ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ದಿನವೂ ಓಟ್ಸ್ ಸೇವಿಸುತ್ತಿದ್ದೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು

Oats: ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ಹಲವರು ಓಟ್ಸ್ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು ಹೃದಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಅಂಶ ಇದರಲ್ಲಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಪೋಷಕಾಂಶಗಳ ಗಣಿಯಾಗಿದ್ದರೂ, ಅದನ್ನು ತಯಾರಿಸುವಾಗ ಮಾಡುವ ಸಣ್ಣ ತಪ್ಪುಗಳು ದೇಹಕ್ಕೆ ತೊಂದರೆಯನ್ನು ಉಂಟು ಮಾಡುತ್ತವೆ ಎಂದು ಎಚ್ಚರಿಸುತ್ತಾರೆ ವೈದ್ಯರು. ಹಾಗಾದರೆ ಯಾವ ರೀತಿ ಓಟ್ಸ್‌ ಸೇವಿಸಬೇಕು? ಎನ್ನುವ ನಿಮ್ಮ ಪ್ರಸ್ನೆಗೆ ಇಲ್ಲಿದೆ ಉತ್ತರ.

ಓಟ್ಸ್ ಸೇವಿಸುವಾಗ ಈ ಬಗ್ಗೆ ಎಚ್ಚರ ವಹಿಸಿ

ಚಾಟ್‌ಜಿಪಿಟಿ ರಚಿತ ಚಿತ್ರ -

Profile
Pushpa Kumari Jun 7, 2026 7:00 AM

ನವದೆಹಲಿ, ಜೂ. 7: ಇತ್ತೀಚಿನ ದಿನದಲ್ಲಿ ತೂಕ ಇಳಿಕೆಗೆ ಬಹುತೇಕರು ಆದ್ಯತೆ ನೀಡುತ್ತಾರೆ.‌ ಅದರಲ್ಲೂ ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ಓಟ್ಸ್ ಸೇವನೆ ಹೆಚ್ಚಿನವರ ಅಭ್ಯಾಸ ಕ್ರಮವಾಗಿ ಬದಲಾಗಿದೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು, ಹೃದಯಕ್ಕೆ ಒಳ್ಳೆಯದು ಎನ್ನಲಾಗಿದೆ. ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಅಂಶ ಇದರಲ್ಲಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಪೋಷಕಾಂಶಗಳ (Oats For Health) ಗಣಿಯಾಗಿದ್ದರೂ, ಅದರಿಂದ ಆಹಾರ ತಯಾರಿಸುವಾಗ ಮಾಡುವ ಸಣ್ಣ ತಪ್ಪುಗಳು ದೇಹಕ್ಕೆ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಾಗಾದರೆ ಓಟ್ಸ್‌ ಯಾವ ರೀತಿ ಸೇವಿಸಬೇಕು ಎನ್ನುವುದರ ಗೈಡ್‌ಲೈನ್‌ ಇಲ್ಲಿದೆ.

ಓಟ್ಸ್ ಮ್ಯಾಂಗನೀಸ್, ರಂಜಕ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಬಿ ವಿಟಮಿನ್‌ಗಳಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲ. ಇದರ ಬೆಳಗ್ಗಿನ ಸೇವನೆ ನಿರಂತರ ಶಕ್ತಿಯನ್ನು ಒದಗಿಸುವ ಮೂಲಕ ಕಾರ್ಬೋ ಹೈಡ್ರೇಟ್‌ಗಳನ್ನು ಹೆಚ್ಚಿಸುತ್ತದೆ. ಆದರೆ ಓಟ್ಸ್‌ನಿಂದ ಆಹಾರ ತಯಾರಿಸುವಾಗ ಮಾಡುವ ಸಣ್ಣ ತಪ್ಪು ಅತಿಯಾದ ಸಕ್ಕರೆಯುಕ್ತ ಆಹಾರವನ್ನಾಗಿ ಬದಲಾಯಿಸಿಬಿಡುವ ಅಪಾಯವಿದೆ.

