ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ: ಬಸವರಾಜ್ ಬೊಮ್ಮಾಯಿ

ಕೋವಿಡ್ ಸಂದರ್ಭದಲ್ಲಿ ಎದುರಾಗಿರುವ ಪರಿಸ್ಥಿತಿ ಈಗ ಮತ್ತೆ ಬಂದಿದೆ. ಇರಾನ್ ಮತ್ತು ಯುಎಸ್ ಸಂಘರ್ಷದಿಂದಾಗಿ ದೇಶಾದ್ಯಂತ ಆರಂಭದಲ್ಲಿ ಪೆಟ್ರೋಲ್, ಎಲ್ ಪಿಜಿ ಕೊರತೆ ಕಾಡಿದರೂ ಈಗ ಎಲ್ಲವೂ ಸರಿಯಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯ ಕಾರಣ. ಅವರಿದ್ದರೆ ದೇಶದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಲೋಕಸಭಾ ಸದಸ್ಯ ಬಸವರಾಜ್ ಬೊಮ್ಮಾಯಿ ಹೇಳಿದರು.

ಬಸವರಾಜ್ ಬೊಮ್ಮಾಯಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಂಘರ್ಷದ ಈ ಸಂದರ್ಭ ಮತ್ತೆ ತೋರಿಸಿ ಕೊಟ್ಟಿದೆ. ಪ್ರಧಾನಿ ಮೋದಿಯವರು ಮ್ಯಾಜಿಕ್ ಇದ್ದಂತೆ. ಅವರ ಮೇಲೆ ದೇಶದ ಪ್ರತಿಯೊಬ್ಬ ಕಾರ್ಮಿಕರಿಗೂ ಭರವಸೆ ಇದೆ. ನಾವು ಇಲ್ಲದಿದ್ದರೂ ನಮ್ಮ ದೇಶ ಇರುತ್ತದೆ. ಮುಂದಿನ ಮಕ್ಕಳು ನಮ್ಮನ್ನು ನೆನಪಿಸುತ್ತಾರೆ. ವಿರೋಧ ಪಕ್ಷದವರು ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಅವರಿಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಲ್ಲ. ರಾಜಕೀಯ ಮಾಡಲು ಪೂರ್ತಿ ಜೀವನ ಇದೆ. ನಕಾರಾತ್ಮಕತೆಯನ್ನು ಬಿಟ್ಟು ಬಿಡಿ ಎಂದು ಲೋಕಸಭಾ ಸದಸ್ಯ (MP) ಬಸವರಾಜ್ ಬೊಮ್ಮಾಯಿ (MP Basavaraj Bommai) ಹೇಳಿದರು. ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅವರು, ದೇಶದ ನಾಯಕನ ಮೇಲೆ ನಂಬಿಕೆ ಮತ್ತು ವಿಶ್ವಾಸ ಕೇವಲ ಕಠಿಣ ಪರಿಶ್ರಮ ಹಾಗೂ ಫಲಿತಾಂಶಗಳಿಂದ ಮಾತ್ರ ಬರುತ್ತದೆ. ಅದನ್ನು ಪ್ರಧಾನಿ ಮೋದಿ ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ವಿದ್ಯಾ ಇರ್ವತ್ತೂರು

View all posts by this author