ಬೆಂಗಳೂರು: ಮನೆಯಲ್ಲಿ ನೆಮ್ಮದಿ ಸಾಮರಸ್ಯ, ನೆಲಸಬೇಕೆಂದರೆ ಆ ಗೃಹದ ವಾಸ್ತುವೂ ಮುಖ್ಯ ಅಗುತ್ತದೆ. ಅದಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Shastra) ಬಹಳ ಮಹತ್ವ ಇದ್ದು, ಸಕಾರಾತ್ಮಕ ಶಕ್ತಿ ಮತ್ತು ಒಳ್ಳೆಯ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅಲ್ಲದೇ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ, ದೇವರ ಮನೆ ಹಾಗೇ ಮಲಗುವ ಕೋಣೆ ಹೇಗಿರಬೇಕೆಂದು ವಿವರಿಸಿದಂತೆ ಮನೆಯಲ್ಲಿ ಇಟ್ಟುಕೊಳ್ಳಬಹುದಾದ ಕೆಲ ಪ್ರತಿಮೆ - ಫೋಟೋಗಳ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಅವುಗಳು ನಿಮ್ಮ ಜೀವನದಲ್ಲಿನ ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗಲಿದ್ದು, ಕೈಗೊಂಡ ಯೋಜನೆಗಳು ಫಲಿಸುವಂತೆ ಮಾಡುತ್ತದೆ. ಹೀಗೆ ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಫೋಟೋಗಳನ್ನು ಮನೆಯಲ್ಲಿ ಹಾಕಿಕೊಳ್ಳುವುದರಿಂದ ಜೀವನದಲ್ಲಿ ಶಾಂತಿ ಮತ್ತು ಸಂತೋಷವೂ ಫಲಿಸುತ್ತದೆ. ಚಿತ್ರಗಳು ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ವಾಸ್ತು ತಜ್ಞರು (Vastu experts) ನಂಬುತ್ತಾರೆ. ಅಂತಹ ಚಿತ್ರಗಳಲ್ಲಿ ಕುದುರೆಯ ಫೋಟೋವು ಒಂದಾಗಿದ್ದು, ಇದು ಮನೆಗೆ ಅಬಿವೃದ್ಧಿಯನ್ನು ತರಳಿದೆ.
ಹೌದು ಹಿಂದೂ ಧರ್ಮದ (Hindu Religion) ಪ್ರಕಾರ 7 ಸಂಖ್ಯೆಯನ್ನು ಶುಭ ಸಂಖ್ಯೆ ಎಂದು ಪರಿಗಣಿಸಲಾಗಿದ್ದು, ಈ ಸಂಖ್ಯೆಯು ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುತ್ತದೆ. ಮದುವೆಯ ಸಮಯದಲ್ಲಿ ಸಪ್ತಪದಿ ತುಳಿಯಲಾಗುತ್ತದೆ. ಆಕಾಶದಲ್ಲಿ ಮೂಡುವ ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿವೆ. ಭೂಮಿಯ ಮೇಲೆ ಏಳು ಸಾಗರಗಳಿವೆ. ವಿಶ್ವದಲ್ಲಿ ಏಳು ನಕ್ಷತ್ರಪುಂಜಗಳಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸೂರ್ಯನ ರಥದಲ್ಲಿ ಏಳು ಕುದುರೆಗಳಿವೆ. ಈ ಕಾರಣದಿಂದಲೇ ಮನೆಯ ಗೋಡೆಯ ಮೇಲೆ ಏಳು ಕುದುರೆಗಳ ಫೋಟೋವನ್ನು ಇಡುವುದು ಪವಿತ್ರವೆಂದು ನಂಬಲಾಗಿದೆ.
ಈ ಸುದ್ದಿಯನ್ನು ಓದಿ; Astro Tips: ‘ಭಾಗ್ಯದ ಲಕ್ಷ್ಮೀ ಬಾರಮ್ಮ..!’ ಲಕ್ಷ್ಮೀ ನಿಮ್ಮ ಮನೆಗೆ ಬರಬೇಕು ಅಂದ್ರೆ ಹೀಗೆ ಮಾಡಿ
ಹಾಗಾದ್ರೆ ವಾಸ್ತು ಪ್ರಕಾರ ಮನೆಯಲ್ಲಿ ಈ ಏಳು ಕುದುರೆ ಫೋಟೋವನ್ನು ಎಲ್ಲಿ ಹಾಕಬೇಕು..? ಯಾವ ನಿಯಮ ಪಾಲಿಸಬೇಕು..? ಎಂಬ ಮಾಹಿತಿ ಇಲ್ಲಿದೆ.
ಈ ದಿಕ್ಕು ಉತ್ತಮ
ವಾಸ್ತು ಶಾಸ್ತ್ರದ ಪ್ರಕಾರ ಏಳು ಕುದುರೆಗಳ ಚಿತ್ರಪಟವನ್ನು ಲಿವಿಂಗ್ ರೂಂ, ಬೆಡ್ ರೂಂ, ಆಫಿಸ್, ವ್ಯಾಪಾರದ ಸ್ಥಳದಲ್ಲಿ ಇರಿಸಬಹುದು. ಒಂದು ವೇಳೆ ನೀವು ಮನೆಯಲ್ಲಿ ಈ ಚಿತ್ರಪಟವನ್ನು ಇರಿಸೋದಕ್ಕೆ ಯೋಚಿಸುತ್ತಿದ್ದರೆ ದಕ್ಷಿಣ ಭಾಗದಲ್ಲಿ ಇಟ್ಟರೆ ಒಳ್ಳೆಯದು. ಯಾಕಂದ್ರೆ ದಕ್ಷಿಣವು ಯಶಸ್ಸು ಮತ್ತು ಖ್ಯಾತಿಯನ್ನು ಪ್ರತಿನಿಧಿಸುತ್ತದೆ. ಒಂದು ವೇಳೆ ದಕ್ಷಿಣ ಭಾಗದಲ್ಲಿ ಗೋಡೆ ಇರದಿದ್ದರೆ ಮನೆ ಅಥವಾ ಆಫಿಸ್ ನ ಉತ್ತರ ಅಥವಾ ಪೂರ್ವ ಭಾಗದಲ್ಲಿ ಇರಿಸಬಹುದು.
ಅಪ್ಪಿತಪ್ಪಿಯೂ ಇಲ್ಲಿ ಹಾಕಬೇಡಿ
ಮಲಗುವ ಕೋಣೆಯಲ್ಲಿ ಈ 7 ಕುದುರೆ ಇರುವ ಫೋಟೋವನ್ನು ಹಾಕುವುದು ನಿಷಿದ್ಧ ಆಗಿದ್ದು. ಅದೇ ರೀತಿ ದೇವಾಲಯಗಳಲ್ಲಿ ಅಥವಾ ಪೂಜಾ ಸ್ಥಳಗಳಲ್ಲಿ ಕುದುರೆಗಳ ಚಿತ್ರಗಳನ್ನು ಇಡಬಾರದು. ಇನ್ನು ಮನೆಯಲ್ಲಿ 7 ಬಿಳಿ ಕುದುರೆಗಳ ಚಿತ್ರ ಅಥವಾ ಪೇಂಟಿಂಗ್ ಹಾಕುತ್ತಿದ್ದರೆ, ಕುದುರೆಗಳು ಓಡುತ್ತಿರಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಂತಿರುವ ಕುದುರೆಗಳ ಚಿತ್ರಗಳನ್ನು ಹಾಕಬೇಡಿ.