ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬರಿಗೈಯಲ್ಲೇ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ: ಆಡಳಿತ ವಿಫಲತೆಯ ವಿರುದ್ಧ ತೀವ್ರ ಟೀಕೆ!

Viral Video: ಮಧ್ಯಪ್ರದೇಶದಲ್ಲಿ​ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು 20 ವರ್ಷದ ಯುವಕನೊಬ್ಬ ಸ್ವತಃ ತಾನೇ ಮುಂದೆ ನಿಂತು ಮಾಡಿದ್ದಾನೆ. ಕಲುಷಿತಗೊಂಡ ನದಿಯ ನೀರನ್ನು ಸ್ವಚ್ಛ ಗೊಳಿಸಲು ಪುರಸಭೆಯ ಸ್ವಚ್ಛತಾ ಅಭಿಯಾನ ಕ್ಕಾಗಿ ಕಾಯದೆ ತಾನೇ ವೈಯಕ್ತಿಕವಾಗಿ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾನೆ.

ಅಧಿಕಾರಿಗಳಿಗೆ ಕಾಯದೆ ಕಲುಷಿತ ನದಿಯ ನೈರ್ಮಲ್ಯಕ್ಕಿಳಿದ ಯುವಕ

ಮಧ್ಯಪ್ರದೇಶ,ಸೆ.3: ಇಂದು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ನೀರು, ರಸ್ತೆ, ನೈರ್ಮಲ್ಯ, ವಿದ್ಯುತ್, ಮುಂತಾದ ಮೂಲ ಸೌಕರ್ಯಗಳು ಉತ್ತಮ ಜೀವನಕ್ಕೆ ಬಹಳ ಪ್ರಮುಖವಾಗಿವೆ. ಆದರೆ ಕೆಲವೆಡೆ ಈ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ. ಇದೀಗ ಮಧ್ಯಪ್ರದೇಶದಲ್ಲಿ​ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು 20 ವರ್ಷದ ಯುವಕನೊಬ್ಬ ಸ್ವತಃ ತಾನೇ ಮುಂದೆ ನಿಂತು ಮಾಡಿದ್ದಾನೆ. ಕಲುಷಿತಗೊಂಡ ನದಿಯ ನೀರನ್ನು ಸ್ವಚ್ಛಗೊಳಿಸಲು ಪುರಸಭೆಯ ಸ್ವಚ್ಛತಾ ಅಭಿಯಾನಕ್ಕಾಗಿ ಕಾಯದೆ ತಾನೇ ವೈಯಕ್ತಿಕವಾಗಿ ಸ್ವಚ್ಚತಾ ಕಾರ್ಯಕ್ಕೆ (Viral News) ಮುಂದಾಗಿದ್ದಾನೆ.

ಮಧ್ಯಪ್ರದೇಶದ 20 ವರ್ಷದ ಬಿಟ್ಟು ತಬಾಹಿ ಎನ್ನುವ ಯುವಕ ತನ್ನ ಸ್ವಂತ ಕೈ ಮತ್ತು ಹಣವನ್ನು ಬಳಸಿಕೊಂಡು ಕಲುಷಿತ ನೀರನ್ನು ಸ್ವಚ್ಛ ಗೊಳಿಸಿದ್ದಾನೆ. ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ತೆಗೆಯಲು ಮೂರು ತಿಂಗಳು ಕಾಲ ಅವರಿಗೆ ಸಮಯ ಹಿಡಿದಿದೆ. ತಮ್ಮ ಈ ಪ್ರಯತ್ನಕ್ಕೆ ಅಗತ್ಯವಾದ ಸಾಮಗ್ರಿಗಳಿಗಾಗಿ ತಮ್ಮ ಸ್ವಂತ ಹಣವನ್ನು ಅವರು ಖರ್ಚು ಮಾಡಿದ್ದಾರೆ.



ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯುವಕ ಕಲುಷಿತಗೊಂಡಿರುವ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಯಾವುದೇ ತಂತ್ರಜ್ಞಾನ ಬಳಕೆ ಮಾಡಿಲ್ಲ. ಬದಲಾಗಿ ಬರೀ ಕೈನಲ್ಲಿಯೇ ಈ ಕೆಲಸ ಮಾಡಿದ್ದು ನದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಕಸ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿದ್ದಾರೆ.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ಪ್ರತಿ ನದಿ ದಂಡೆಯನ್ನು ಸ್ವಚ್ಛಗೊಳಿಸಲು ಕನಿಷ್ಠ ಮೂರು ತಿಂಗಳ ಸಮಯ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳು ಮತ್ತು ನದಿಗಳನ್ನು ಸ್ವಚ್ಛವಾಗಿಡಲು ಯಾರು ನಿಜವಾಗಿಯೂ ಜವಾಬ್ದಾರರಾಗಿರಬೇಕು? ಸ್ಥಳೀಯ ಆಡಳಿತದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಒಬ್ಬ ಯುವಕ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ, ಕಲುಷಿತ ನೀರಿನಲ್ಲೇ ಸತತವಾಗಿ ಕೆಲಸ ಮಾಡಿದ್ದರಿಂದ ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಕೆಲವರು ಅಘಾತ ವ್ಯಕ್ತಪಡಿಸಿದ್ದಾರೆ‌. ಈ ಬಗ್ಗೆ ಮಾತನಾಡಿದ ಯುವಕ ನದಿ ಸ್ವಚ್ಛಗೊಳಿಸಲು ಯಂತ್ರ ತಯಾರಿಸಲು ನನ್ನ ಬಳಿ ಹಣವಿರಲಿಲ್ಲ. ನಾನೊಬ್ಬ ವಿದ್ಯಾರ್ಥಿ, ಆದ್ದರಿಂದ ನನ್ನ ಕೈಯಲ್ಲೇ ಸ್ವಚ್ಛಗೊಳಿಸಲು ನಿರ್ಧರಿಸಿದೆ ಅವರು ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಈ ಯುವಕನ ವೀಡಿಯೊಗಳನ್ನು ಈ ಹಿಂದೆ ಆನಂದ್ ಮಹೀಂದ್ರಾ ಕೂಡ ಹೈಲೈಟ್ ಮಾಡಿ ಶ್ಲಾಘಿಸಿದ್ದರು. ಪ್ರಸ್ತುತ ಈ ಯುವಕನ ಶ್ರಮಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.