ಬೆಂಗಳೂರು: ಮನೆಯಲ್ಲಿರುವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎಂಬುದು ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಆರ್ಥಿಕ ಸ್ಥಿತಿ, ಆರೋಗ್ಯ ಮತ್ತು ಮನಶಾಂತಿಗೆ ಪ್ರಭಾವ ಬೀರುತ್ತದೆ ಎಂದು ನಂಬಲಾಗುತ್ತದೆ. ವಸ್ತುಗಳನ್ನು ಅಸಮರ್ಪಕವಾಗಿ ಇಡುವುದರಿಂದ ಹಣಕಾಸಿನ ಅಡೆತಡೆಗಳು ಉಂಟಾಗಬಹುದು. ಆದ್ದರಿಂದ ಸಮೃದ್ಧಿ, ಐಶ್ವರ್ಯ ಮತ್ತು ಪ್ರಗತಿಯನ್ನು ಆಕರ್ಷಿಸಲು ಕೆಲವು ಪವಿತ್ರ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅತ್ಯಂತ ಮುಖ್ಯ.
ವಾಸ್ತು ಶಾಸ್ತ್ರವು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಲು ಸರಳ ಮಾರ್ಗಗಳನ್ನು ಸೂಚಿಸುತ್ತದೆ. ಲಕ್ಷ್ಮೀ ದೇವಿಯ ಕೃಪೆ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಬಯಸುವವರು ಈ ವಸ್ತುಗಳನ್ನು ಸೂಕ್ತ ದಿಕ್ಕಿನಲ್ಲಿ ಇರಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಹಾಗಾದ್ರೆ ವಾಸ್ತು ಶಾಸ್ತ್ರ ಸಲಹೆಯಂತೆ(Vastu Tips) ಯಾವ ಕ್ರಮಗಳನ್ನು ಅನುಸರಿಸಿದ್ದರೆ ಸಾಲದಿಂದ ಮುಕ್ತಿ ಪಡೆಯಬಹುದು..? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ..? ಇಲ್ಲಿದೆ ಮಾಹಿತಿ
ತುಳಸಿ ಗಿಡ
ತುಳಸಿ ಪವಿತ್ರ ಗಿಡವಾಗಿದ್ದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಅಂಗಳದಲ್ಲಿ ತುಳಸಿಯನ್ನು ಇಡುವುದರಿಂದ ಮನೆಯ ವಾತಾವರಣ ಶುದ್ಧವಾಗುತ್ತದೆ ಮತ್ತು ಸೌಹಾರ್ದ ಹೆಚ್ಚುತ್ತದೆ.
ನೀರಿನಿಂದ ತುಂಬಿದ ಕಲಶ
ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೀರಿನಿಂದ ತುಂಬಿದ ಕಲಶವನ್ನು ಇಡುವುದು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸಹಾಯಕವೆಂದು ನಂಬಲಾಗಿದೆ.
ಶಂಖ
ಶಂಖವನ್ನು ಲಕ್ಷ್ಮೀ ದೇವಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಪೂಜಾ ಕೋಣೆಯಲ್ಲಿ ದೇವಿಯ ವಿಗ್ರಹದ ಬಲಭಾಗದಲ್ಲಿ ಶಂಖವನ್ನು ಇಟ್ಟು ಪೂಜೆಯ ವೇಳೆ ಊದುವುದರಿಂದ ವಾತಾವರಣ ಶುದ್ಧಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಸ್ವಸ್ತಿಕ ಚಿಹ್ನೆ
ಮನೆಯ ಮುಖ್ಯ ದ್ವಾರ ಅಥವಾ ಪೂಜಾ ಸ್ಥಳದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕುವುದು ಶುಭ ಮತ್ತು ಪ್ರಗತಿಯ ಸಂಕೇತವಾಗಿದೆ. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.
ಹಿತ್ತಾಳೆ ಅಥವಾ ತಾಮ್ರದ ಗಂಟೆ
ಪೂಜಾ ಕೋಣೆಯಲ್ಲಿ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಹಿತ್ತಾಳೆ ಅಥವಾ ತಾಮ್ರದ ಗಂಟೆಯನ್ನು ಇಟ್ಟು ಪ್ರತಿದಿನ ಬಾರಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಿಕೆ ಇದೆ.
ಮನೆಯ ಪ್ರಮುಖ ದಿಕ್ಕುಗಳಲ್ಲಿ ಈ ಪವಿತ್ರ ವಸ್ತುಗಳನ್ನು ವಾಸ್ತು ನಿಯಮಗಳ ಪ್ರಕಾರ ಇಡುವುದರಿಂದ ಧನಾತ್ಮಕ ವಾತಾವರಣ ನಿರ್ಮಾಣವಾಗಿ, ಆರ್ಥಿಕ ಅಡೆತಡೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಇದು ಸಮೃದ್ಧಿ ಮತ್ತು ಸಾಲಮುಕ್ತ ಜೀವನದತ್ತ ಒಂದು ಉತ್ತಮ ಹೆಜ್ಜೆಯಾಗಬಹುದು.