Vastu Tips: ದಿಂಬಿಗೆ ತಲೆ ಇಟ್ಟ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕೇ..? ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಅನುಸರಿಸಿ
ಕೆಲವರಿಗೆ ರಾತ್ರಿ ನಿದ್ದೆಯಲ್ಲಿ ಕೆಟ್ಟ ಕನಸುಗಳು ಕಾಡುತ್ತವೆ. ಇದು ನಮ್ಮ ನಿದ್ದೆಯನ್ನು ಹಾಳು ಮಾಡಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಅಥವಾ ಕಚೇರಿಯಲ್ಲಿ ನೆಗೆಟಿವಿಟಿಯನ್ನು ದೂರಗೊಳಿಸಿ ಪಾಸಿಟಿವಿಟಿಯನ್ನು ಹೆಚ್ಚುಗೊಳಿಸಲು ಈ ಸರಳ ಟಿಪ್ಸ್ ಸಹಕಾರಿಯಾಗಿದೆ. ಈ ಲೇಖನದಲ್ಲಿ, ನಾವು ಮಲಗುವ ಸಂದರ್ಭದಲ್ಲಿ ಅನುಸರಿಸಬಹುದಾದ ಸಿಂಪಲ್ ವಾಸ್ತು ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರ -
ಬೆಂಗಳೂರು: ಸರಳ ವಾಸ್ತುವಿನಿಂದ(Vastu) ನಮ್ಮ ಬದುಕನ್ನು ಸಿಂಪಲ್ ಆಗಿ ಸೂಪರ್ಬ್ ಮಾಡಿಕೊಳ್ಳಬಹುದು. ಹೀಗೆ ಸರಳವಾಗಿ ನಮ್ಮ ಮನೆ ಮತ್ತು ಕಚೇರಿಯನ್ನು ವಾಸ್ತು ಪರ್ಫೆಕ್ಟ್ ಮಾಡಿಕೊಳ್ಳುವ ಟಿಪ್ಸ್ ಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿದೆ. ನಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ನೆಗಿಟಿವಿಟಿಯನ್ನು ದೂರಗೊಳಿಸಿ ಪಾಸಿಟಿವಿಟಿಯನ್ನು ಹೆಚ್ಚುಗೊಳಿಸಲು ಇಂತಹ ಸರಳ ಟಿಪ್ಸ್ ಗಳು ಸಹಕಾರಿಯಾಗಿದೆ. ಈ ಲೇಖನದಲ್ಲಿ ಇಂದು ನಾವು ಮಲಗುವ ಸಂದರ್ಭದಲ್ಲಿ ಅನುಸರಿಸಬಹುದಾದ ಸಿಂಪಲ್ ವಾಸ್ತು ಟಿಪ್ಸ್ ಗಳ(Vastu Tips) ಬಗ್ಗೆ ತಿಳಿದುಕೊಳ್ಳೋಣ.
ನೀವು ಮಲಗುವ ತಲೆದಿಂಬಿನ ಬಳಿ ನಾಣ್ಯವನ್ನು ಇಟ್ಟುಕೊಳ್ಳುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನಾಣ್ಯ ಲಕ್ಷ್ಮಿದೇವಿಯ ಪ್ರತೀಕ. ಹಾಗಾಗಿ ನಾವು ಮಲಗುವುದಕ್ಕಿಂತ ಮುಂಚೆ ಮಲಗುವ ಸ್ಥಳದ ಪೂರ್ವ ದಿಕ್ಕಿನಲ್ಲಿ ನಾಣ್ಯವನ್ನು ಇರಿಸಬೇಕು. ಹೀಗೆ ಮಾಡುವುದರಿಂದ ಅದೃಷ್ಟ ಹಾಗೂ ಸಂಪತ್ತನ್ನು ಇದು ಆಕರ್ಷಿಸುತ್ತದೆ ಮಾತ್ರವಲ್ಲದೇ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
ಕೆಲವರಿಗೆ ರಾತ್ರಿ ನಿದ್ದೆಯಲ್ಲಿ ಕೆಟ್ಟ ಕನಸುಗಳು ಕಾಡುತ್ತವೆ. ಇದು ನಮ್ಮ ನಿದ್ದೆಯನ್ನು ಹಾಳು ಮಾಡಿಬಿಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಹದ ಚಾಕುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ, ಕೆಟ್ಟ ಕನಸುಗಳು ದೂರವಾಗುತ್ತವೆ. ಆ ಚಾಕುವನ್ನು ಬಟ್ಟೆಯಲ್ಲಿ ಸುತ್ತಿ ಮೇಲಿನ ದಿಕ್ಕಿಗೆ ಪಾಯಿಂಟ್ ಮಾಡುವಂತೆ ನಿಮ್ಮ ದಿಂಬಿನ ಕೆಳಗೆ ಅದನ್ನು ಇಟ್ಟುಕೊಳ್ಳಬೇಕು.
ಒಂದು ವೇಳೆ ಮನೆಯಲ್ಲಿ ನಿಮಗೆ ನೆಮ್ಮದಿ ಸಿಕ್ತಿಲ್ಲ ಹಾಗೂ ಅಶಾಂತಿ ಮತ್ತು ಕಿರಿಕಿರಿ ಉಂಟಾಗುತ್ತದೆ ಎಂದಾದರೆ, ಸುಗಂಧಿತ ಹೂ ಅಥವಾ ಸುಗಂಧಿತ ಕ್ಯಾಂಡಲನ್ನು ನೀವು ಮಲಗುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದರಿಂದಾಗಿ ನಿಮಗೆ ನೆಮ್ಮದಿಯ ನಿದ್ದೆ ಬರುತ್ತದೆ ಹಾಗೂ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಯಾಗುತ್ತದೆ.
