ಲಖನೌ: 65 ವರ್ಷದ ದಲಿತ ವ್ಯಕ್ತಿಯೊಬ್ಬರನ್ನು ದೇವಸ್ಥಾನದೊಳಗೆ ಅವಮಾನಿಸಿ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋದ ಬಳಿಯ ಕಾಕೋರಿ ಪಟ್ಟಣದಲ್ಲಿ ನಡೆದಿದೆ. ಶೀತ್ಲಾ ಮಾತಾ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅನಾರೋಗ್ಯದಿಂದಾಗಿ ವೃದ್ಧ ವ್ಯಕ್ತಿ ಸ್ಥಳದಲ್ಲೇ ಮೂತ್ರ ಮಾಡಿಕೊಂಡರು ಎನ್ನಲಾಗಿದೆ. ಇದನ್ನು ನೋಡಿದ ಸ್ಥಳೀಯ ನಿವಾಸಿಯೊಬ್ಬ ಆತನಿಗೆ ಬಲವಂತವಾಗಿ ಮೂತ್ರ ನೆಕ್ಕುವಂತೆ ಮಾಡಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (Viral News).
ಹತಾ ಹಜರತ್ ಸಾಹಬ್ ನಿವಾಸಿಯಾಗಿರುವ ವೃದ್ಧ ವ್ಯಕ್ತಿಯು ದೀರ್ಘಕಾಲದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಸೋಮವಾರ, ದೇವಾಲಯದಲ್ಲಿದ್ದಾಗ ಅವರು ಆಕಸ್ಮಿಕವಾಗಿ ಆವರಣದ ಬಳಿ ಮೂತ್ರ ವಿಸರ್ಜನೆ ಮಾಡಿದರು. ಘಟನೆಯನ್ನು ಗಮನಿಸಿದ ಸ್ಥಳೀಯ ನಿವಾಸಿ ಸ್ವಾಮಿಕಾಂತ್ ಅಲಿಯಾಸ್ ಪಮ್ಮು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು.
ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಆರೋಪಿ ರಾಂಪಾಲ್ ವೃದ್ಧನ ಮೇಲೆ ನಿಂದನೆ ಮಾಡಿ, ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿದರು. ಪ್ರದೇಶವನ್ನು ಶುದ್ಧೀಕರಿಸುವ ನೆಪದಲ್ಲಿ ಮೂತ್ರ ನೆಕ್ಕುವಂತೆ ಮಾಡಲಾಗಿದೆ. ಪ್ರದೇಶವನ್ನು ಶುದ್ಧೀಕರಿಸಲು ನೀರು ಹಾಕುವ ಬದಲು ಸಂತ್ರಸ್ತ ವೃದ್ಧ ವ್ಯಕ್ತಿಯ ಬಳಿ ನೆಲ ಒರೆಸುವಂತೆ ಒತ್ತಾಯಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ:
ಅಷ್ಟೇ ಅಲ್ಲ, ಅಲ್ಲಿ ನೆರೆದಿಗ್ಗ ಜನರ ಮುಂದೆಯೇ ವೃದ್ಧನ ಮೇಲೆ ರಾಂಪಾಲ್ ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಜಾತಿ ಹೆಸರು ಹೇಳಿ ನಿಂದಿಸಿದ್ದಾನೆ. ಇದರಿಂದ ಅವಮಾನಿತರಾದ ವೃದ್ಧ ವ್ಯಕ್ತಿ ಮತ್ತಷ್ಟು ಕುಗ್ಗಿ ಹೋದರು. ಘಟನೆಯ ನಂತರ, ಸಂತ್ರಸ್ತೆ ಕಾಕೋರಿ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಪಿ ಕಾಕೋರಿ ಶಕೀಲ್ ಅಹ್ಮದ್ ದೃಢಪಡಿಸಿದ್ದಾರೆ.
ಇದನ್ನೂ ಓದಿ: Viral Video: ಬಿಕಿನಿ ತೊಟ್ಟು ಗಂಗಾ ನದಿಯಲ್ಲಿ ಸ್ನಾನ ಮಾಡಿದ ಮಹಿಳೆ; ನೆಟ್ಟಿಗರಿಂದ ಕ್ಲಾಸ್
ಸಂತ್ರಸ್ತರ ದೂರಿನ ಆಧಾರದ ಮೇಲೆ, ಐಪಿಸಿಯ ಸಂಬಂಧಿತ ವಿಭಾಗಗಳು ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆ
ಇದೇ ರೀತಿಯ ಪ್ರಕರಣದಲ್ಲಿ, ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ 25 ವರ್ಷದ ದಲಿತ ವ್ಯಕ್ತಿಯನ್ನು ಅಪಹರಿಸಿ, ಹಲ್ಲೆ ಮಾಡಿ, ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ಆರೋಪಿಗಳು ಆತನನ್ನು ಗ್ವಾಲಿಯರ್‌ನಿಂದ ಅಪಹರಿಸಿ ವಾಹನದಲ್ಲಿ ಭಿಂಡ್‌ಗೆ ಕರೆತಂದು ಥಳಿಸಿ ಅವಮಾನಿಸಿದ್ದಾರೆ. ಸಂತ್ರಸ್ತ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಠಕ್ ದೃಢಪಡಿಸಿದ್ದಾರೆ.