ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವುದೇ ಕಾರಣಕ್ಕೂ ಸಿ-ಸೆಕ್ಷನ್ (c-section) ಹೆರಿಗೆಯನ್ನು ಆಯ್ಕೆ ಅಥವಾ ಶಾರ್ಟ್ ಕಟ್ ಆಗಿ ಮಾಡಿಕೊಳ್ಳಬೇಡಿ. ತಾಯಿ, ಮಗುವಿಗೆ ತೊಂದರೆ ಇದ್ದಾಗ ಮಾತ್ರ ಇದನ್ನು ಮಾಡಲಾಗುತ್ತದೆ ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. (Dr. Rashmi TN) ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಸಿಸೇರಿಯನ್ ವೇಳೆ ಬೆನ್ನಿಗೆ ಕೊಡುವ ಸೂಜಿಯಿಂದ ತಲೆನೋವು ಬರುತ್ತದೆ. ಇದನ್ನು spinal headache ಎನ್ನುತ್ತಾರೆ. ಇನ್ನು ಸಿಸೇರಿಯನ್ ಆದವರು ಸರಿಯಾದ ಊಟ, ಗಾಯದ ಸ್ವಚ್ಛತೆಯನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಗಾಯ ಗುಣವಾಗಲು ಕನಿಷ್ಠ ಆರು ವಾರಗಳು ಬೇಕಾಗುತ್ತದೆ. ಒಂದು ಬಾರಿ ಸೀಸರಿಯನ್ ಆದ ಮೇಲೆ ಎರಡನೇ ಬಾರಿ ಕೂಡ ಸೀಸರಿಯನ್ ಆಗುತ್ತದೆ. ಅಪರೂಪದಲ್ಲಿ ನಾರ್ಮಲ್ ಡೆಲಿವರಿ ಆಗಬಹುದು. ಆದರೆ ಇದರಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಇನ್ನು ಸಿಸೇರಿಯನ್ ಅದರಲ್ಲಿ ಗರ್ಭಕೋಶ ಪಕ್ಕದ ಅಂಗಾಂಗಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಮುಂದೆ ಮತ್ತೆ ಸರ್ಜರಿಯಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.