ಇನ್ನು, ನಾವೆಲ್ಲರೂ ಪವಿತ್ರವೆಂದು ಪರಿಗಣಿಸಿರುವ ಭಗವದ್ಗೀತೆಯನ್ನು ಮಲಗುವ ಸಂದರ್ಭದಲ್ಲಿ ನಿಮ್ಮ ಬಳಿ ಇಟ್ಟುಕೊಳ್ಳುವುದು ಉತ್ತಮ. ಇದನ್ನು, ನೀವು ನಿಮ್ಮ ತಲೆದಿಂಬಿನ ಪಕ್ಕದಲ್ಲಿ ಇರಿಸಿಕೊಂಡರೆ, ನಿಮ್ಮ ಸುತ್ತ ಇರುವಂತಹ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಆದರೆ ನೆನಪಿಡಿ, ಯಾವತ್ತೂ ಕೂಡ ಮಲಗುವ ಸಂದರ್ಭದಲ್ಲಿ ಯಾವುದೇ ಪುಸ್ತಕವನ್ನು ಕಾಲ ಕೆಳಗೆ ಇಟ್ಟುಕೊಂಡು ಮಲಗಬೇಡಿ. ಹೀಗೆ ಮಾಡುವುದರಿಂದ ನಕಾರಾತ್ಮತೆಯನ್ನು ನೀವಾಗಿಯೇ ಆಹ್ವಾನಿಸಿದಂತೆ.
ಒಂದು ವೇಳೆ ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವೆಂದಾದರೆ, ಏಲಕ್ಕಿ ಹಾಗೂ ಮೆಣಸಿನ ಕಾಯಿಯನ್ನು ನಿಮ್ಮ ತಲೆದಿಂಬಿನ ಕೆಳಗೆ ಇರಿಸಿಕೊಂಡಲ್ಲಿ ನೀವು ನೆಮ್ಮದಿಯಾಗಿ ದಿಂಬಿಗೆ ತಲೆಕೊಟ್ಟ ಕೂಡಲೇ ನಿದ್ರಾದೇವಿಯ ವಶವಾಗುತ್ತೀರಿ.
ಹಿಂದಿನ ಕಾಲದಲ್ಲಿ ಮಲಗುವ ಜಾಗದಲ್ಲಿ ಒಂದು ಲೋಟದಲ್ಲಿ ಅಥವಾ ತಂಬಿಗೆಯಲ್ಲಿ ನೀರನ್ನು ಇಟ್ಟುಕೊಳ್ಳುತ್ತಿದ್ದರು. ಇದಕ್ಕೆ ನಿಜವಾಗಿಯೂ ಶಾಸ್ತ್ರ ಮತ್ತು ವಾಸ್ತುವಿನ ಪ್ರಾಮುಖ್ಯತೆಯಿದೆ. ಇದು ನಿಮಗೆ ತಿಳಿ ನಿದ್ರೆಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಮಾತ್ರವಲ್ಲದೇ, ರಾತ್ರಿ ಬಾಯಾರಿಕೆ ಆದಾಗ ನೀರನ್ನು ಕುಡಿಯುವುದರ ಮೂಲಕ ವೈಜ್ಞಾನಿಕ ದೃಷ್ಟಿಯಲ್ಲಿ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಜೀರಿಗೆ ಕಾಳನ್ನು ರಾಹುವಿನ ದೋಷಕ್ಕೆ ಸಂಬಂಧಪಟ್ಟಂತಹ ಕಾಳು ಎಂದೇ ಪರಿಗಣಿಸಲಾಗಿದೆ. ಹೀಗಾಗಿ, ನೀವು ಮಲಗುವ ಮುನ್ನ ನಿಮ್ಮ ತಲೆದಿಂಬಿಗೆ ಹತ್ತಿರ ಸ್ವಲ್ಪ ಜೀರಿಗೆ ಕಾಳುಗಳನ್ನು ಇಟ್ಕೊಂಡ್ರೆ ರಾಹು ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಮಾತ್ರವಲ್ಲದೇ ಇದರಿಂದ, ನಿಮ್ಮನ್ನು ಕಾಡುತ್ತಿರುವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ದೂರವಾಗುತ್ತದೆ.
ಇಷ್ಟೆಲ್ಲ ಅಲ್ಲದೇ, ಬೆಳ್ಳುಳ್ಳಿ ಹಾಗೂ ಲವಂಗವನ್ನು ಕೂಡ ಮಲಗುವ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಉತ್ತಮ ನಿದ್ರೆ ನಿಮ್ಮದಾಗುತ್ತದೆ. ಮಲಗೋ ಮುಂಚೆ ನೀವು ಇದನ್ನು ಇಟ್ಟುಕೊಂಡರೆ ಇದರಿಂದ ಉತ್ತಮ ಶಕ್ತಿಯನ್ನು ಆಕರ್ಷಿಸಿದಂತಾಗುತ್ತದೆ