ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

15 ರೂ. ಬಾಳೆಹಣ್ಣಿಗೆ 1,515 ರೂ ಪಾವತಿ: ಹಣ ವಾಪಸ್‌ ಪಾವತಿಸಿ ಪ್ರಾಮಾಣಿಕತೆ ಮೆರೆದ ವ್ಯಾಪಾರಿ!

Viral News: ಇಂದು ಸಾಮಾನ್ಯ ವಸ್ತು ಖರೀದಿಯಿಂದ ಬ್ಯಾಂಕಿಂಗ್ ಚಟುವಟಿಕೆವರೆಗೂ ಹಲವಾರು ಕೆಲಸಗಳು ಅಪ್ಲಿಕೇಶನ್ ಗಳ ಮೂಲಕವೇ ನಡೆಯುತ್ತಿದೆ. ಆದರೆ ಕೆಲವೊಮ್ಮೆ ಈ ಅಪ್ಲಿಕೇಶನ್ ನಲ್ಲಿ ಎಡವಟ್ಟುಗಳು ಕೂಡ ಉಂಟಾಗಬಹುದು. ತಪ್ಪಾಗಿ ಯಾರಿಗೋ ಹಣ ಕಳುಹಿಸುವುದು, ಅಥವಾ ಹೆಚ್ಚು ಹಣ ಟ್ರಾನ್ಸ್ ಪರ್ ಮಾಡುವುದು ಹೀಗೆ..ಆದರೆ ಈ ಎಡವಟ್ಟನ್ನು ಸರಿಪಡಿಸಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

UPI ನಲ್ಲಿ ತಪ್ಪಾಗಿ ಹಣ ಪಾವತಿ: ವ್ಯಾಪಾರಿ ಪ್ರಾಮಾಣಿಕತೆ ನೆಟ್ಟಿಗರು ಫಿದಾ

15 ರೂಪಾಯಿ ಬಾಳೆಹಣ್ಣಿಗೆ 1,515 ರೂ ಪಾವತಿ -

Profile
Pushpa Kumari May 7, 2026 3:05 PM

ನವದೆಹಲಿ,ಮೇ 7: ಇತ್ತೀಚೆಗೆ ಸಣ್ಣ ಪುಟ್ಟ ವ್ಯವಹಾರಕ್ಕೂ ಆನ್ಲೈನ್ ಪಾವತಿಯನ್ನು ನಾವು ಅವಲಂಬಿಸಿದ್ದೇವೆ. ಇಂದು ಸಾಮಾನ್ಯ ವಸ್ತು ಖರೀದಿಯಿಂದ ಬ್ಯಾಂಕಿಂಗ್ ಚಟುವಟಿಕೆ ವರೆಗೂ ಹಲವಾರು ಕೆಲಸಗಳು ಅಪ್ಲಿಕೇಶನ್ ಗಳ ಮೂಲಕವೇ ನಡೆಯುತ್ತಿದೆ. ಆದರೆ ಕೆಲವೊಮ್ಮೆ ಈ ಅಪ್ಲಿಕೇಶನ್ ನಲ್ಲಿ ಎಡವಟ್ಟುಗಳು ಕೂಡ ಉಂಟಾಗಬಹುದು. ತಪ್ಪಾಗಿ ಯಾರಿಗೋ ಹಣ ಕಳುಹಿಸುವುದು, ಅಥವಾ ಹೆಚ್ಚು ಹಣ ಟ್ರಾನ್ಸ್ ಪರ್ ಮಾಡುವುದು ಹೀಗೆ. ಆದರೆ ಈ ಎಡವಟ್ಟನ್ನು ಸರಿಪಡಿಸಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಡಿಜಿಟಲ್ ಯುಗದಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳು ಸಾಮಾನ್ಯವಾಗಿದೆ. ಅದೇ ರೀತಿ ಇತ್ತೀಚೆಗೆ ಯುವತಿಯೊಬ್ಬಳು ವ್ಯಾಪಾರಿಯಿಂದ ಬಾಳೆಹಣ್ಣು ಖರೀದಿ ಮಾಡಿದ್ದರು.‌ ಆದರೆ ಈ ಹಣ್ಣಿಗೆ 15 ರೂಪಾಯಿ ಪಾವತಿ ಮಾಡುವ ಬದಲು ತಪ್ಪಾಗಿ ಹೆಚ್ಚಿನ ಹಣ ಪಾವತಿ ಮಾಡಿದ್ದಾರೆ. ರುಶು ತುಶು ಎಂಬ ಬಳಕೆದಾರರು ತಮ್ಮ ಅನುಭವವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು ಪಾವತಿಯ ಸಣ್ಣ ತಪ್ಪು ಹೃದಯಸ್ಪರ್ಶಿ ಕ್ಷಣವಾಗಿ ಮಾರ್ಪಟ್ಟಿತು ಎಂದು ಬರೆದಿದ್ದಾರೆ.



ಯುವತಿ ಹಣ್ಣಿನ ಅಂಗಡಿಯಲ್ಲಿ ಮೂರು ಬಾಳೆಹಣ್ಣು ಖರೀದಿ ಮಾಡಿದ್ದರು. ಇದಕ್ಕೆ 15 ರೂಪಾಯಿ ಆಕೆ ಪಾವತಿ ಮಾಡುವ ಬದಲು ಸ್ನೇಹಿತರ ಜೊತೆ ಮಾತನಾಡುತ್ತ , ಯುಪಿಐ (UPI) ಮೂಲಕ ಆಕಸ್ಮಿಕವಾಗಿ1,515 ಎಂದು ನಮೂದಿಸಿ ಪೇ ಮಾಡಿದ್ದಾರೆ. ಆದರೆ ಇದನ್ನು ಪರಿಶೀಲಿಸದೆ, ಅವರು ಪಾವತಿಯನ್ನು ಪೂರ್ಣಗೊಳಿಸಿ ಹೊರಟು ಹೋಗಿದ್ದಾರೆ. ತನ್ನ ಖಾತೆಗೆ ಹೆಚ್ಚು ಹಣ ಬಂದಿ ದ್ದನ್ನು ಗಮನಿಸಿ ತಕ್ಷಣವೇ ವ್ಯಾಪಾರಿ ಆಕೆಯನ್ನು ಕೂಗಿ ಕರೆದಿದ್ದಾರೆ. ತಾನು 1,500 ಹೆಚ್ಚು ಪಾವತಿಸಿರುವುದು ಅರಿವಿಗೆ ಬಂದಾಗ ಆ ಯುವತಿ ದಂಗಾಗಿದ್ದಾರೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಅಂಗಡಿಯ ವ್ಯಾಪಾರಿ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಕ್ಯೂ ಅರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹೆಚ್ಚುವರಿ ಮೊತ್ತವನ್ನು ತಕ್ಷಣವೇ ಹಿಂದಿರುಗಿಸಿದ್ದಾರೆ. ಈ ಸ್ಕ್ರೀನ್‌ ಶಾಟ್‌ ಗಳನ್ನು ಯುವತಿ ಹಂಚಿಕೊಂಡಿದ್ದು ಮಾರಾಟಗಾರನ ಪ್ರಾಮಾಣಿಕತೆಯನ್ನು ಎತ್ತಿ ತೋರಿಸಿದೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು 'ಪ್ರಾಮಾಣಿಕ ವ್ಯಾಪಾರಿ' ಎಂದು ಬರೆದಿದ್ದಾರೆ.