ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 45 ಅಡಿ ಎತ್ತರದ ನಗ್ನ ಮಹಿಳೆ ಶಿಲ್ಪ ಲೋಕಾರ್ಪಣೆ; ಇದರ ವಿಶೇಷತೆ ಕೇಳಿದ್ರೆ ನೀವೂ ಬೆರಗಾಗ್ತೀರಾ!

ಸ್ಯಾನ್ ಫ್ರಾನ್ಸಿಸ್ಕೋದ ಎಂಬಾರ್ಕಾಡೆರೊ ಪ್ಲಾಜಾದಲ್ಲಿ "ಆರ್-ಎವಲ್ಯೂಷನ್" ಎಂದು ಕರೆಯಲ್ಪಡುವ 45 ಅಡಿ ಎತ್ತರದ ನಗ್ನ ಮಹಿಳೆಯ ಉಕ್ಕಿನ ಪ್ರತಿಮೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಸುಮಾರು 32,000 ಪೌಂಡ್ ತೂಕವಿರುವ ಈ ಶಿಲ್ಪವು ನಗರದ ಫೆರ್ರಿ ಕಟ್ಟಡದ ಮುಂದೆ ಆರು ತಿಂಗಳ ಕಾಲ ನಿಲ್ಲುತ್ತದೆ ಮತ್ತು ಒಂದು ವರ್ಷದವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ವಾಷಿಂಗ್ಟನ್‌: ಸ್ಯಾನ್ ಫ್ರಾನ್ಸಿಸ್ಕೋದ ಎಂಬಾರ್ಕಾಡೆರೊ ಪ್ಲಾಜಾದಲ್ಲಿ ಹೊಸ ಶಿಲ್ಪಕಲೆಯೊಂದನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ 45 ಅಡಿ ಎತ್ತರದ ನಗ್ನ ಮಹಿಳೆಯ ಉಕ್ಕಿನ ಪ್ರತಿಮೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. "ಆರ್-ಎವಲ್ಯೂಷನ್" ಎಂದು ಕರೆಯಲ್ಪಡುವ ಈ ಶಿಲ್ಪವು ಮಹಿಳಾ ಸಬಲೀಕರಣ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಕಲಾವಿದ ಮಾರ್ಕೊ ಕೊಕ್ರೇನ್ ರಚಿಸಿದ ಈ ಶಿಲ್ಪವನ್ನು ಏಪ್ರಿಲ್ 10 ರಂದು ಅನಾವರಣಗೊಳಿಸಲಾಯಿತ. ಇನ್ನು ಪ್ರತಿಮೆಯ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಅಲತಾಣದಲ್ಲಿ ವೈರಲ್(Viral News) ಆಗುತ್ತಿವೆ.

ಮೂಲತಃ 2015 ರಲ್ಲಿ ಲಾಸ್ ವೇಗಾಸ್‍, ಪೆಟಲಿಮಾ ಮತ್ತು ಬರ್ನಿಂಗ್ ಮ್ಯಾನ್ ಉತ್ಸವದಲ್ಲಿ ಈ 'ಆರ್-ಎವಲ್ಯೂಷನ್' ಅನ್ನು ಪ್ರದರ್ಶಿಸಲಾಗಿದೆ. ಇದನ್ನು 55,000 ಸ್ಟೀಲ್ ರಾಡ್ ಮತ್ತು ಟ್ಯೂಬಿಂಗ್‍ನಿಂದ ಯೋಡೆಸಿಕ್ ತ್ರಿಕೋನಗಳಲ್ಲಿ ಜೋಡಿಸಲಾಗಿದೆ. ಇದು ಸುಮಾರು 32,000 ಪೌಂಡ್ ತೂಕವಿದೆ. ಇನ್ನೂ ವಿಶೇಷವೆಂದರೆ ಪ್ರತಿದಿನ ಒಂದು ಗಂಟೆ ಉಸಿರಾಡುವಂತೆ ಕಾಣುತ್ತದೆ ಮತ್ತು ರಾತ್ರಿಯಲ್ಲಿ ಹೊಳೆಯುತ್ತದೆ.



