ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂತ್ಯಕ್ರಿಯೆ ವೇಳೆ ಮರುಜೀವ ಪಡೆದ 15 ವರ್ಷದ ಬಾಲಕಿ! ಶವಪೆಟ್ಟಿಗೆಯಿಂದಲೇ ಎದ್ದುಕುಳಿತ ವಿಡಿಯೊ ವೈರಲ್!

Viral News: ಗ್ವಾಟೆಮಾಲಾದಲ್ಲಿ 15 ವರ್ಷದ ಯೂಲೀಡಿ ಇಕ್ಸೊಟೊಯಾಕ್ ಎಂಬ ಬಾಲಕಿ, ಮೃತಪಟ್ಟಿದ್ದಾಳೆ ಎಂದು ಭಾವಿಸಿ ಆತುರಾತುರವಾಗಿ ಪೋಷಕರಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿ ಕೊಂಡಿದ್ದರು. ಆದರೆ ಶವಪೆಟ್ಟಿಗೆಯಲ್ಲಿ ಮಗಳನ್ನು ಮಲಗಿಸಿ ಅಳುತ್ತಾ ಕೂತಿದ್ದ ತಾಯಿಗೆ ಕೂಡಲೇ ಸಂಶಯ ಬಂದಿದೆ. ಹತ್ತಿರ ಹೋಗಿ ಗಮನಿಸಿದಾಗ ಪೆಟ್ಟಿಗೆಯೊಳಗಡೆ ಮಗಳು ಚಲಿಸುತ್ತಿರುವುದು ಕಂಡುಬಂದಿದೆ.

ಅಂತ್ಯಕ್ರಿಯೆ ವೇಳೆ ಮರುಜೀವ ಪಡೆದ 15 ವರ್ಷದ ಬಾಲಕಿ

ಗ್ವಾಟೆಮಾಲಾ,ಅ.15: ತಮ್ಮ ಮಗಳು ಸತ್ತೋಗಿದ್ದಾಳೆ ಎಂದು ಅಂತ್ಯಕ್ರಿಯೆಗೆ ತಯಾರು ಮಾಡುತ್ತಿದ್ದ ಪೋಷಕರಿಗೆ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ವಾಟೆಮಾಲಾದಲ್ಲಿ 15 ವರ್ಷದ ಯೂಲೀಡಿ ಇಕ್ಸೊಟೊಯಾಕ್ ಎಂಬ ಬಾಲಕಿ, ಮೃತಪಟ್ಟಿದ್ದಾಳೆ ಎಂದು ಭಾವಿಸಿ ಆತುರಾತುರವಾಗಿ ಪೋಷಕರಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಶವಪೆಟ್ಟಿಗೆಯಲ್ಲಿ ಮಗಳನ್ನು ಮಲಗಿಸಿ ಅಳುತ್ತಾ ಕೂತಿದ್ದ ತಾಯಿಗೆ ಕೂಡಲೇ ಸಂಶಯ ಬಂದಿದೆ. ಹತ್ತಿರ ಹೋಗಿ ಗಮನಿಸಿದಾಗ ಪೆಟ್ಟಿಗೆಯೊಳಗಡೆ ಮಗಳು ಚಲಿಸುತ್ತಿರುವುದು (Viral News) ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಗಮನ ಸೆಳೆದಿದೆ. ವೈದ್ಯಕೀಯ ಪರೀಕ್ಷೆಯಿಲ್ಲದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಗೆ ನಿರ್ಧರಿಸಲಾಯಿತು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೋ ನೋಡಿ:



ಗ್ವಾಟೆಮಾಲಾದಲ್ಲಿ 15 ವರ್ಷದ ಯೂಲೀಡಿ ಇಕ್ಸೊಟೊಯಾಕ್ ಎಂಬ ಬಾಲಕಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಆಸ್ವತ್ರೆಗೆ ಕರೆದೊಯ್ಯುವ ವೇಳೆ ಆಕೆ ಉಸಿರಾಟ ನಿಲ್ಲಿಸಿದ್ದಾಳೆ. ಹೀಗಾಗಿ ಆಕೆ ಮೃತ ಪಟ್ಟಿದ್ದಾಳೆ ಎಂದು ಭಾವಿಸಲಾಗಿತ್ತು. ಯಾವುದೇ ವೈದ್ಯಕೀಯ ತಪಾಸಣೆ ಮಾಡಿಸದೆ,ಮರಣ ಪ್ರಮಾಣಪತ್ರವನ್ನೂ ಪಡೆಯದೆ ಕುಟುಂಬಸ್ಥರು ಆತುರಾತುರವಾಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಮಧ್ಯಾಹ್ನ ಸುಮಾರು 2:30 ರ ಸುಮಾರಿಗೆ, ಮೃತರ ಸಂಬಂಧಿಕರು ಶವಪೆಟ್ಟಿಗೆಯ ಸುತ್ತಲೂ ಸೇರಿದ್ದರು. ಆಗ ಬಾಲಕಿಯ ತಾಯಿ ಲೆಸ್ವಿಯಾ ರಿಯೋಸ್ ಶವಪೆಟ್ಟಿಗೆಯ ಮೇಲೆ ಬಾಗಿ ನೋಡುತ್ತಿದ್ದಾಗ ಚಲಿಸುತ್ತಿರುವುದು ಕಂಡು ಬಂದಿದೆ.‌ ತನ್ನ ಮಗಳು ಇನ್ನೂ ಜೀವಂತವಾಗಿದ್ದಾಳೆ ಎಂದು ಹೇಳುತ್ತಿದ್ದಾಗ ಬಾಲಕಿ ಕಣ್ಣುಬಿಟ್ಟು ಎದ್ದು ಕುಳಿತಿದ್ದಾಳೆ.

ಇದನ್ನು ಕಂಡ ನೆರೆಹೊರೆಯವರು ಹಾಗೂ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ. ಆದರೆ ಕುಟುಂಬದ ನಿರ್ಲಕ್ಷ್ಯವನ್ನು ಜನ ಪ್ರಶ್ನಿಸುತ್ತಿದ್ದಾರೆ. ಘಟನೆಯ ದೃಶ್ಯಗಳಲ್ಲಿ ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿದ್ದ ಯುಲೀಡಿಗೆ ಪ್ರಜ್ಞೆ ಮರಳಿ ಬರುತ್ತಿರುವುದನ್ನು ಕಾಣಬಹುದು, ಆಕೆಯ ಸುತ್ತಲೂ ಸಂಬಂಧಿಕರು ಸೇರಿದ್ದಾರೆ. ನಂತರ ಕುಟುಂಬ ಸದಸ್ಯರು ಶವಪೆಟ್ಟಿಗೆಯಿಂದ ಹೊರಬರಲು ಸಹಾಯ ಮಾಡಿದ್ದಾರೆ. ಆದರೆ ವೈದ್ಯಕೀಯ ಪರೀಕ್ಷೆ ನಡೆಸದೆ ಅಥವಾ ಅಧಿಕೃತ ಮರಣ ಪ್ರಮಾಣಪತ್ರವನ್ನು ಹೊಂದದೆ ಈ ಸಿದ್ದತೆ ಹೇಗೆ ಮಾಡಿ‌ ಕೊಂಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.