ಬೆಂಗಳೂರು: ಬೆಲ್ಲ, ಸಕ್ಕರೆ ಸೇವನೆ ಬಿಟ್ಟರೂ ಮಧುಮೇಹ (diabetes) ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾದರೆ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಬಗ್ಗೆ ಕೊಂಚ ಗಮನ ಹರಿಸಬೇಕು ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಹೆಚ್ಚಾಗಿ ಈಗ ಸಿದ್ದ ಆಹಾರಗಳನ್ನು ಸೇವಿಸಲಾಗುತ್ತದೆ. ಅದರಲ್ಲಿ ಸಕ್ಕರೆ (suger) ಇದ್ದೇ ಇರುತ್ತದೆ. ಹೀಗಾಗಿ ಆಹಾರ ಆಯ್ಕೆ ಮಾಡುವಾಗ ಗೌಪ್ಯವಾದ ಸಕ್ಕರೆಗಳ ಬಗ್ಗೆ ತಿಳಿದಿರಬೇಕು. ಯಾಕೆಂದರೆ ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಅವರು. ಆಹಾರದ ರುಚಿ, ಬಣ್ಣ, ದೀರ್ಘಕಾಲ ಬಾಳಿಕೆ ಬರುವ ಸಲುವಾಗಿ ಕೆಲವು ರೀತಿಯ ಸಕ್ಕರೆಯನ್ನು ರೆಡಿ ಟು ಈಟ್ ಆಹಾರದಲ್ಲಿ ಹಾಕಲಾಗುತ್ತದೆ. ಇದಕ್ಕಾಗಿ ಇಂತಹ ಆಹಾರ ಖರೀದಿ ವೇಳೆ ಲೇಬಲ್ ರೀಡಿಂಗ್ ಅಭ್ಯಾಸ ಮಾಡಿಕೊಳ್ಳಬೇಕು. ಇದರಲ್ಲಿ ಫ್ರಕ್ಟೋಸ್, ಸುಕ್ರೋಸ್ ಮತ್ತು ಮಾಲ್ಟೋಸ್ ಅಂಶಗಳಿರುವ ಆಹಾರವನ್ನು ಸೇವಿಸಲೇಬಾರದು. ಮುಖ್ಯವಾಗಿ ಒಎಸ್ಇ ರೂಲ್ ಶೇಕಡಾ 50ಕ್ಕಿಂತ ಮೇಲೆ ಇದ್ದರೆ ತಿನ್ನದೇ ಇರುವುದು ಒಳ್ಳೆಯದು. ಇದರಲ್ಲಿ ಬ್ರೌನ್ ಶುಗರ್, ಕಾರ್ನ್, ಬಾರ್ಲಿ ರೂಪದಲ್ಲಿ ಸಕ್ಕರೆಯನ್ನು ಹಾಕಲಾಗುತ್ತದೆ. ಮುಖ್ಯವಾಗಿ ಇದು ಹಣ್ಣಿನ ಜ್ಯೂಸ್, ಬ್ರೇಕ್ ಫಾಸ್ಟ್ ಸೀರಿಯಲ್ಸ್ ಗಳಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.