ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

Viral News: ಬ್ರಿಟನ್‌ನ ಜೀನ್ ಪೌಲ್ ತೀವ್ರ ಮೊಣಕಾಲು ನೋವು ಇದ್ದ ಕಾರಣ ದಿನ ನಿತ್ಯದ ನಡಿಗೆ ಕಷ್ಟವಾಗಿತ್ತು. ಆದರೆ ಶಸ್ತ್ರಚಿಕಿತ್ಸೆಗಾಗಿ ಬ್ರಿಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 3 ವರ್ಷಗಳವರೆಗೆ ಕಾಯಲು ಹೇಳಿದ್ದರು. ಖಾಸಗಿಯಾಗಿ ಆಸ್ಪತ್ರೆಯಲ್ಲಿ 51.56 ಲಕ್ಷ ರುಪಾಯಿ ತಗುಲುತ್ತದೆ ಎಂದು ತಿಳಿಸಲಾಗಿತ್ತು. ಆದದೆ ಇದೇ ಸೌಲಭ್ಯವನ್ನು ಭಾರತದಲ್ಲಿ ಎಷ್ಟು ಕಡಿಮೆ ಮೊತ್ತಕ್ಕೆ ಪಡೆಯಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಭಾರತದ ಆರೋಗ್ಯ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತದ ವೈದ್ಯಕೀಯ ಸೌಲಭ್ಯಕ್ಕೆ ಬ್ರಿಟನ್ ಪ್ರಜೆ ಫಿದಾ

ಭಾರತದ ವೈದ್ಯಕೀಯ ಸೌಲಭ್ಯಕ್ಕೆ ಫಿದಾ ಆದ ಬ್ರಿಟನ್ ವ್ಯಕ್ತಿ -

Profile
Pushpa Kumari Aug 12, 2026 5:51 PM

ದೆಹಲಿ, ಆ. 12: ಭಾರತದ ಪ್ರವಾಸಿ ಸ್ಥಳಗಳ ಬಗ್ಗೆ, ಇಲ್ಲಿನ ಸೌಲಭ್ಯಗಳ ಬಗ್ಗೆ ಹಲವು ವಿದೇಶಿಗರು ಮೆಚ್ಚುಗೆ ಸೂಚಿಸುತ್ತಲೇ ಇದ್ದಾರೆ. ಇಲ್ಲಿನ ಆಹಾರ, ಜೀವನ ಶೈಲಿ, ಸಾರಿಗೆ ಸೌಲಭ್ಯಕ್ಕೆ ಫಿದಾ ಆದ ಆನೇಕ ಮಂದಿ ಇದ್ದಾರೆ. ಅಷ್ಟೇ ಅಲ್ಲದೆ ಇಲ್ಲಿನ ವೈದ್ಯಕೀಯ ಸೌಲಭ್ಯವಂತೂ ವಿದೇಶಕ್ಕಿಂತ ಎಷ್ಟೋ ವಾಸಿ ಎಂದು ಇಲ್ಲಿನ ಸೇವೆ ಪಡೆದುಕೊಂಡವರು ಅಭಿಪ್ರಾಯ ಪಟ್ಟಿದ್ದಾರೆ. ಬ್ರಿಟನ್‌ನ ಜೀನ್ ಪೌಲ್ ಎಂಬವರಿಗೆ ತೀವ್ರ ಮೊಣಕಾಲು ನೋವು ಇದ್ದ ಕಾರಣ ಓಡಾಡಲು ಕಷ್ಟಪಡುತ್ತಿದ್ದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಶಸ್ತ್ರಚಿಕಿತ್ಸೆಗಾಗಿ 3 ವರ್ಷಗಳವರೆಗೆ ಕಾಯಲು ಹೇಳಿದರು. ಖಾಸಗಿಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಸುಮಾರು 51.56 ಲಕ್ಷ ರುಪಾಯಿ ತಗುಲುತ್ತದೆ ಎಂದು ತಿಳಿಸಿದರು. ಇದೇ ಸೌಲಭ್ಯವನ್ನು ಭಾರತದಲ್ಲಿ ಎಷ್ಟು ಕಡಿಮೆ ಮೊತ್ತಕ್ಕೆ ಪಡೆಯಲಾಯಿತು ಎಂಬುದನ್ನು ಜೀನ್ ಪೌಲ್ ವಿವರಿಸಿದ್ದಾರೆ (Viral News).‌ ಸದ್ಯ ಭಾರತದ ಆರೋಗ್ಯ ಸೌಲಭ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬ್ರಿಟನ್‌ನ ಜೀನ್ ಪೌಲ್ ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದರು. ಚಿಕಿತ್ಸೆಯು ತುಂಬಾ ಕಡಿಮೆ ವೆಚ್ಚದಲ್ಲಿತ್ತು ಮತ್ತು ಕೆಲವೇ ಗಂಟೆಗಳಲ್ಲಿ ಮತ್ತೆ ನಡೆಯಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗಾಗಿ ದೀರ್ಘ ಸಮಯ ಕಾಯಬೇಕಾಗಿದ್ದರಿಂದ ಜೀನ್ ಪಾಲ್ ಭಾರತವನ್ನುಆರಿಸಿಕೊಂಡರು ಎಂದು ವರದಿಯಾಗಿದೆ. ಅಲ್ಲಿನ ಪ್ಯಾಕೇಜ್ ವೆಚ್ಚವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ವಿಡಿಯೊ ನೋಡಿ:



ಬ್ರಿಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ 3 ವರ್ಷಗಳ ಕಾಯಬೇಕಾಗಿ ಹೇಳಿದ್ದು ಖಾಸಗಿಯಾಗಿ ಪಡೆಯಲು ಅಲ್ಲಿ ಸುಮಾರು 51.56 ಲಕ್ಷ ವೆಚ್ಚವಾಗುತ್ತಿತ್ತು. ​ಹೀಗಾಗಿ ಅವರು 6,800 ಕಿ.ಮೀ. ದೂರ ಪ್ರಯಾಣ ಮಾಡಿ ಭಾರತಕ್ಕೆ ಬಂದು ದೆಹಲಿಯ ಮ್ಯಾಕ್ಸ್ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೇವಲ 18.05 ಲಕ್ಷ ರುಪಾಯಿ ವೆಚ್ಚವಾಗಿದೆ.

ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಈ ವೆಚ್ಚದಲ್ಲಿ ಎರಡು ಮೊಣಕಾಲುಗಳ ಶಸ್ತ್ರಚಿಕಿತ್ಸೆ ಅಷ್ಟೇ ಅಲ್ಲದೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಹೋಗುವ ಟಿಕೆಟ್, ರೂಮ್ ವ್ಯವಸ್ಥೆ ಹೀಗೆ ಎಲ್ಲವನ್ನೂ ಒಳಗೊಂಡಿದೆ. ಜೀನ್ ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸ್ವದೇಸಕ್ಕೆ ಮರಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯುವುದೇ ಕಷ್ಟ. ಆದರೆ ಭಾರತದಲ್ಲಿ ವೈದ್ಯರು ಮತ್ತು ತಕ್ಷಣದ ಚಿಕಿತ್ಸೆ ಲಭ್ಯವಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ನಮ್ಮ ಭಾರತ ಆರೋಗ್ಯ ಸೌಲಭ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.