ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧುಮೇಹಿಗಳಿಗೆ ಕಾಡುವ ಚರ್ಮದ ತೊಂದರೆಗಳಿಗೆ ಇದೆ ಪರಿಹಾರ

ಮಧುಮೇಹಿಗಳಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಇದನ್ನು ನಿವಾರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ ಡಾ. ಸುಮನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಧುಮೇಹಿಗಳಲ್ಲಿ ಕಾಡುವ ಚರ್ಮದ ತೊಂದರೆ ಮತ್ತು ಅದಕ್ಕೆ ಪರಿಹಾರ ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

ಡಾ. ಸುಮನ್

ಬೆಂಗಳೂರು: ಮಧುಮೇಹಿಗಳಲ್ಲಿ (diabetes) ಹಲವಾರು ರೀತಿಯ ಚರ್ಮದ ಕಾಯಿಲೆಗಳು ಕಂಡು ಬರುತ್ತವೆ. ಇವುಗಳ ನಿಯಂತ್ರಣ ಸಾಧ್ಯವಿದೆ. ಅದಕ್ಕಾಗಿ ಸ್ವಲ್ಪ ಹೆಚ್ಚಿನ ಜಾಗರೂಕತೆ ಮುಖ್ಯವಾಗಿದೆ ಎಂದು ಮಧುಮೇಹ ತಜ್ಞರಾದ ಡಾ. ಸುಮನ್ (Dr. suman) ತಿಳಿಸಿದ್ದಾರೆ. ವಿಶ್ವವಾಣಿ ಹೆಲ್ತ್ (vishwavani health) ಯೂಟ್ಯೂಬ್ ಚಾನೆಲ್ (YouTube channel)ನಲ್ಲಿ ಮಾತನಾಡಿರುವ ಅವರು ಮಧುಮೇಹಿಗಳಲ್ಲಿ ಚರ್ಮದ ತೊಂದರೆಗಳು ಸಾಮಾನ್ಯ. ಹೆಚ್ಚಾಗಿ ಒಣ ಚರ್ಮ, ಕಪ್ಪು ಚುಕ್ಕೆಗಳು, ಕತ್ತಿನ ಹಿಂಭಾಗದಲ್ಲಿ ಕಪ್ಪು ಕಲೆ, ನೀರುಗುಳ್ಳೆ, ಫಂಗಲ್, ಬ್ಯಾಕ್ಟೀರಿಯಾ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾದರೆ ಇದು ಗಂಭೀರ ಸ್ವರೂಪ ಪಡೆಯುತ್ತದೆ. ಮಧುಮೇಹಿಗಳಲ್ಲಿ ರೋಗ ನಿರೋಧಕ ಶಕ್ತಿ ಕಳೆದು ಹೋಗಿರುವುದರಿಂದ ಈ ರೀತಿ ಆಗುತ್ತದೆ. ಇದಕ್ಕಾಗಿ ಆದಷ್ಟು ಎಚ್ಚರಿಕೆ ವಹಿಸಬೇಕು. ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಹಾಗೂ ನಿರಂತರವಾಗಿ ದೇಹದಲ್ಲಿ ಗಾಯಗಳಾಗಿದೆಯೇ ಎಂಬುದನ್ನು ಪರೀಕ್ಷಿಸುತ್ತಾ ಇರಬೇಕು ಎಂದು ಅವರು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author