ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಂಗ್ ನಂಬರ್‌ನಿಂದ ಹುಟ್ಟಿದ ಪ್ರೀತಿ: 35 ವರ್ಷದ ಯುವಕನನ್ನು ವರಿಸಿದ 60ರ ಮಹಿಳೆ

ಬಿಹಾರದ ಬಂಕಾ ಜಿಲ್ಲೆಯಲ್ಲಿ ಅಪರೂಪದ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. 60 ವರ್ಷದ ಮಹಿಳೆಯೊಬ್ಬಳು ತನ್ನ ಅರ್ಧದಷ್ಟು ವಯಸ್ಸಿನ - 35 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

60 ವರ್ಷದ ಮಹಿಳೆಯನ್ನು ವರಿಸಿದ 35ರ ಯುವಕ

ಪಾಟ್ನಾ, ಜ. 14: ಪ್ರೀತಿ ಎನ್ನುವುದು ಒಂದು ‌ಆಳವಾದ ಸಂಬಂಧ. ಯಾವಾಗ, ಯಾವ ವಯಸ್ಸಿನಲ್ಲಿ ಪ್ರೀತಿ ಆಗಬಹುದು ಎಂದೂ ಕಲ್ಪನೆ ಮಾಡಲು ಕೂಡ ಅಸಾಧ್ಯ. ಅದರಲ್ಲೂ ಡಿಜಿಟಲ್ ಜಗತ್ತಿನಲ್ಲಿ ಪ್ರೀತಿ -ಪ್ರೇಮ ಸಂಬಂಧಗಳು ಮೀತಿ ಮೀರಿ ಹೋಗಿವೆ.‌ ಇದಕ್ಕೆ ಸಾಕ್ಷಿ ಎಂಬಂತೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಅಪರೂಪದ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. 60 ವರ್ಷದ ಮಹಿಳೆಯೊಬ್ಬಳು ತನ್ನ ಅರ್ಧದಷ್ಟು ವಯಸ್ಸಿನ - 35 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ವರದಿಯ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ರಾಂಗ್ ನಂಬರ್ ಫೋನ್ ಕರೆಯಿಂದ ಈ ಇಬ್ಬರ ನಡುವೆ ಪರಿಚಯವಾಗಿ ಬಳಿಕ ಮಾತನಾಡಲು ಆರಂಭಿಸಿದರು. ದಿನ ಕಳೆದಂತೆ ಇವರಿಬ್ಬರ ಸಂಬಂಧ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಭಾಗಲ್ಪುರ್ ರೈಲು ನಿಲ್ದಾಣದಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿಕೊಂಡರು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವಾದರು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

60 ವರ್ಷದ ಮಹಿಳೆ ವಕೀಲ್ ಮಿಶ್ರಾ ಎಂದು ಗುರುತಿಸಲಾದ 35 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಭಾನುವಾರ ಅಮರಪುರ ಬಸ್ ನಿಲ್ದಾಣದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತು. ಆದರೆ ಈ ಸಂದರ್ಭದಲ್ಲಿ ಮಹಿಳೆಯ ಪತಿ ಮತ್ತು ಮಗನ ಕಣ್ಣಿಗೆ ಇವರಿಬ್ಬರು ಬಿದ್ದಿದ್ದಾರೆ. ತನ್ನ ಪತ್ನಿ ಬೇರೆ ವ್ಯಕ್ತಿಯೊಂದಿಗೆ ಇರುವುದನ್ನು ಕಂಡು ಕೋಪ ತಾಳಲಾರದೇ ಪತಿ ಮತ್ತು ಮಗ ಆತನಿಗೆ ಸರಿಯಾಗಿ ಥಳಿಸಿದ್ದಾರೆ.

ಸೊಸೆಯ ಹೆರಿಗೆ ಸಂದರ್ಭ ಅಮಾನವೀಯವಾಗಿ ವರ್ತಿಸಿದ ಅತ್ತೆ

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯೂ ಅಳುತ್ತ ವಕೀಲ್ ಮಿಶ್ರಾನನ್ನು ಬಿಗಿದಪ್ಪಿ ಕೊಂಡಿರುವುದು ಕಂಡುಬಂದಿದೆ. ʼʼಇವರು ನನ್ನ ಪತಿ. ನಾನು ಅವರನ್ನು ಇಷ್ಟಪಟ್ಟು ಮತ್ತು ಸಂತೋಷದಿಂದ ಮದುವೆಯಾಗಿದ್ದೇನೆʼʼ ಎಂದು ಹೇಳುವುದು ಕೇಳಿಸುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಹಿಂಸಾಚಾರವನ್ನು ತಡೆಯಲು ಸ್ಥಳೀಯರು ಮಧ್ಯ ಪ್ರವೇಶಿಸಿದ್ದು ಸುರಕ್ಷತೆಗಾಗಿ ಅವರನ್ನು ಅಮರಪುರ ಪೊಲೀಸ್ ಠಾಣೆಗೆ ಕರೆದೊಯ್ದರು.

ಕುಟುಂಬಸ್ಥರು ಈ ಸಂಬಂಧವನ್ನು ಒಪ್ಪದೆ ಇದ್ದರೂ ಮಹಿಳೆ ಮಾತ್ರ ತಾನು ಇದೇ ಯುವಕನೊಂದಿಗೇ ಇರುವುದಾಗಿ ಪಟ್ಟು ಹಿಡಿದಿದ್ದಾಳೆ. ಸದ್ಯ ಪೊಲೀಸರು ಈ ಪ್ರಕರಣದ ಕಾನೂನು ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಬ್ಬರು ಪ್ರೀತಿಗೆ ವಯಸಿಲ್ಲ. ನಿಜ, ಆದರೆ ಈ ದೃಶ್ಯ ನೋಡಿದ ಪತಿಗೆ ಹೇಗಾಗಿರಬೇಡ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಒಂದು ರಾಂಗ್ ನಂಬರ್ ಕಾಲ್ ಮದುವೆವರೆಗೆ ಹೋಯಿತೆ? ಪ್ರಪಂಚದಲ್ಲಿ ಇಂತಹ ಜನಗಳು ಇದ್ದರಾ ಎಂದು ಪ್ರಶ್ನಿಸಿದ್ದಾರೆ.