನೆಯ ಅಭಿವೃದ್ಧಿಯನ್ನು ಕುಂಠಿತವಾಗುವಂತೆ ಮಾಡುವುದಲ್ಲದೇ, ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣದ ಸಂಬಂಧಿತ ಸಮಸ್ಯೆಗಳು ಸಹ ಹೆಚ್ಚಾಗುತ್ತದೆ. ಆದ್ದರಿಂದ ಮುಖ್ಯ ದ್ವಾರದಲ್ಲಿ ಕಸವಿದ್ದರೆ ವಿಲೇವಾರಿ ಮಾಡಿ.

ಈ ಸುದ್ದಿಯನ್ನು ಓದಿ: Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಪಪ್ಪಾಯ ಗಿಡ ಇದ್ದರೆ ಒಳ್ಳೆಯದೇ..? ಇಲ್ಲಿದೆ ಉತ್ತರ

ವಿದ್ಯುತ್ ಕಂಬ

ವಿದ್ಯುತ್ ಕಂಬ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಮುಂದೆ ವಿದ್ಯುತ್ ಕಂಬ ಇರುವುದು ಬಾಹಿರವಾಗಿದೆ. ಇದು ಅಡಚಣೆಯ ಸೂಚಕವಾಗಿದ್ದು, ಕೌಟುಂಬಿಕ ಕಲಹ, ಜಗಳ, ಮನಸ್ತಾಪದಂತಹ ಅಹಿತಕರ ಸಮಸ್ಯೆಗಳನ್ನು ಹುಟ್ಟು ಹಾಕಲಿದೆ. ಇದರೊಂದಿಗೆ ವೃತ್ತಿಜೀವನದಲ್ಲಿಯೂ ಅಡೆತಡೆಗಳನ್ನು ಉಂಟುಮಾಡಲಿದ್ದು, ಕಚೇರಿಯಲ್ಲಿ- ಆಫೀಸ್ ಅಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡುತ್ತದೆ. ಹಾಗಾಗಿ ಒಂದು ವೇಳೆ ನಿಮ್ಮ ಮನೆ ಮುಂದೆ ವಿದ್ಯುತ್ ಕಂಬ ಇದ್ದರೆ, ಅದನ್ನು ಸಾಧ್ಯವಾದರೆ ಸ್ಥಳಾಂತರಿಸುವುದು ಉತ್ತಮ.

ತಪ್ಪಿಯೂ ಮನೆ ಮುಂದೆ ಚಪ್ಪಲಿ ಬಿಡಬೇಡಿ

ಪಾದರಕ್ಷೆ - ಚಪ್ಪಲಿ- ಶೂಗಳನ್ನು ಮನೆಯ ಮುಂದೆ ಬಿಡುವುದನ್ನು ಅಶುಭವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಬಾಗಿಲಲ್ಲಿ ಚಪ್ಪಲಿಯನ್ನು ಇಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯೂ ಇದ್ದು, ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಂದೆ ಚಪ್ಪಲಿಗಳನ್ನು ಬಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುವ ಜೊತೆಗೆ ದಾರಿದ್ರ್ಯವೂ ಕಾಡುತ್ತದೆ ಎಂದು ಹೇಳಲಾಗುತ್ತದೆ.