ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

Viral News: ಚಾಲಕ ನಿದ್ದೆಗೆ ಜಾರಿದ್ದರಿಂದ ಅತಿವೇಗವಾಗಿ ಬಂದ ಉಬರ್ ಕಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಸವಾರನನ್ನು ಕಾರಿನ ಚಕ್ರಗಳ ಅಡಿಯಲ್ಲಿ ಅರ್ಧ ಕಿ‌..ಮೀ.ವರೆಗೆ ಎಳೆದೊಯ್ದಿದ್ದಾನೆ‌. ಪೊಲೀಸರ ಪ್ರಕಾರ ಚಾಲಕ ನಿದ್ರಿಸಿದ್ದರಿಂದ ವಾಹನದ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ‌. ಆರೋಪಿಯನ್ನು ಆದಿಲ್ ತಸ್ಲಿಮ್ ಅನ್ಸಾರಿ ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಬೈಕ್ ಸವಾರನನ್ನು ಅರ್ಧ ಕಿ.ಮೀ. ದೂರ ಎಳೆದೊಯ್ದ ಉಬರ್ ಚಾಲಕ

ಸಾಂದರ್ಭಿಕ ಚಿತ್ರ -

Profile
Pushpa Kumari Jul 28, 2026 6:41 PM

ಮುಂಬೈ, ಜು. 28: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಉಬರ್ ಚಾಲಕ ನಿದ್ದೆಗೆ ಜಾರಿದ್ದರಿಂದ ಅತಿವೇಗವಾಗಿ ಬಂದ ಕಾrff ಬೈಕ್‌ಗೆ ಡಿಕ್ಕಿ ಹೊಡೆದಿದೆ ಅಲ್ಲದೆ ಸವಾರನನ್ನು ಕಾರಿನ ಚಕ್ರಗಳ ಅಡಿಯಲ್ಲಿ ಅರ್ಧ ಕಿ‌.ಮೀ.ವರೆಗೆ ಎಳೆದೊಯ್ದಿದ್ದಾನೆ‌. ಪೊಲೀಸರ ಪ್ರಕಾರ ಚಾಲಕ ನಿದ್ರಿಸಿದ್ದರಿಂದ ಕಾರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಆರೋಪಿಯನ್ನು ಆದಿಲ್ ತಸ್ಲಿಮ್ ಅನ್ಸಾರಿ ಎಂದು ಗುರುತಿಸಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಚಾಲಕ MH 01 FE 5919 ನೋಂದಣಿ ಸಂಖ್ಯೆಯನ್ನು ಹೊಂದಿರುವ ಟೊಯೋಟಾ ಹೈಲ್ಯಾಂಡರ್ ಕಾರ್‌ ಚಾಲನೆ ಮಾಡುತ್ತಿದ್ದ. ಈ ಕಾರು ಉಬರ್‌ನಲ್ಲಿ ನೋಂದಾಯಿಸಲ್ಪಟ್ಟಿದೆ. ಅಪಘಾತದ ನಂತರ ಬೈಕ್ ಚಾಲಕ ಕಾರಿನ ಮುಂಭಾಗದ ಚಕ್ರದ ಅಡಿಯಲ್ಲಿ ಸಿಲುಕಿದ್ದು ತಿಳಿದಿದ್ದರೂ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:

ಈ ಘಟನೆ ನೋಡಿದ ಇತರ ವಾಹನ ಸವಾರರು ಕಾರನ್ನು ನಿಲ್ಲಿಸುವಂತೆ ಬೇಡಿಕೊಂಡರು ಚಾಲಕ ಅರ್ಧ ಕಿ.ಮೀ.ವರೆಗೆ ಕಾರನ್ನು ಓಡಿಸಿ ಪರಾರಿಯಾಗಲು ಮುಂದಾಗಿದ್ದಾನೆ‌. ಆರಂಭದಲ್ಲಿ ಚಾಲಕ ಮದ್ಯ ಸೇವಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯು ಸೇವನೆ ಮಾಡದಿರುವ ಬಗ್ಗೆ ದೃಢ ಪಡಿಸಿದೆ.

ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ ಚಾಲಕ, ಚಾಲನೆ ಮಾಡುವಾಗಲೇ ನಿದ್ರೆಗೆ ಜಾರಿದ್ದರಿಂದ ಕಾರ್‌ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕರ್‌ಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡು ಎರಡು ಗಂಟೆಗಳಲ್ಲಿ ಚಾಲಕನನ್ನು ಬಂಧಿಸಿದ್ದಾರೆ. ಈ ಘಟನೆ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.