ಈ ಶಿಲ್ಪವನ್ನು ಶುರುವಿನಲ್ಲಿ ಯೂನಿಯನ್ ಸ್ಕ್ವೇರ್‌ನಲ್ಲಿ ಸ್ಥಾಪಿಸಲು ಯೋಜಿಸಲಾಗಿತ್ತು. ಆದರೆ ಶಿಲ್ಪದ ತೂಕಕ್ಕೆ ಪ್ಲಾಜಾದ ಹೆಂಚಿನ ಮೇಲ್ಮೈ ಹಾನಿಗೊಳಗಾಗಬಹುದು ಎಂಬ ಕಾಳಜಿಯಿಂದಾಗಿ ಅದನ್ನು ಸ್ಥಳಾಂತರಿಸಲಾಯಿತು. ನಂತರ ಎಂಬಾರ್ಕಾಡೆರೊ ಪ್ಲಾಜಾವನ್ನು ಶಿಲ್ಪ ಸ್ಥಾಪನೆಗಾಗಿ ಆಯ್ಕೆ ಮಾಡಲಾಯಿತು. ಪ್ರತಿಮೆಯ ಹಿಂಭಾಗದ ತುದಿಯಲ್ಲಿ ಕೆಲಸಗಾರನೊಬ್ಬ "ಸರ್ಜಿಕಲ್ ಪ್ರೊಸಿಜರ್" ಮಾಡುವುದನ್ನು ತೋರಿಸುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದೆ.

ಕಲಾವಿದ ಮಾರ್ಕೊ ಕೊಕ್ರೇನ್ ಪ್ರಕಾರ , ಮಹಿಳೆ ಬಲಶಾಲಿಯಾಗಿ, ಜಾಗೃತಳಾಗಿ ಮತ್ತು ತಳಮಟ್ಟದಲ್ಲಿ ನಿಂತು ಎಲ್ಲಾ ಜನರು ಮುಕ್ತವಾಗಿ ಮತ್ತು ಭಯವಿಲ್ಲದೆ ನಡೆಯಬಹುದೆಂದು ಜಗತ್ತಿಗೆ ಕರೆ ನೀಡುತ್ತಾಳೆ ಎಂಬುದನ್ನು ಈ ಶಿಲ್ಪ ಸೂಚಿಸುತ್ತದೆ ಎಂಬುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪರೀಕ್ಷೆಗೆ ಕೆಲವೇ ನಿಮಿಷ ಇರುವಾಗ ಹಾಲ್ ಟಿಕೆಟ್ ಕಸಿದು ಹಾರಿದ ಹದ್ದು; ಏನಿದು ವಿಚಿತ್ರ ಘಟನೆ!?

ಸ್ಯಾನ್ ಫ್ರಾನ್ಸಿಸ್ಕೋ ರಿಕ್ರಿಯೇಷನ್ ಅಂಡ್ ಪಾರ್ಕ್ಸ್ ಇಲಾಖೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಪೋರ್ಟ್‌ ಬೆಂಬಲದೊಂದಿಗೆ ಸಿಜ್ಬ್ರಾಂಡಿಜ್ ಫೌಂಡೇಶನ್ ಈ ಶಿಲ್ಪ ಸ್ಥಾಪನೆಯನ್ನು ಆಯೋಜಿಸಿದೆ. 'ಆರ್-ಎವಲ್ಯೂಷನ್' ಕೊಕ್ರೇನ್ ಅವರ 'ಬ್ಲಿಸ್ ಪ್ರಾಜೆಕ್ಟ್'ನ ಭಾಗವಾಗಿದೆ, ಇದು ಬರ್ನಿಂಗ್ ಮ್ಯಾನ್‍ನಲ್ಲಿ ಪಾದಾರ್ಪಣೆ ಮಾಡಿದ ಶಿಲ್ಪಗಳಲ್ಲಿ ಒಂದಾಗಿದ್ದು, ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ದೇಶದ ಕೆಲವು ಅತ್ಯುತ್ತಮ ಸಾರ್ವಜನಿಕ ಕಲೆಗಳಿಗೆ ನೆಲೆಯಾಗಿದೆ ಮತ್ತು ಇಲ್ಲಿ ನೂರಾರು ಆಸಕ್ತಿದಾಯಕ ಶಿಲ್ಪಗಳನ್ನು ಸ್ಥಾಪಿಸಲಾಗಿದೆ.