ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪರೀಕ್ಷೆಗೆ ಕೆಲವೇ ನಿಮಿಷ ಇರುವಾಗ ಹಾಲ್ ಟಿಕೆಟ್ ಕಸಿದು ಹಾರಿದ ಹದ್ದು; ಏನಿದು ವಿಚಿತ್ರ ಘಟನೆ!?

ಕಾಸರಗೋಡಿನ ಸರ್ಕಾರಿ ಯುಪಿ ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್‌ ಟಿಕೆಟ್‌ ಅನ್ನು ಹದ್ದೊಂದು ಕಸಿದುಕೊಂಡು ಹೋದ ಘಟನೆ ನಡೆದಿದೆ. ಕೇರಳ ಲೋಕಸೇವಾ ಆಯೋಗದ (ಪಿಎಸ್‍ಸಿ) ಪರೀಕ್ಷೆ ಬರೆಯಲು ಬಂದ ಕಾಸರಗೋಡಿನ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಶುರುವಾಗುವ ಕೆಲವೇ ನಿಮಿಷಗಳ ಮೊದಲು ಹದ್ದು ಬಂದು ಹಾಲ್ ಟಿಕೆಟ್ ಕಸಿದುಕೊಂಡು ಹೋದ ಘಟನೆ ನಡೆದಿದೆ. ಈ ವಿಡಿಯೊ ವೈರಲ್(Viral Video) ಆಗಿದೆ.

ಹಾಲ್ ಟಿಕೆಟ್ ಕಸಿದು ಹಾರಿದ ಹದ್ದು; ಏನಿದು ವಿಚಿತ್ರ ಘಟನೆ!?

Profile pavithra Apr 11, 2025 1:20 PM

ತಿರುವನಂತಪುರಂ: ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ ಎನ್ನುವಂತೆ ಕೇರಳ ಲೋಕಸೇವಾ ಆಯೋಗದ (ಪಿಎಸ್‍ಸಿ) ಪರೀಕ್ಷೆ ಬರೆಯಲು ಬಂದ ಕಾಸರಗೋಡಿನ ಅಭ್ಯರ್ಥಿಯೊಬ್ಬನ ಹಾಲ್ ಟಿಕೆಟ್ ಅನ್ನು ಹದ್ದೊಂದು ಬಂದು ಕಸಿದುಕೊಂಡು ಹೋಗಿದೆಯಂತೆ.ಪರೀಕ್ಷೆ ಶುರುವಾಗುವ ಕೆಲವೇ ನಿಮಿಷಗಳ ಮೊದಲು ಈ ವಿಚಿತ್ರವಾದ ಘಟನೆ ನಡೆದಿದೆ. ಕಾಸರಗೋಡಿನ ಸರ್ಕಾರಿ ಯುಪಿ ಶಾಲೆಯಲ್ಲಿ ಗುರುವಾರ (ಏಪ್ರಿಲ್ 10) ಬೆಳಿಗ್ಗೆ ಈ ನಾಟಕೀಯ ಘಟನೆ ನಡೆದಿದ್ದು, 300 ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಅಧಿಕಾರಿಗಳು ಇದನ್ನು ಕಂಡು ಶಾಕ್‌ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರದಿ ಪ್ರಕಾರ, ಅಭ್ಯರ್ಥಿಯು ಪರೀಕ್ಷೆಗೆ ಮುಂಚಿತವಾಗಿ ಸ್ಥಳಕ್ಕೆ ಬಂದಿದ್ದಾನಂತೆ. ಅವರು ಹಾಲ್ ಟಿಕೆಟ್ ಅನ್ನು ತನ್ನ ಪಕ್ಕದಲ್ಲಿ ಇಟ್ಟುಕೊಂಡು ಬೇರೆ ಕೆಲಸದಲ್ಲಿ ನಿರತರಾಗಿದ್ದಾನೆ. ಆ ವೇಳೆ ಹದ್ದು ಇದ್ದಕ್ಕಿದ್ದಂತೆ ಇಳಿದು ಬಂದು ಅವನ ಹಾಲ್ ಟಿಕೆಟ್ ಅನ್ನು ತನ್ನ ಕೊಕ್ಕಿನಲ್ಲಿ ಎತ್ತಿಕೊಂಡು ಹಾಲ್ ಮೇಲಿನ ಕಿಟಕಿಯ ತುದಿಗೆ ಹೋಗಿ ಕುಳಿತಿದೆ. ಅಲ್ಲಿಗೆ ಯಾರು ಹೋಗಲು ಸಾಧ್ಯವಿಲ್ಲ. ಹದ್ದಿನ ಈ ವಿಚಿತ್ರ ವರ್ತನೆಯನ್ನು ಕಂಡು ಅಲ್ಲಿದ್ದ ಸಹ ಅಭ್ಯರ್ಥಿಗಳು ಶಾಕ್‌ ಆಗಿದ್ದಾರೆ.

ಹಾಲ್‌ ಟಿಕೆಟ್‌ ಎತ್ತಿಕೊಂಡು ಹೋದ ಹದ್ದಿನ ವಿಡಿಯೊ ಇಲ್ಲಿದೆ ನೋಡಿ...



ಹದ್ದಿನ ಬಾಯಲ್ಲಿರುವ ಹಾಲ್ ಟಿಕೆಟ್ ಪಡೆಯಲು‌, ಹದ್ದಿನತ್ತ ಕಲ್ಲುಗಳನ್ನು ಎಸೆಯಲು ಅಥವಾ ಕೋಲುಗಳನ್ನು ಬಿಸಾಡಲು ಅನೇಕರು ಸಲಹೆ ನೀಡಿದ್ದಾರೆ. ಆದರೆ ಹದ್ದು ಅಲ್ಲಿಂದ ಟಿಕೆಟ್ ಸಹಿತವಾಗಿ ಹಾರಿ ಬೇರೆ ಹೋಗಬಹುದು ಎಂದು ಹೆದರಿದ್ದಾರೆ. ಈ ಘಟನೆಯಿಂದ ಪರೀಕ್ಷಾ ಹಾಲ್ ಆವರಣದಲ್ಲಿ ಉದ್ವಿಗ್ನತೆ ಹೆಚ್ಚಾಯಿತಂತೆ. ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಅಧಿಕಾರಿಗಳು ಹಾಲ್ ಟಿಕೆಟ್ ಇಲ್ಲದೆ ಯಾವುದೇ ಅಭ್ಯರ್ಥಿಗೆ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: 3 ವರ್ಷಕ್ಕೂ ಅಧಿಕ ಕಾಲ ಮಹಿಳೆಗೆ ಋತುಚಕ್ರ; ವಿಚಿತ್ರ ಸ್ಥಿತಿ ಕಂಡು ವೈದ್ಯರು ದಿಗ್ಭ್ರಮೆ!

ಕೊನೆಗೆ, ಹದ್ದು ಅನಿರೀಕ್ಷಿತವಾಗಿ ಹಾಲ್ ಟಿಕೆಟ್ ಅನ್ನು ಕೆಳಗೆ ಹಾಕಿ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅನುವು ಮಾಡಿ ಕೊಟ್ಟಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಕ್ಲಿಪ್ ಕೆಲವೇ ಗಂಟೆಗಳಲ್ಲಿ ಸಾವಿರಾರು ವ್ಯೂವ್ಸ್ ಗಳಿಸಿದೆ.