ಈ ತಪ್ಪು ಮಾಡಬೇಡಿ

ಬೀಜ, ಯೋಗರ್ಟ್ ಸೇರಿಸಿ: ಓಟ್ಸ್ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ನ ಅಂಶವನ್ನು ಹೆಚ್ಚಾಗಿ ಹೊಂದಿದೆ. ಆದರೆ ಇದರಲ್ಲಿ ಪ್ರೊಟೀನ್ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಓಟ್ಸ್ ಮಾತ್ರ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಏರಿಕೆ ಉಂಟಾಗುತ್ತದೆ. ಇದನ್ನು ಸಮತೋಲನಗೊಳಿಸಲು ಓಟ್ಸ್ ಜತೆಗೆ ಬೀಜ, ಯೋಗರ್ಟ್ ಅಥವಾ ಪ್ರೊಟೀನ್ ಪೌಡರ್ ಸೇರಿಸಿಕೊಳ್ಳಿ.

ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಸಕ್ಕರೆ ಬಳಕೆ ತಪ್ಪಿಸಿ: ಅನೇಕರು ಓಟ್ಸ್ ಗೆ ಅತಿಯಾದ ಪ್ರಮಾಣದ ಸಕ್ಕರೆಯನ್ನು ಸೇರಿಸುತ್ತಾರೆ. ಅಥವಾ ಮಾರುಕಟ್ಟೆಯಲ್ಲಿ ಸಿಗುವ ಕೆಲವೊಂದು ಕೃತಕ ಪ್ಯಾಕೆಟ್‌ಗಳನ್ನು ಆಯ್ದುಕೊಳ್ಳುತ್ತಾರೆ. ಇದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚಾಗಬಹುದು. ನೈಸರ್ಗಿಕ ಸಿಹಿಗಾಗಿ ಬಾಳೆಹಣ್ಣು, ಬೆರ್ರಿ, ದಾಲ್ಚಿನ್ನಿ ಪುಡಿ ಸೇರಿಸಿ.

ಹೆಚ್ಚಿನ ಪ್ರಮಾಣದ ಸೇವನೆ ಬೇಡ: ಹೆಚ್ಚಿನವರು ತೂಕ ಇಳಿಸಿಕೊಳ್ಳಬೇಕೆಂದು ಅಧಿಕ ಪ್ರಮಾಣದಲ್ಲಿ ಓಟ್ಸ್‌ ಸೇವಿಸುತ್ತಾರೆ‌. ಇವುಗಳಲ್ಲಿ ಕ್ಯಾಲೊರಿ ಪ್ರಮಾಣ ಹೆಚ್ಚಾಗಿದ್ದು ಅಳತೆ ಮಾಡದೆ ನೇರವಾಗಿ ಬೌಲ್‌ಗೆ ಸುರಿದು ಸೇವಿಸುವುದರಿಂದ ತೂಕ ಹೆಚ್ಚಾಗಲೂಬಹುದು.

ತಪ್ಪು ಮಾದರಿಯ ಓಟ್ಸ್ ಆಯ್ಕೆ: ಫ್ಲೇವರ್ಡ್ ಇನ್‌ಸ್ಟೆಂಟ್ ಪ್ಯಾಕೆಟ್‌ಗಳು ಅತಿಯಾಗಿ ಸಂಸ್ಕರಿಸಲ್ಪಟ್ಟು ಇವುಗಳಲ್ಲಿ ಸಕ್ಕರೆ ಹಾಗೂ ಕೃತಕ ಬಣ್ಣಗಳು ಹೆಚ್ಚಿರುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಗುಣಮಟ್ಟದ ಓಟ್ಸ್ ಆಯ್ದುಕೊಳ್ಳಿ.

ಉತ್ತಮ ಕೊಬ್ಬನ್ನು ನಿರ್ಲಕ್ಷಿಸುವುದು: ದೇಹದಲ್ಲಿ ಪೋಷಕಾಂ ಸುಧಾರಿಸಲು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಲು ಉತ್ತಮ ಕೊಬ್ಬಿನಾಂಶ ಅಗತ್ಯ. ಇದಕ್ಕಾಗಿ ಓಟ್ಸ್‌ನೊಂದಿಗೆ ಅಗಸೆ ಬೀಜ, ಚಿಯಾ ಸೀಡ್ಸ್ ಅಥವಾ ಅವಕಾಡೊ ಬಳಸಬಹುದು.